Lakshmi Baramma : ಕೀರ್ತಿಗೆ ಖಡಕ್ ವಾರ್ನಿಂಗ್ ಕೊಟ್ಟ ಲಕ್ಷ್ಮೀ : ಆದ್ರೆ ಜನ ಕೀರ್ತಿಗೆ ಮೋಸ ಆಗಿದೆ ಅಂತಿದ್ದಾರೆ!

First Published | Feb 28, 2024, 4:55 PM IST

ಲಕ್ಷ್ಮೀ ಬಾರಮ್ಮ ಸೀರಿಯಲ್ ನಲ್ಲಿ ಇತಿ ಮಿತಿ ಇಲ್ಲದೇ ಪದೇ ಪದೇ ತನ್ನ ಗಂಡನ ಬಳಿ ಬರೋ ಕೀರ್ತಿಗೆ ಲಕ್ಷ್ಮೀ ಖಡಕ್ ವಾರ್ನಿಂಗ್ ಕೊಟ್ಟು ಲಕ್ಷಣ ರೇಖೆ ಎಳೆದಿದ್ದಾಳೆ. ಆದರೆ ಜನರು ಮಾತ್ರ ಕೀರ್ತಿಗೆ ಮೋಸ ಆಗಿದೆ ಅಂತಿದ್ದಾರೆ. 
 

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ (Lakshmi Baramma) ಸೀರಿಯಲ್ ನಲ್ಲಿ ಸದ್ಯ ವೈಷ್ಣವ್ ತಲೆಗೆ ಪೆಟ್ಟು ಬಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ, ಆತನಿಗಾಗಿ ಒಂದು ಕಂಡೆ ಹೆಂಡತಿ ಲಕ್ಷ್ಮೀ ಪೂಜೆ, ವೃತ ಮಾಡುತ್ತಿದ್ದರೆ, ಇನ್ನೊಂದು ಕಡೆ ಕೀರ್ತಿಯೂ ವೈಷ್ಣವ್ ಜೀವ ಉಳಿಯಲು ಏನೇನೊ ಮಾಡುತ್ತಿದ್ದಾಳೆ. 
 

ಕೀರ್ತೀ ಕೇವಲ ವೈಷ್ಣವ್ ಫ್ರೆಂಡ್ ಮಾತ್ರ ಎಂದು ಅಂದ್ಕೊಡಿರೋ ಲಕ್ಷ್ಮಿ ಗೆ ಮಾತ್ರ ಕೀರ್ತಿಯ ವಿಚಿತ್ರ ನಡೆ ಹಿಡಿಸುತ್ತಿಲ್ಲ, ಹಾಗಾಗಿ ಕೀರ್ತಿಯ ಎದುರಲ್ಲೇ ನಿಂತು ಆಕೆಗೆ ಎಷ್ಟು ಲಿಮಿಟ್ ನಲ್ಲಿ ಇರಬೇಕು ಎಂದು ಲಕ್ಷ್ಮೀ ಖಡಕ್ ವಾರ್ನಿಂಗ್ (warning) ಕೊಟ್ಟು ಲಕ್ಷಣ ರೇಖೆ ಎಳೆದಿದ್ದಾಳೆ. 
 

Tap to resize

ನೀವು ಮನೆಗೆ ಬರ್ತೀರಾ ಬನ್ನಿ, ಅಡುಗೆ ಮನೆಯಲ್ಲಿ ಓಡಾಡಿ ತಿಂತೀರಾ ತಿನ್ನಿ, ದೇವರಿಗೆ ದೀಪ ಹಚ್ಚುತ್ತೀರಾ, ಅದನ್ನು ಮಾಡಿ, ನಮ್ಮ ಮನೆಯವರ ಜೊತೆ ಸಲಿಗೆ ಬೇಕಾ ಅದನ್ನು ತೆಗೋಳಿ. ನಿಮಗೂ ಮನೆಯಲ್ಲಿ ಒಂಟಿಯಾಗಿದ್ದು ಬೋರ್ ಆಗ್ತಿದೆ ಅಲ್ವಾ? ಆದ್ರೆ ಬೆಡ್ ರೂಮ್ ಮಾತ್ರ ನಂದು, ನನ್ನ ಗಂಡಂದು ಅಲ್ಲಿಗೆ ನಿಮಗೆ ಎಂಟ್ರಿ ಇಲ್ಲ ಅಂದೇ ಬಿಡ್ತಾಳೆ ಲಕ್ಷ್ಮೀ. 
 

ನಮ್ಮ ಬೆಡ್ ರೂಮ್ ಕಡೆ ಬರೋದೆ ಬೇಡ, ಒಂದುವೇಳೆ ಬಂದ್ರೂ ಬಾಗಿಲು ತಟ್ಟಿ ಒಳಗೆ ಬರಬಹುದಾ ಅಂತಾ ಕೇಳೋ ಮ್ಯಾನರ್ಸ್ ಇರಲಿ. ಮದುವೆಯಾದ ಮೇಲೆ ತಾಯಿಗೆ ಬೆಡ್ ರೂಮ್ ಗೆ ಬರೋಕೆ ಅವಕಾಶ ಇಲ್ಲ, ಅಂತಾದ್ರಲ್ಲಿ ನಿಮ್ಮ ಬೆಸ್ಟ್ ಫ್ರೆಂಡ್ ಗೆ (best friend) ಮದ್ವೆ ಆಗಿ, ಅವನ ಹೆಂಡ್ತಿ ಬಂದಮೇಲೆ, ಸಂಸಾರ ಶುರುವಾದ್ಮೇಲೆ ನೀವು ದೂರ ನಿಲ್ಲಬೇಕು ಎಂದು ಖಡಕ್ ಎಚ್ಚರಿಕೆ ಕೊಟ್ಟಿದ್ದಾಳೆ. 
 

ಲಕ್ಷ್ಮೀಯ ಈ ಖಡಕ್ ವಾರ್ನಿಂಗ್ ನೋಡಿ ಹಲವರು ವಾವ್ ಲಕ್ಷ್ಮೀ (Lakshmi) ಇದು ಆಗಬೇಕಿದ್ದೇ ಕೀರ್ತಿಗೆ, ಲಕ್ಷ್ಮೀ ರಾಕ್, ಕೀರ್ತಿ ಶಾಕ್, ಕೊನೆಗೂ ಲಕ್ಷ್ಮೀಗೆ ಬುದ್ದಿ ಬಂತಲ್ಲ ಎಂದು ಹೇಳಿದರೆ, ಹಲವು ಜನ ಕೀರ್ತಿಗೆ ಬೆಂಬಲ ನೀಡಿ ಕಾಮೆಂಟ್ ಮಾಡಿದ್ದಾರೆ. 
 

ಹಾಗೇ ನೋಡಿದ್ರೆ ಕೀರ್ತಿ (Keerthi) ನಿಜವಾಗಿಯೂ ವೈಷ್ಣವ್ ನ ಪ್ರೀತಿ. ಕಾವೇರಿಯ ಮೋಸದಾಟದಿಂದ ವೈಷ್ಣವ್ ಲಕ್ಷ್ಮೀನ ಮದುವೆ ಆಗುವಂತೆ ಆಗಿದೆ. ಹಾಗಾಗಿ ಜನರು ಕೀರ್ತಿಗೆ ಬೆಂಬಲ ಸೂಚಿಸುತ್ತಿದ್ದು, ಕೀರ್ತಿಗೆ ಮೋಸ ಆಗಿದೆ. ಪಾಪ... ಇಷ್ಟ ಪಟ್ಟ ಹುಡುಗನ್ನ ಬಿಟ್ಟು ಕೊಟ್ಟಿದ್ದಾಳೆ. ಇಲ್ಲಿ ನಿಜವಾಗಿಯೂ ಮೋಸ ಆಗಿರೋದು ಕೀರ್ತಿಗೆ ಎಂದಿದ್ದಾರೆ. 
 

ಮತ್ತೊಬ್ಬರು ಪಾಪ ಲಕ್ಷ್ಮಿಗೆ ಏನು ಗೊತ್ತು ಅವಳ ಮದುವೆ ಕೀರ್ತಿ ಹಾಕಿದ ಬಿಕ್ಷೆ ಅಂತ. ಈಗ ಹೆಂಡತಿಗಿರಿ ಪ್ರದರ್ಶಿಸುತ್ತಿದ್ದಾರೆ. ವೈಷ್ಣವ್ ಹೃದಯದಲ್ಲಿ ಇರೋದು ಕೀರ್ತಿ ಮಾತ್ರ, ಕೀರ್ತಿನೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈಷ್ಣವ್ (Vaishnav) ಪ್ರಾಣ ಉಳಿಸಿದ್ದು, ಕಾವೇರಿಯಿಂದಾಗಿ ಕೀರ್ತಿಗೆ ಮೋಸ ಆಯ್ತು ಎಂದೆಲ್ಲಾ ಹೇಳಿದ್ದಾರೆ. 
 

Latest Videos

click me!