ಭವ್ಯಾ ಗೌಡ ಬರ್ತಡೇ; ವಾರೇ ವಾ ಪಾರ್ಟಿಯಲ್ಲಿ ಗೀತಾ- ಚಾರು ಮಿಂಚುತ್ತಿರೋದು ನೋಡಿ!

First Published | Feb 28, 2024, 3:30 PM IST

ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಸಿಕೊಂಡ ಗೀತಾ. ಎಲ್ಲಿ ನಡೆಯಿತ್ತು ಪಾರ್ಟಿ ಅನ್ನೋದೆ ನೆಟ್ಟಿಗರ ಚಿಂತೆ. 

ಕಲರ್ಸ್ ಕನ್ನಡ ಜನಪ್ರಿಯ ಸೀರಿಯಲ್‌ ಗೀತಾ ಪಾತ್ರಧಾರಿ ಭವ್ಯಾ ಗೌಡ ಈ ವರ್ಷ ಹುಟ್ಟುಹಬ್ಬವನ್ನು ಸ್ಪೆಷಲ್ ಆಗಿ ಆಚರಿಸಿಕೊಂಡಿದ್ದಾರೆ.

ಗೀತಾ ಬರ್ತಡೇಯನ್ನು ಮತ್ತಷ್ಟು ಸ್ಪೆಷಲ್ ಮಾಡಿದ್ದು ಧನುಷ್ ಉರ್ಫ್ ವಿಜಯ್ ಮತ್ತು ಚಾರು ಉರ್ಫ್‌ ಮೌನ ಗುಡ್ಡೆಮನೆ ಹಾಗೂ ನಿರ್ದೇಶಕ ರಾಮಜೀ.

Tap to resize

ಬರ್ತಡೇ ರಾತ್ರಿ ಹೀಗಿತ್ತು ಎಂದು ಗೀತಾ ಫೋಟೋ ಹಾಕಿದ್ದಾರೆ. ನೀಲಿ ಬಣ್ಣದ ಟಾಪ್‌ ಮತ್ತು ಬ್ಲ್ಯಾಕ್ ಪ್ಯಾಂಟ್‌ನಲ್ಲಿ ಭವ್ಯಾ ಮಿಂಚಿದ್ದಾರೆ.

ಭವ್ಯಾ ಬರ್ತಡೇ ಆಚರಿಸಿಕೊಳ್ಳುತ್ತಿದ್ದರೂ ಮಿಂಚುತ್ತಿರುವುದು ಚಾರುನೇ. ಕ್ರೀಮ್‌ ಬಣ್ಣದ ಟಾಪ್‌ಗೆ ಕಪ್ಪು ಬಣ್ಣದ ಸ್ಕರ್ಟ್‌ ಧರಿಸಿದ್ದಾರೆ.

ಗೀತಾ ಸೀರಿಯಲ್ ಮತ್ತು ರಾಮಚಾರಿ ಸೀರಿಯಲ್‌ಗೆ ಆಕ್ಷನ್ ಕಟ್ ಹೇಳುತ್ತಿರುವುದು ರಾಮ್‌ಜೀ. ಹೀಗಾಗಿ ರಾಮ್‌ ಎಲ್ಲರಿಗೂ ಕ್ಲೋಸ್.

'ಭೂ..ನೀನು ಅಂದುಕೊಂಡಿರುವುದು ಎಲ್ಲಾ ಆಗಲಿ. ಆದಷ್ಟು ಬೇಗ ಸಿಲ್ವರ್ ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳಬೇಕು' ಎಂದು ಧನುಷ್ ವಿಶ್ ಮಾಡಿದ್ದಾರೆ.

'ದೊಡ್ಡ ಹೀರೋಯಿನ್ ಆದ್ಮೇಲೆ ನಮ್ಮನ್ನು ಮರೆಯಬೇಡ' ಎಂದು ಭವ್ಯಾ ಜೊತೆ ಸೆರೆ ಹಿಡಿದಿರುವ ಪ್ರತಿಯೊಂದು ವಿಡಿಯೋ ಧನುಷ್ ಅಪ್ಲೋಡ್ ಮಾಡಿದ್ದಾರೆ.

Latest Videos

click me!