ನೀತು ಹುಟ್ಟಿದ್ದು ಗದಗದ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ. ಎಲ್ಲ ಟ್ರಾನ್ಸ್ ಜೆಂಡರ್ ಗಳಂತೆ ಇವರು ಗಂಡಾಗಿ ಹುಟ್ಟಿದ್ದು. ಬಾಲ್ಯದ ಹೆಸರು ಮಂಜುನಾಥ್. ಏಳನೇ ಕ್ಲಾಸ್‌ವರೆಗೆ ಎಲ್ಲ ಸರಿ ಇತ್ತು. ಆದರೆ ಏಳನೇ ಕ್ಲಾಸಿಗೆ ಬಂದಾಗ ತಾನು ಉಳಿದ ಹುಡುಗರಂತೆ ಅಲ್ಲ, ತಾನು ಬೇರೆ ಅನಿಸತೊಡಗಿತು.
26
ತನ್ನ ಶರೀರದೊಳಗೆ ತಾನೇ ಬಂಧಿಯಾದಂಥಾ ಭಾವನೆ. ಪ್ರೌಢಾವಸ್ಥೆಯಲ್ಲಿ ಇವರ ಸ್ನೇಹಿತರೆಲ್ಲ ಹುಡುಗಿಯರ ಕನಸು ಕಾಣುತ್ತಿದ್ದರೆ ಇವರಿಗೆ ಹುಡುಗಿಯರಂತೆ ಬದುಕೋದು, ಅವರಂತೆ ಡ್ರೆಸ್, ಮೇಕಪ್ ಮಾಡಿಕೊಳ್ಳೋದು ಇಷ್ಟ ಆಗ್ತಿತ್ತು.
36
ಸದ್ಯಕ್ಕೀಗ ನೀತು ಟ್ಯಾಟೂ ಆರ್ಟಿಸ್ಟ್ ಆಗಿ ಗುರುತಿಸಿಕೊಂಡಿದ್ದಾರೆ. ಇನ್ನೊಂದೆಡೆ ಉತ್ತರ ಕರ್ನಾಟಕ ತಿನಿಸುಗಳ 'ಗಮ ಗಮ' ಅನ್ನೋ ಹೊಟೇಲ್ ಶುರು ಮಾಡೋ ಮೂಲಕ ಹೊಟೇಲ್ ಉದ್ಯಮಿ ಆಗಿದ್ದಾರೆ. ಜೊತೆಗೆ ಮಾಡೆಲಿಂಗ್‌ನಲ್ಲಿ, ಬ್ಯೂಟಿ ಪೇಟೆಂಟ್ ಗಳಲ್ಲಿ ಗುರುತಿಸಿಕೊಂಡಿದ್ದಾರೆ.
46
ಬಿಗ್ ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಸಿ ನಂತರ ನೀತು ಜನಪ್ರಿಯತೆ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಸೆಲ್ಫಿಆಂಡ್ ಆಟೋಗ್ರಾಫ್ ಕೇಳುವ ಜನರು ಹೆಚ್ಚಾಗಿದ್ದಾರೆ.
56
ಕೆಲವು ದಿನಗಳ ಹಿಂದೆ ನೀತು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಬರ್ತಡೇ ಪಾರ್ಟಿಯಲ್ಲಿ ಬಿಗ್ ಬಾಸ್ ಇನ್ನಿತರ ಸ್ಪರ್ಧಿಗಳು ಭಾಗಿಯಾಗಿದ್ದರು.
66
ನೀತು ಎರಡು ಮೂರು ಸಲ ಬರ್ತಡೇ ಸೆಲೆಬ್ರೇಟ್ ಮಾಡಿದ್ದಾರೆ. ಮೂರ್ನಾಲ್ಕು ಕೇಕ್‌ಗಳನ್ನು ಕಟ್ ಮಾಡಿದ್ದಾರೆ. ಫೋಟೋ ಸಖತ್ ವೈರಲ್ ಆಗುತ್ತಿದೆ.