ಕನ್ನಡ ಕಿರುತೆರೆಯಲ್ಲಿ ನಾಯಕ-ನಾಯಕರಷ್ಟೇ ಹೈಲೈಟ್ ಆಗುವ ಪಾತ್ರ ಅಂದ್ರೆ ಅದು ವಿಲನ್ ಗಳ ಪಾತ್ರ. ಅದರಲ್ಲೂ ಲೇಡಿ ಡಾನ್ ಗಳ ಕೈಚಳಕ ಬಲು ಜೋರಾಗಿಯೇ ಇದೆ. ಇವರಲ್ಲಿ ನಿಮ್ಮ ಮೆಚ್ಚಿನವರು ಯಾರು?
ಕನ್ನಡ ಕಿರುತೆರೆಯಲ್ಲಿ ಅದು ಜೀ ಕನ್ನಡ ಇರಬಹುದು, ಉದಯ ಟಿವಿ, ಕಲರ್ಸ್ ಕನ್ನಡ, ಸ್ಟಾರ್ ಸುವರ್ಣ ಯಾವುದೇ ಇರಬಹುದು… ಹೆಚ್ಚಿನ ಸೀರಿಯಲ್ ಗಳಲ್ಲಿ ಲೇಡಿ ಡಾನ್ ಗಳೇ ಹೈಲೈಟು. ನಾಯಕ-ನಾಯಕಿಗೆ ಸೆಡ್ಡು ಹೊಡೆದು ನಟಿಸುವ ಈ ಖಳ ನಟಿಯರಲ್ಲಿ ನಿಮ್ಮ ಫೇವರಿಟ್ ಯಾರು?
28
ಶಕುಂತಲಾ (ಅಮೃತಧಾರೆ)
ಅಮೃತಧಾರೆಯ ಶಕುಂತಲಾಳಂತಹ ಖಡಕ್ ಲೇಡಿ ಡಾನ್ ಇರೋದಿಕ್ಕೆ ಸಾಧ್ಯಾನೆ ಇಲ್ಲ ಅನಿಸುತ್ತೆ. ಇದಕ್ಕೆ ವೀಕ್ಷಕರು ಸಹ ಸರಿ ಅನ್ನುತ್ತಾರೆ. ಗೌತಮ್- ಭೂಮಿಕಾ ಸೇರಿ ಆ ಮನೆಯವರಿಗೆ ದೊಡ್ಡದಾದ ಪೆಟ್ಟು ಕೊಟ್ಟು, ತನ್ನ ನೀಚ ಬುದ್ಧಿಯಿಂದ ಏನೆಲ್ಲಾ ಕೆಟ್ಟದ್ದು ಮಾಡೋದಕ್ಕೆ ಸಾಧ್ಯಾನೋ ಎಲ್ಲವನ್ನೂ ಮಾಡುತ್ತಾ ಬಂದಿದ್ದಾರೆ ಶಕುಂತಲಾ, ಆದರೆ ಮಗನ ಕಣ್ಣಿಗೆ ಮಾತ್ರ ಆಕೆ ದೇವತೆ. ಈಕೆಯ ಮುಖವಾಡ ಯಾವಾಗ ಕಳಚಿ ಬೀಳುತ್ತೋ.
38
ದೇವಿ (ನಿನಗಾಗಿ)
ಪಾತ್ರ ಪರಿಚಯವಾದಗಿನಿಂದ ದೇವಿ ಅಂದ್ರೆ ಬೆಸ್ಟ್ ತಂಗಿ ಅಂತಾನೆ ಗುರುತಿಸಿಕೊಂಡು ಬಂದಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ದೇವಿಯ ನಿಜಮುಖದ ಪರಿಚಯವಾಗುತ್ತಿದೆ. ಆಕೆ ಸೇಡು ತೀರಿಸಲು ಏನ್ ಬೇಕಾದರೂ ಮಾಡುತ್ತಾಳೆ ಅನ್ನೋದು ತಿಳಿದು ಬಂದಿದೆ. ಅಬ್ಬಬ್ಬಾ ಎಂಥಹ ವಿಲನ್ ಈಕೆ.
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ವಿಜಯಾಂಬಿಕಾ ಪಾತ್ರವೂ ಸುಂದರ ಮನೆಯನ್ನು ಮುರಿಯಲು ಮುಖ್ಯ ಕಾರಣವೂ ಆಕೆ. ಶ್ರಾವಣಿಯಿಂದ ಅಮ್ಮನನ್ನ ದೂರ ಮಾಡಿದ್ದು, ಅಪ್ಪನ ಇದ್ದೂ ಪ್ರೀತಿ ಸಿಗದಂತೆ ಮಾಡಿದ್ದು, ಇದೀಗ ಹೇಗಾದರೂ ಆಕೆಯನ್ನು ತನ್ನ ಮಗನ ಜೊತೆ ಮದುವೆ ಮಾಡಿಸಿ, ಆಸ್ತೆಯನ್ನು ಒಳ ಹಾಕುವ ಸಂಚನ್ನು ಹೊಂದಿದ್ದಾರೆ ವಿಜಯಾಂಬಿಕಾ.
58
ಶಾರ್ವರಿ (ಶ್ರೀರಸ್ತು ಶುಭಮಸ್ತು)
ಶ್ರೀರಸ್ತು ಶುಭಮಸ್ತು ಧಾರಾವಾಹಿಯ ಶಾರ್ವರಿ ಪಾತ್ರವೂ ಅಷ್ಟೆ… ತಪ್ಪುಗಳ ಮೇಲೆ ತಪ್ಪು, ಅನ್ಯಾಯದ ಮೇಲೆ ಅನ್ಯಾಯ ಮಾಡಿ, ಈಗಾಗಲೇ ಎರಡು ಜೀವಗಳನ್ನು ಕೊಂದ ಪಾಪಿ ಶಾರ್ವರಿ. ಆಕೆಯ ಸೇಡಿನ ಜ್ವಾಲೆಗೆ ತುಳಸಿ- ಮಾಧವರ ಸಂಸಾರವೇ ನುಚ್ಚು ನೂರಾಯಿತು. ಕೊನೆಗೆ ಶಾರ್ವರಿ ಜೈಲು ಪಾಲಾಗುವ ಮೂಲಕ ಸೀರಿಯಲ್ ಸುಖಾಂತ್ಯವೂ ಆಯಿತು.
68
ಬೃಂದಾ (ಭಾರ್ಗವಿ LLB)
ಅಬ್ಬಬ್ಬಾ ಭಾರ್ಗವಿ LLB ಧಾರಾವಾಹಿಯ ಬೃಂದಾ ಪಾತ್ರ ನೋಡಿದರೆ, ಎಂಥವರಿಗೂ ಕೆನ್ನೆಗೆ ಬಾರಿಸುವಂತಹ ಕೋಪ ಬರುತ್ತದೆ. ಒಳ್ಳೆಯ ಹೆಂಡತಿಯೂ ಅಲ್ಲದೇ, ಒಳ್ಳೆಯ ಮಗಳು ಆಗದೇ, ಒಳ್ಳೆಯ ಅಕ್ಕನೂ ಆಗದೇ ಎಲ್ಲರಿಗೂ ಕೆಟ್ಟದ್ದನ್ನೂ ಬಯಸುವ ಈಕೆ ನಟನೆ ಮಾತ್ರ ವಾರೆವಾ ಅನ್ನುವಷ್ಟು ಚೆನ್ನಾಗಿದೆ.
78
ರೋಹಿಣಿ (ಆಸೆ)
ಆಸೆ ಧಾರಾವಾಹಿಯ ರೋಹಿಣಿಯದ್ದು ಇನ್ನೊಂದು ಕಥೆ. ಸುಳ್ಳುಗಳಲ್ಲೇ ಮನೆಯನ್ನು ಕಟ್ಟಿ, ಆ ಸುಳ್ಳುಗಳ ಮೂಲಕವೇ ಅತ್ತೆಯನ್ನು ಬುಟ್ಟಿಗೆ ಹಾಕಿಕೊಂಡು, ಮನೆಯನ್ನೆಲ್ಲಾ ತನ್ನ ವಶಕ್ಕೆ ಮಾಡಿಕೊಳ್ಳಲು ಗಂಡನನ್ನು ದಾಳವಾಗಿ ಬಿಟ್ಟು ಸಂಚು ರೂಪಿಸುವ ಪಾತ್ರ ಈಕೆಯದ್ದು.
88
ಮಂತ್ರ (ಶಾಂತಿ ನಿವಾಸ)
ಶಾಂತಿ ನಿವಾಸದ ಮಂತ್ರಾಳದ್ದು ಸಹ ನೀಚ ಬುದ್ಧಿ, ಈಕೆಯ ನೀಚ ಬುದ್ದಿ ಎಂತದ್ದು ಅನ್ನೋದನ್ನು ವೀಕ್ಷಕರು ಈಗಾಗಲೇ ಬಲ್ಲರು. ಶಾಂತಿಯನ್ನು ಬೆಟ್ಟದಿಂದ ನೂಕಿ ಸಾಯುವಂತೆ ಮಾಡಿದ್ದೇ ಈ ಮಂತ್ರಾ, ಇನ್ನು ಏನೇನೋ ತಂತ್ರಗಳನ್ನು ಮಾಡಿ ಸುಶಾಂತನ್ನು ಬಲೆ ಬೀಳಿಸುವ ತಂತ್ರ ಈಕೆಯದ್ದು.