ಲಕ್ಷ್ಮೀ ನಿವಾಸ (Lakshmi Nivasa) ಸೀರಿಯಲ್ನಲ್ಲಿ ಈಗ ಯಾರೂ ಊಹಿಸದ ರೋಚಕ ಟ್ವಿಸ್ಟ್ ಸಿಕ್ಕಿದೆ. ಜಾಹ್ನವಿ ಬದುಕಿದ್ದಾಳೆ ಎನ್ನುವ ಸತ್ಯ ತಿಳಿಯುತ್ತಲೇ, ಆ ಸತ್ಯ ವಿಶ್ವನಿಗೆ ಗೊತ್ತು ಎನ್ನುವುದು ಸೈಕೋ ಜಯಂತ್‌ಗೆ ತಿಳಿದಿದೆ.
26
ಶ್ರದ್ಧಾಂಜಲಿ ಸಭೆ
ಇದೇ ಕಾರಣಕ್ಕೆ, ಜಾಹ್ನವಿಯ ಶ್ರದ್ಧಾಂಜಲಿ ಸಭೆಯ ನೆಪದಲ್ಲಿ ವಿಶ್ವನನ್ನು ಮಾತ್ರ ಕರೆದಿದ್ದಾನೆ. ಹೀಗೆ ಮಾತು ಮಾತಿನಲ್ಲಿ ವಿಶ್ವನ ಮೇಲೆ ರೇಗಾಡಿದ ಜಯಂತ್ ಜಾಹ್ನವಿ ಬದುಕಿರುವುದು ನನಗೆ ಗೊತ್ತಿದೆ, ಎಲ್ಲಿ ಇದ್ದಾಳೆ ಹೇಳು ಎಂದಿದ್ದಾನೆ.
36
ಪಿಸ್ತೂಲ್ನಿಂದ ಗುರಿ
ಆದರೆ ವಿಶ್ವ ನನಗೆ ಗೊತ್ತಿಲ್ಲ ಎಂದಿದ್ದಾನೆ. ಸಿಟ್ಟಿಗೆದ್ದ ಜಯಂತ್, ಪಿಸ್ತೂಲ್ ತೆಗೆದು ವಿಶ್ವನ ತಲೆಗೆ ಗುರಿಯಿಟ್ಟು ಹೇಳ್ತಿಯೋ ಇಲ್ವೋ ಎಂದು ಪ್ರಶ್ನಿಸಿದ್ದಾನೆ.
ಅದಕ್ಕೆ ವಿಶ್ವ, ಜಾಹ್ನವಿ ಬದುಕಿದ್ದಾಳೆ ಎನ್ನುವ ಸತ್ಯ ಹೇಳಿದ್ದಾನೆ. ಆದರೆ ಆಕೆ ಎಲ್ಲಿದ್ದಾಳೆ ಎನ್ನುವ ಸತ್ಯ ನನಗೆ ಮಾತ್ರ ಗೊತ್ತು. ಅಷ್ಟು ಸಾಧ್ಯವಾದರೆ ನೀನೇ ಹುಡುಕಿ ನೋಡು ಎಂದು ಚಾಲೆಂಜ್ ಹಾಕಿ ಹೊರಟು ಹೋಗಿದ್ದಾನೆ.
56
ವಿಶ್ವನ ಮೇಲೆ ಸಿಟ್ಟು
ಇದನ್ನು ಕೇಳಿ ಜಯಂತ್ ಸುಮ್ಮನಾಗಿದ್ದಾನೆ. ಇದರ ಪ್ರೊಮೋ ಬಿಡುಗಡೆಯಾಗುತ್ತಲೇ ವಿಶ್ವನ ಮೇಲೆ ಹಲವು ನೆಟ್ಟಿಗರು ಕೋಪಗೊಂಡಿದ್ದಾರೆ. ಜಯಂತ್ ಮನಸ್ಸು ಮಾಡಿದ್ದರೆ ನಿನ್ನನ್ನು ಅಲ್ಲಿಯೇ ಸಾಯಿಸಿಬಿಡಬಹುದಿತ್ತು. ಆದರೆ ಆತ ಒಳ್ಳೆಯವನು. ಅದಕ್ಕೆ ಹಾಗೆ ಮಾಡಲಿಲ್ಲ ಎನ್ನುತ್ತಿದ್ದಾರೆ.
66
ಜಾಹ್ನವಿ ಕಥೆ ಏನು?
ವಿಶ್ವನಿಗೆ ತಿಳಿದಿರೋ ಸತ್ಯ ಜಯಂತ್‌ಗೆ ತಿಳಿಯದೇ ಇರುತ್ತಾ? ಇನ್ನು ಚಿನ್ನುಮರಿ ತಪ್ಪಿಸಿಕೊಳ್ಳೋದು ಬಹಳನೇ ಕಷ್ಟ. ಇದೀಗ ವಿಶ್ವ ಕೊಟ್ಟಿರೋ ಏಟಿಗೆ ಜಯಂತ್ ಮತ್ತಷ್ಟು ರೋಷದಿಂದ ಜಾಹ್ನವಿಯ ಹುಡುಕಾಟ ಅಂತೂ ಮಾಡಿಯೇ ತೀರುತ್ತಾನೆ. ಹಾಗಿದ್ರೆ ಮುಂದೇನು?