ಬಿಗ್ ಬಾಸ್ 19 ಹೋಸ್ಟ್‌ಗೆ ₹150 ಕೋಟಿ ಪಡೆದ್ರಾ ಸಲ್ಮಾನ್ ಖಾನ್, ಮೌನ ಮುರಿದ ಪ್ರೊಡ್ಯೂಸರ್

Published : Oct 29, 2025, 05:00 PM IST

ಬಿಗ್ ಬಾಸ್ 19 ಹೋಸ್ಟ್‌ಗೆ ₹150 ಕೋಟಿ ಪಡೆದ್ರಾ ಸಲ್ಮಾನ್ ಖಾನ್, ಮೌನ ಮುರಿದ ಪ್ರೊಡ್ಯೂಸರ್ , ಕಳೆದ ಹಲವು ದಿನಗಳಿಂದ ಒಂದು ಆವೃತ್ತಿ ನಿರೂಪಣೆಗೆ ಸಲ್ಮಾನ್ ಖಾನ್ 150 ರಿಂದ 200 ಕೋಟಿ ರೂಪಾಯಿ ಪಡೆದಿದ್ದಾರೆ ಅನ್ನೋ ಮಾತುಗಳು ಹರಿದಾಡುತ್ತಿದೆ.

PREV
15
ಸಲ್ಮಾನ್ ಖಾನ್ ಸಂಭಾವನೆ

ಸಲ್ಮಾನ್ ಖಾನ್ ಸಂಭಾವನೆ

ಬಿಗ್ ಬಾಸ್ 19ನೇ ಆವೃತ್ತಿ ಶೋ ಕುತೂಹಲ ಘಟ್ಟ ತಲುಪಿದೆ. ಸ್ಪರ್ಧಿಗಳ ಜಟಾಪಟಿ ಜೋರಾಗಿದೆ. ತಾನ್ಯ ಮಿತ್ತಲ್, ಅಮಾಲ್ ಮಲಿಕ್, ಅಶ್ನೂರ್ ಕೌರ್ ಸೇರಿದಂತೆ ಹಲವು ಸ್ಪರ್ಧಿಗಳು ಕೋಲಾಹಲ ಸೃಷ್ಟಿಸಿದ್ದಾರೆ. ಬಿಗ್ ಬಾಸ್ ಹಿಂದಿ ಆವೃತ್ತಿ ಪ್ರೇಕ್ಷರ ಹಿಡಿದಿಟ್ಟುಕೊಳ್ಳುತ್ತಿದ್ದಂತೆ ಇದೀಗ ಶೋ ಹೋಸ್ಟ್ ಮಾಡುವ ಸಲ್ಮಾನ್ ಖಾನ್ ಸ್ಯಾಲರಿ ಕುರಿತು ಚರ್ಚೆಯಾಗುತ್ತಿದೆ. ಸಲ್ಮಾನ್ ಸ್ಯಾಲರಿ ಕುರಿತು ಬಿಗ್ ಬಾಸ್ ಹಿಂದಿ ಪ್ರೊಡ್ಯುಸರ್ ಮೌನ ಮುರಿದಿದ್ದಾರೆ.

25
ರಿಶಿ ನೇಗಿ ಹೇಳಿದ್ದೇನು?

ಬಿಗ್ ಬಾಸ್ 19ನೇ ಸೀಸನ್ ಕುರಿತು ಹಲವು ಪ್ರಶ್ನೆಗಳಿಗೆ ಉತ್ತರಿಸಿದ ಬಿಗ್ ಬಾಸ್ ಶೋ ಪ್ರೊಡ್ಯುಸರ್ ರಿಶಿ ನೇಗಿ, ಸಲ್ಮಾನ್ ಖಾನ್ ಸಂಭಾವನೆ ಕುರಿತು ಮಾತನಾಡಿದ್ದಾರೆ. 150 ರಿಂದ 200 ಕೋಟಿ ರೂಪಾಯಿ ಸಂಭಾವನೆ ಅನ್ನೋ ಊಹಾಪೋಹಳಿಗೆ ಉತ್ತರಿಸಿದ ನೇಗಿ, ಸಲ್ಮಾನ್ ಖಾನ್ ಸಂಭಾವನೆ ಕುರಿತು ಹಲವು ಸುದ್ದಿಗಳಿವೆ. ಆದರೆ ನಾವು ಸಲ್ಮಾನ್ ಖಾನ್‌ಗೆ ನೀಡುವ ಪ್ರತಿಯೊಂದು ರೂಪಾಯಿಗೂ ಮೌಲ್ಯವಿದೆ ಎಂದಿದ್ದಾರೆ.

35
ಸಲ್ಮಾನ್ ಖಾನ್ ಇದ್ದರೆ ಸಾಕು

ಸಲ್ಮಾನ್ ಖಾನ್ ವಾರಾಂತ್ಯದಲ್ಲಿ ಬಿಗ್ ಬಾಶ್ ಶೋ ಹೋಸ್ಟ್ ಮಾಡುತ್ತಿದ್ದಾರೆ ಎಂದರೆ ನಾನು ಹೆಚ್ಚು ಖುಷಿಯಾಗಿರುತ್ತೇನೆ. ಹೀಗಾಗಿ ಸಲ್ಮಾನ್ ಖಾನ್‌ಗೆ ಎಷ್ಟು ಕೊಡುತ್ತಿದ್ದೇವೆ ಅನ್ನೋದು ಮುಖ್ಯವಲ್ಲ. ಆದರೆ ನಾವು ಏನು ಸಂಭಾವನೆ ಕೊಡುತ್ತಿದ್ದೇವೆ ಅದಕ್ಕೆ ಸಲ್ಮಾನ್ ಖಾನ್ ಅರ್ಹರು ಎಂದಿದ್ದಾರೆ.

45
ದುಬಾರಿ ಮೊತ್ತ ಖಚಿತ

ಈ ಮೂಲಕ ಬಿಗ್ ಬಾಸ್ 19ರ ಸೀಸನ್ನಲ್ಲಿ ಸಲ್ಮಾನ್ ಖಾನ್ 150 ರಿಂದ 200 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ ಅನ್ನೋ ಊಹಾಪೋಹಗಳು ನಿಜವಾದಂತೆ ಕಾಣುತ್ತಿದೆ. ಕಾರಣ ಈ ಗಾಸಿಪ್ ಸುದ್ದಿಯನ್ನು ಶೋ ಪ್ರೊಡ್ಯುಸರ್ ಅಲ್ಲಗೆಳೆದಿಲ್ಲ. ನೇಗಿ ಮಾತುಗಳ ಬಳಿಕ ಸಲ್ಮಾನ್ ಖಾನ್ ದುಬಾರಿ ಮೊತ್ತ ಪಡೆಯುತ್ತಿದ್ದಾರೆ ಅನ್ನೋದು ಖಚಿತವಾಗಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದೆ.

ದುಬಾರಿ ಮೊತ್ತ ಖಚಿತ

55
ಸಲ್ಮಾನ್ ಖಾನ್ ಮೊದಲ ಆಯ್ಕೆ

ಸಲ್ಮಾನ್ ಖಾನ್ ನಿರೂಪಣೆ ನೋಡಲು ಜನ ಕಾಯುತ್ತಾರೆ. ಸಲ್ಮಾನ್ ಖಾನ್ ವಾರಾಂತ್ಯದಲ್ಲಿ ಕಾರ್ಯಕ್ರಮ ನಡೆಸಿಕೊಡುವುದು ಅತೀ ಉತ್ತಮವಾಗಿದೆ. ಬಿಗ್ ಬಾಸ್ ಹೋಸ್ಟ್ ಮಾಡಲು ಸಲ್ಮಾನ್ ಖಾನ್ ಮೊದಲ ಆಯ್ಕೆ ಎಂದು ನೇಗಿ ಹೇಳಿದ್ದಾರೆ.

ಸಲ್ಮಾನ್ ಖಾನ್ ಮೊದಲ ಆಯ್ಕೆ

Read more Photos on
click me!

Recommended Stories