ಚೆನ್ನೈನ ಸಮುದ್ರ ದಡದಲ್ಲಿ ಸಿಕ್ಕಳು ಜಾನು; ಬಯಲಾಗುತ್ತಾ ಸೈಕೋ ಜಯಂತ್‌ನ ಅಸಲಿ ಮುಖ?

Lakshmi Nivasa Serial: ಸೈಕೋ ಗಂಡನಿಂದ ಬೇಸತ್ತ ಜಾನು ಸಮುದ್ರಕ್ಕೆ ಹಾರಿದ್ದಳು. ಜಯಂತ್ ಅವಳನ್ನು ಹುಡುಕಿದರೂ ಸಿಗಲಿಲ್ಲ. ಆದರೆ, ಮುಂದಿನ ಸಂಚಿಕೆಯಲ್ಲಿ ಜಾನು ಬದುಕಿರುವುದು ತಿಳಿದುಬಂದಿದೆ.

ಸೈಕೋ ಗಂಡ ಜಯಂತ್ ವರ್ತನೆಯಿಂದ ಬೇಸತ್ತ ಜಾನು, ಸಮುದ್ರಕ್ಕೆ ಹಾರಿದ್ದಳು. ಜಯಂತ್ ಎಷ್ಟೇ ಹುಡುಕಾಡಿದ್ರೂ ಚಿನ್ನುಮರಿ ಸಿಕ್ಕಿರಲಿಲ್ಲ. ಹಾಗಾಗಿ ಶ್ರೀಲಂಕಾದಿಂದ ಭಾರತಕ್ಕೆ ಜಯಂತ್ ಒಬ್ಬನೇ ಹಿಂದಿರುಗಿದ್ದನು.

ಭಾರತಕ್ಕೆ ಹಿಂದಿರುಗಿ ಜಯಂತ್, ಪ್ರೀತಿಯ ಪತ್ನಿ ಚಿನ್ನುಮರಿಯನ್ನು ಕಳೆದುಕೊಂಡು ಅಕ್ಷರಶಃ ಕಂಗಾಲು ಆಗಿದ್ದಾನೆ. ಇದೇ ದುಃಖದಲ್ಲಿ ಪತ್ನಿಯ ತವರಿಗೆ ಬಂದಿರುವ ಜಯಂತ್ ಎಲ್ಲಾ ವಿಷಯವನ್ನು ಹೇಳಿಕೊಂಡಿದ್ದಾನೆ. ಸಮುದ್ರದಲ್ಲಿ ಕಾಲು ಜಾರಿ ಜಾನು ಬಿದ್ರು. ಎಷ್ಟೇ ಹುಡುಕಾಡಿದ್ರೂ ಸಿಗಲಿಲ್ಲ. ಜಾನು ನಮ್ಮೊಂದಿಗೆ ಇಲ್ಲ ಎಂಬ ವಿಷಯವನ್ನು ಎಲ್ಲರಿಗೂ ಜಯಂತ್ ಹೇಳಿದ್ದಾನೆ.


ಮನೆ ಮಗಳು ಜಾನು ಸಾವನ್ನಪ್ಪಿರುವ ವಿಷಯ ಕೇಳಿ ಲಕ್ಷ್ಮೀ ನಿವಾಸದಲ್ಲಿ ಶೋಕದ ಕರಿಛಾಯೆ ಆವರಿಸಿದೆ. ನನ್ನಿಂದಾಗಿಯೇ ಜಾನು ಪ್ರಾಣ ಹೋಯ್ತು.  ನಾನೇ ಅವರನ್ನು ಶ್ರೀಲಂಕಾಕ್ಕೆ ಕರೆದುಕೊಂಡು ಹೋಗಿ ತಪ್ಪು ಮಾಡಿದೆ. ಜಾನು ಅವರ ದೇಹ ಸಹ ಸಿಗಲಿಲ್ಲ ಎಂದು ಜಯಂತ್ ಕಣ್ಣೀರು ಹಾಕಿದ್ದಾನೆ. 

ಇಡೀ ಕುಟುಂಬ ಕಣ್ಣೀರಿನಲ್ಲಿ ಮುಳುಗಿರುವಾಗಲೇ ಮುಂದಿನ ಸಂಚಿಕೆಯ ಪ್ರೋಮೋದಲ್ಲಿ ಜಾನು ಬದುಕಿರೋದನ್ನು ತೋರಿಸಲಾಗಿದೆ. ಸಮುದ್ರದಡದಲ್ಲಿ ಪ್ರಜ್ಞೆಕಳೆದುಕೊಂಡ ಸ್ಥಿತಿಯಲ್ಲಿ ಸಿಕ್ಕಿದ್ದಾಳೆ.  ಮುಂದೆ ಧಾರಾವಾಹಿ ಯಾವ ತಿರುವು ಪಡೆದುಕೊಳ್ಳುತ್ತೆ ಅನ್ನೋದರ ಬಗ್ಗೆ ಕುತೂಹಲ ಮೂಡಿದೆ.

ಜಾನು ಖುಷಿಯಾಗಿರಲಿಲ್ಲ
ಶ್ರೀಲಂಕಾದಲ್ಲಿ ಜಾನು ಖುಷಿಯಾಗಿರಲಿಲ್ಲ. ಅಮ್ಮನ ಜೊತೆ ಫೋನ್‌ನಲ್ಲಿ ಮಾತನಾಡುವ ಚೆನ್ನಾಗಿರಲಿಲ್ಲ. ಏನಾಗಿದೆ ಅಂತ ಕೇಳಿದಾಗ ಚೆನ್ನಾಗಿಯೇ ಇದ್ದೀನಿ ಎಂದು ಸುಳ್ಳು ಹೇಳಿದ್ದಳು. ಈ ವಿಷಯವನ್ನು ನನ್ನಿಂದ ನಂಬೋಕೆ ಆಗ್ತಿಲ್ಲ ಎಂದು ಹೇಳಿ ಭಾವನಾ ಪ್ರಜ್ಞೆ ಕಳೆದುಕೊಂಡಿದ್ದಾಳೆ. ಮತ್ತೊಂದೆಡೆ ಸಂತೋಷ್, ನಿಮ್ಮ ಜೊತೆಯಲ್ಲಿರುವಾಗಲೇ ಸಮುದ್ರಕ್ಕೆ ಬಿದ್ದಳು ಎಂದು ಪ್ರಶ್ನೆ ಮಾಡಿದ್ದಾನೆ.

Latest Videos

click me!