ಝೀ ಕನ್ನಡ (Zee Kannada) ವಾಹಿನಿಯಲ್ಲಿ ಇತ್ತೀಚೆಗಷ್ಟೇ ಶುರುವಾಗಿರೋ ಧಾರಾವಾಗಿ ಲಕ್ಷ್ಮೀ ನಿವಾಸ (Lakshmi Nivasa). ಈ ಸೀರಿಯಲ್ ತುಂಬು ಕುಟುಂಬದ ಕಥೆಯಾಗಿದ್ದು, ದಿನಕ್ಕೊಂದು ಟ್ವಿಸ್ಟ್ ನೀಡುತ್ತಾ ಸಾಗುತ್ತಿರುವ ಈ ಸೀರಿಯಲ್ ಸದ್ಯ ಜನರ ಫೇವರಿಟ್ ಸೀರಿಯಲ್ ಗಳಲ್ಲಿ ಒಂದಾಗಿದೆ.
ಒಂದು ಕಾಲದಲ್ಲಿ ಕನ್ನಡದ ಜನಪ್ರಿಯ ನಟಿಯಾಗಿದ್ದ ಶ್ವೇತಾ, ಚಂದನ ಅನಂತಕೃಷ್ಣ, ದಿಶಾ ಮದನ್, ಅಜಯ್, ದಿವ್ಯಶ್ರೀ, ಮೊದಲಾದ ಹಲವು ಕಲಾವಿದರು ನಟಿಸುತ್ತಿರುವ ಸೀರಿಯಲ್ ಮಿಡಲ್ ಕ್ಲಾಸ್ ಜೀವನ ಹೇಗಿರುತ್ತೇ ಅನ್ನೋದನ್ನು ತೋರಿಸುವ ಕಥೆ. ಈ ಸೀರಿಯಲ್ ನ ಮಾಸ್ ಕ್ಯಾರೆಕ್ಟರ್ ಸಿದ್ಧೇಗೌಡ್ರು (Siddegoudru).
ಊರಿನ ಗೌಡ್ರ ಮಗನಾಗಿರುವ ಸಿದ್ಧೇಗೌಡ್ರ ಹಾವ, ಭಾವ ಮಾತು, ಫೈಟ್ ಸದ್ಯ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ತಮ್ಮ ಆಟ ತುಂಟಾಟಗಳಿಂದಲೇ ಭಾವನಾ ಪ್ರೀತಿಯಲ್ಲಿ ಬಿದ್ದಿರುವ ಸಿದ್ದೇಗೌಡ್ರಿಗೆ ಸದ್ಯ ಭಾವನಾ ಹಿಂದೆ ಮುಂದೆ ಅಲೆಯೋದೆ ಡ್ಯೂಟಿಯಾಗಿದೆ.
ಸಿದ್ಧೇ ಗೌಡ್ರ ಪಾತ್ರದ ಮೂಲಕ ಜನಮನ ಗೆದ್ದಿರುವ ಈ ನಟ ಯಾರು ಅವರ ಹೆಸರೇನು? ಇದುವರೆಗೂ ಯಾವ ಸೀರಿಯಲ್ ನಲ್ಲೂ ನೋಡೇ ಇಲ್ಲ ಅಲ್ವಾ? ಹೀಗೆ ನೂರಾರು ಪ್ರಶ್ನೆ ನಿಮ್ಮಲಿದ್ರೆ, ನಿಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಸಿದ್ದೇಗೌಡರ ಪಾತ್ರದ ಮೂಲಕ ಮನೆಮಾತಾಗಿರುವ ನಟನ ಹೆಸರು ಧನಂಜಯ್ (Dhananjay). ಕಿರುತೆರೆಗೆ ಪ್ರಥಮ ಬಾರಿ ಎಂಟ್ರಿ ಕೊಟ್ಟಿರುವ ಧನಂಜಯ್ ಗೆ ನಟನಾ ಲೋಕ ಮಾತ್ರ ಹೊಸದೇನಲ್ಲ. ಹಲವು ವರ್ಷಗಳಿಂದ ಸಿನಿಮಾದಲ್ಲೂ ಕೆಲಸ ಮಾಡುತ್ತಿದ್ದಾರೆ ಇವರು.
ಧನಂಜಯ್ ಅವರು ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದು, ಇವರು ನಟಿಸಿರುವ ವಾಸಂತಿ ನಲಿದಾಗ, ಥಗ್ ಆಫ್ ರಾಮಗಡ ಸಿನಿಮಾದಲ್ಲೂ (Kannada Film) ನಟಿಸಿದ್ದಾರೆ. ಡಬ್ಬಿಂಗ್ ಆರ್ಟಿಸ್ಟ್ ಜೊತೆಗೆ ಡ್ಯಾನ್ಸರ್ ಆಗಿಯೂ ಸಿದ್ದೇಗೌಡರು ಗುರುತಿಸಿಕೊಂಡಿದ್ದಾರೆ.
ಹಿರಿತೆರೆಯಿಂದ ಕಿರುತೆರೆಗೆ ಎಂಟ್ರಿ ಕೊಡುವ ಮೂಲಕ ಕಿರುತೆರೆಯ ಪ್ರೇಕ್ಷಕರ ಮನಸ್ಸನ್ನು ಗೆದ್ದಿರುವ ಈ ನಟನಿಗೆ ಈಗಾಗಲೇ ಫ್ಯಾನ್ ಪೇಜಸ್ ಕೂಡ ಕ್ರಿಯೇಟ್ ಆಗಿದೆ. ಸೀರಿಯಲ್ ನಲ್ಲಿ ಭಾವನಾ ಹಿಂದೆ ಬಿದ್ದಿರುವ ಸಿದ್ದೆಗೌಡರಿಗೆ ಭಾವನಾ ಪ್ರೀತಿ ಸಿಗುತ್ತಾ ಅನ್ನೋದನ್ನು ಕಾದು ನೋಡಬೇಕು.