ಫಿನಾಲೆ ಔಟ್ ಫಿಟ್‌ನಲ್ಲಿ ಬೋಲ್ಡ್ ಆಗಿ ಪೋಸ್ ಕೊಟ್ಟ ತನಿಷಾ…. ಏನಮ್ಮಾ ನಿನ್ನ ಅವತಾರ ಅಂತಿದ್ದಾರೆ ಜನ

Published : Feb 27, 2024, 05:03 PM IST

ಬಿಗ್ ಬಾಸ್ ಸೀಸನ್ 10 ರ ಮೂಲಕ ಭಾರಿ ಸದ್ದು ಮಾಡಿದ ನಟಿ ತನಿಷಾ ಕುಪ್ಪಂಡ ಇದೀಗ ತಮ್ಮ ಹೊಸ ಫೋಟೋ ಶೂಟ್ ಮೂಲಕ ಇಂಟರ್ನೆಟ್ ನಲ್ಲಿ ಬಿಸಿ ಹೆಚ್ಚಿಸ್ತಿದ್ದಾರೆ. ಮೊನ್ನೆಯಷ್ಟೇ ಟ್ರೆಡಿಷನಲ್ ಆಗಿ ಸೀರೆಯುಟ್ಟಿ ಸದ್ದು ಮಾಡಿದ್ದ ತನೀಷಾ, ಇದೀಗ ಸಿಕ್ಕಾಪಟ್ಟೆ ಹಾಟ್ ಡ್ರೆಸ್ಸಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.   

PREV
17
ಫಿನಾಲೆ ಔಟ್ ಫಿಟ್‌ನಲ್ಲಿ ಬೋಲ್ಡ್ ಆಗಿ ಪೋಸ್ ಕೊಟ್ಟ ತನಿಷಾ…. ಏನಮ್ಮಾ ನಿನ್ನ ಅವತಾರ ಅಂತಿದ್ದಾರೆ ಜನ

ಕಲರ್ಸ್ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 (Bigg Boss Season 10) ರ ಮೂಲಕ ಬೆಂಕಿ ಅಂತಾನೆ ಜನಪ್ರಿಯತೆ ಪಡೆದ ನಟಿ ತನಿಷಾ ಹವಾ ಇನ್ನೂ ಕೂಡಾ ಹಾಗೆ ಇದೇ, ಇದೀಗ ಅವರು ತಮ್ಮ ಲುಕ್ ಮೂಲಕ ಇಂಟರ್ನೆಟ್ ನಲ್ಲೂ ಬೆಂಕಿ ಹಚ್ಚುತ್ತಿದ್ದಾರೆ. 
 

27

ಏನಪ್ಪಾ ಬೆಂಕಿ ಹಚ್ಚೋ ಕೆಲಸ ಬೆಂಕಿ ತನಿಷಾಗೆ ಯಾಕೆ ಅನ್ಬೇಡಿ… ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ತನಿಷಾ (Tanisha Kuppanda) ತಮ್ಮ ಬಿಗ್ ಬಾಸ್ ಫಿನಾಲೆ ಔಟ್ ಫಿಟ್ ನಲ್ಲಿ ಸಖತ್ ಬೋಲ್ಡ್ ಆಗಿ ಪೋಸ್ ನೀಡಿದ್ದು, ಆ ಮೂಲಕ ಅಂತರ್ಜಾಲದಲ್ಲಿ ಬೆಂಕಿ ಹಚ್ಚಿಸೋ ಮೂಲಕ ಬಿಸಿ ಹೆಚ್ಚಿಸಿದ್ದಾರೆ. 
 

37

ಡೀಪ್ ನೆಕ್ ಬ್ಲೌಸ್ ಮತ್ತು ಲಂಗ ಹೊಂದಿರುವ ನೀಲಿ ಹಸಿರು ಬಣ್ಣದ ನವಿಲಿನ ಕಾಸ್ಟ್ಯೂಮ್ ನಲ್ಲಿ ತನಿಷಾ ನಿಜಕ್ಕೂ ತುಂಬಾನೆ ಸುಂದರವಾಗಿ ಹಾಗೂ ಬೋಲ್ಡ್ ಆಗಿ ಕಾಣಿಸ್ತಿದ್ದಾರೆ. ಇದನ್ನು ನೋಡಿದ ಜನರು ಇದು ಪಕ್ಕ ಫಾರಂ ನವಿಲು, ನಮ್ಮ ಬೆಂಕಿ ನವಿಲು ಎಂದು ಹೇಳಿದ್ದಾರೆ. 
 

47

ಅಷ್ಟೇ ಅಲ್ಲ ಆ ಸುಂದರ ನಗು ಮತ್ತು ಬ್ಯೂಟಿಗೆ ಪಡ್ಡೆ ಹುಡುಗರು ಬಿದ್ದೋಗಿದಾರಂತೆ, ಈಕೆ ನಗು ಮುಖದ ಚೆಲುವೆ, ನಮ್ಮ ಬೆಂಕಿ ತನಿಷಾ, ಯಾರು ನವಿಲನ್ನು ಕಿಡ್ನಾಪ್ ಮಾಡಿದ್ದು, ಫಾರೆಸ್ಟ್ ಆಫೀಸ್ ನಿಂದ ನೋಟೀಸ್ ಬರಬಹುದು ಎಚ್ಚರ ಅಂತಾನೂ ಹೇಳಿದ್ದಾರೆ ನೆಟ್ಟಿಗರು. 
 

57

ತುಂಬಾ ಡೀಪ್ ನೆಕ್ ಬ್ಲೌಸ್ ನಲ್ಲಿ ಫೋಟೋ ಶೂಟ್ ಮಾಡಿಸಿರುವ ತನಿಷಾ ಬೋಲ್ಡ್ ಲುಕ್ ಗೆ ನೆಗೆಟೀವ್ ಕಾಮೆಂಟ್(negative comment) ಕೂಡ ಬಂದಿದ್ದು, ಒಬ್ಬರು ನೀಟಾಗಿ ಬಟ್ಟೆ ಹಾಕು ಫಸ್ಟ್, ಏನಿದು ನಿನ್ನ ಅವತಾರ ಎಂದರೆ, ಮತ್ತೊಬ್ಬರು ಬರ್ತಾ ಬರ್ತ ರಾಯನ ಕುದುರೆ ಕತ್ತೆ ಆಗೋದು ಬೇಡ ಎಂದಿದ್ದಾರೆ. 
 

67

ಇನ್ನು ತಮ್ಮ ಸುಂದರ ಫೋಟೋಗಳನ್ನು ಹಂಚಿಕೊಂಡು ನನ್ನ ನೆಚ್ಚಿನ ಇನ್ ಸ್ಟಾಗ್ರಾಂ (instagram)ಫ್ಯಾಮಿಲಿಗಾಗಿ, ಈ ಫಿನಾಲೆ ಔಟ್ ಫಿಟ್ ಎಂದು ಹೇಳಿ ನೀವು ನಿಜವಾಗಿಯೂ ಏನು ಭಾವಿಸುತ್ತೀರಿ ಎಂದು ಯಾರಿಗೂ ತಿಳಿದಿಲ್ಲ,  ಅದನ್ನು ಹೇಳೋದಿಕ್ಕೂ ಹೋಗಬೇಡಿ, ಅವರು ನಿಜವಾಗಿಯೂ ಒಳ್ಳೆಯವರಾಗಿದ್ರೆ, ನಿಮ್ಮನ್ನ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಕ್ಯಾಪ್ಶನ್ ಬರೆದಿದ್ದಾರೆ. 
 

77

ಬಿಗ್ ಬಾಸ್ ಸೀಸನ್ 10 ರ ಫಿನಾಲೆಗೆ ತನಿಷಾ ಕುಪ್ಪಂಡ ಟೈ ನಾಟ್ ಫ್ಯಾಷನ್ ಅವರ ಔಟ್ ಫಿಟ್, ನೈರಾಸ್ ಬೈ ನೇತ್ರಾ ಅವರ ಜ್ಯುವೆಲ್ಲರಿ, ಶಿಲ್ಪಾ ಪ್ರದೀಪ್ ಅವರ ಮೇಕಪ್ ನಲ್ಲಿ ಅದ್ಭುತವಾಗಿ ಕಾಣುತ್ತಿದ್ದರು. ಹೌದೋ ಅಲ್ವಾ? ಏನಂತೀರಾ ನೀವು? 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories