ಮುತ್ತು ಪಡೆಯಲು ಪಣತೊಟ್ಟ ಶಿವು ಪತ್ನಿ; ಮುಲಮುಲ ಆಗ್ತಿದೆ ಅಂದ್ರು ಬಿಡ್ತಿಲ್ಲ ಪಾರು!

Published : Apr 09, 2025, 08:59 PM ISTUpdated : Apr 09, 2025, 09:02 PM IST

Annayya Serial: ಅಣ್ಣಯ್ಯ ಸೀರಿಯಲ್‌ನಲ್ಲಿ ಪಾರು ತನ್ನ ಪ್ರೀತಿಯನ್ನು ಹೇಳಿಕೊಂಡಿದ್ದಾಳೆ. ಶಿವು, ಪಾರುಗಾಗಿ ಪೊಲೀಸ್ ಠಾಣೆಯಲ್ಲಿ ಮೂರನೇ ಕಣ್ಣು ತೆರೆದಿದ್ದಾನೆ. ಮುತ್ತು ಕೊಡಲು ಪಾರು ಹಠ ಹಿಡಿದರೆ, ಶಿವು ನಾಚಿಕೆಯಿಂದ ಓಡಿಹೋಗಿದ್ದಾನೆ.

PREV
15
ಮುತ್ತು ಪಡೆಯಲು ಪಣತೊಟ್ಟ ಶಿವು ಪತ್ನಿ; ಮುಲಮುಲ ಆಗ್ತಿದೆ ಅಂದ್ರು ಬಿಡ್ತಿಲ್ಲ ಪಾರು!

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಸೀರಿಯಲ್ ರೊಮ್ಯಾಂಟಿಕ್ ಧಾರಾವಾಹಿಯಾಗಿ ಬದಲಾಗುತ್ತಿದೆ. ಕೊನೆಗೂ ತನ್ನ ಪ್ರೀತಿಯನ್ನು ಪಾರು ಹೇಳಿಕೊಂಡಿದ್ದಾಳೆ. ಶಿವು ಮಾವ ತನ್ನ ಬಾಲ್ಯದ ಪ್ರೀತಿಯ ಮಾತುಗಳನ್ನು ಹೇಳಿದ್ದಾನೆ. ಪಾರುಗಾಗಿ ಪೊಲೀಸ್ ಠಾಣೆಯಲ್ಲಿ ಶಿವು ಮೂರನೇ ಕಣ್ಣು ತೆಗೆದಿದ್ದನು.

25

ಪೊಲೀಸ್ ಠಾಣೆಯಿಂದ ಮನೆಗೆ ಬಂದ್ಮೇಲೆ ಪಾರು-ಶಿವು ನಡುವಿನ ಪ್ರೇಮ ಪ್ರಸಂಗದ ದೃಶ್ಯಗಳು ಪ್ರಸಾರವಾಗುತ್ತಿವೆ. ಪತ್ನಿ ಪಾರುಗಾಗಿ ಶಿವ ನಾಲ್ಕು ಸಾಲು ಪದ್ಯವನ್ನು ಸಹ ಹೇಳಿದ್ದಾನೆ. ಇದಕ್ಕೆ ನೀನು ಎಷ್ಟು ಪ್ರೀತಿಸುತ್ತಿಯಾ ಎಂದು ಕೇಳಿದಾಗ ಬೆಲ್ಲದಚ್ಚಂಗೆ ಎಂದು ಹೇಳಿದ್ದಾನೆ. 

35

ಈ ಎಲ್ಲಾ ಸಂಭಾಷಣೆ ನಡುವೆ ತನಗೆ ಮುತ್ತು ಕೊಡು ಎಂದು ಪಾರು ಹಠ ಹಿಡಿದಿದ್ದಾಳೆ. ಇದಕ್ಕೆ ಶಿವು ಒಂದು ಕ್ಷಣ ಶಾಕ್ ಆಗಿದ್ದನು. ನನಗೆ ಎದೆಯಲ್ಲಿ ಮುಲಮುಲ ಆಗ್ತಿದೆ ಪಾರು ಎಂದು ಶಿವು ಹೇಳಿದ್ದಾನೆ. ಈ ಮುಲಮುಲ ಅಂದ್ರೆ ಏನು ಎಂದು ಕೇಳಿದಾಗ, ಎದೆ ಝಲ್ ಅಂತಾರೆ ಅಲ್ಲವಾ? ಹಾಗೆ ನನಗೆ ಎದೆ ಮುಲಮುಲ ಆಗ್ತಿದೆ ಎಂದಿದ್ದಾನೆ.

45

ನನಗೆ ಮುತ್ತು ಕೊಡಲು ನಾಚಿಕೆ ಆಗ್ತಿದೆ. ನೀನು ಕಣ್ಣು ಮುಚ್ಚಿಕೊಳ್ಳಬೇಕು ಎಂದು ಶಿವು ಹೇಳುತ್ತಾನೆ. ಪಾರು ಕಣ್ಣು ಮುಚ್ಚುತ್ತಿದ್ದಂತೆ ಓಡಿ ಹೋದ ಶಿವ ಹಾಸಿಗೆ ಹೊದ್ದುಕೊಂಡು ಮಲಗಿದ್ದಾನೆ. ಇತ್ತ ತನ್ನನ್ನು ಅಪಹರಣ ಮಾಡಿದ್ಯಾರು? ಶಿವು ಮಾವನ ಮೇಲೆ ಹಲ್ಲೆ ನಡೆಸಿದ್ದರ ಹಿಂದೆ ಇರೋರು ಯಾರು? ಅಪ್ಪ ವೀರಭದ್ರ ನಮ್ಮನ್ನು ರಕ್ಷಣೆ ಮಾಡಿದ್ದು. ಹಾಗೆ ಇದರ ಹಿಂದಿರೋದು ಯಾರು ಎಂದು ಪಾರು ಯೋಚಿಸಿದ್ದಾಳೆ.

55

ರಾತ್ರಿ ಪಾರುಳನ್ನು ಯಾಮಾರಿಸಿ ಮಲಗಿದ್ದ ಶಿವು ಬೆಳಗ್ಗೆ ಪತ್ನಿ ಕೈಯಲ್ಲಿ ತಗ್ಲಾಕೊಂಡಿದ್ದಾನೆ. ಬೆಳಗ್ಗೆ ಯಾರಾದ್ರೂ ಮುತ್ತು ಕೊಡ್ತಾರಾ? ಬೆಳಗ್ಗೆ ತಿನ್ನಬಾರದು ಅನ್ನೋದಕ್ಕೆ ಅದೇನು ಕರ್ಡ್ ರೈಸ್? ನನಗೆ ಮುತ್ತು ಬೇಕೇ ಬೇಕು ಎಂದು ಪಾರು ಹಠ ಹಿಡಿದಿದ್ದಾಳೆ. ಅಯ್ಯೋ ನನ್ನಿಂದ ಇದು ಆಗಲ್ಲ ಎಂದು ಶಿವು ಕೋಣೆಯಿಂದ ಹೊರಗೆ ಓಡಿ ಬಂದಿದ್ದಾನೆ. ಶಿವು ಕಿರುಚುತ್ತಾ  ಹೊರಗೆ ಬಂದಿದ್ದನ್ನು ಕಂಡು ಆತನ ತಂಗಿಯರು ಶಾಕ್ ಆಗಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories