ಕನ್ನಡ ಬಿಗ್ ಬಾಸ್ ಆಫರ್ ತಿರಸ್ಕರಿಸಿದ ಧಾರಾವಾಹಿ ನಟಿ ಜ್ಯೋತಿ ರೈ ಕೊಟ್ಟ ಕಾರಣ ಹೀಗಿದೆ..

First Published | Aug 8, 2024, 6:06 PM IST

ಬೆಂಗಳೂರು (ಆ.09): ಕೆಲವು ತಿಂಗಳುಗಳ ಹಿಂದೆ ಕೆಲವು ಎಡಿಟೆಟ್ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಅಪಪ್ರಚಾರಕ್ಕೆ ಒಳಗಾಗಿದ್ದ ಹಾಟ್ ಬ್ಯೂಟಿ ಜ್ಯೋತಿ ರೈಗೆ ಕನ್ನಡ ಬಿಗ್‌ ಬಾಸ್ ಸೀಸನ್ 11ರ (Kannada Bigg Boss season 11) ಮನೆಗೆ ಬರುವಂತೆ ಆಹ್ವಾನಿಸಲಾಗಿದೆ.

ಕನ್ನಡದ ಹಲವು ಧಾರಾವಾಹಿಗಳಲ್ಲಿ ನಟಿಸಿ ಪ್ರಸಿದ್ಧಿ ಗಳಿಸಿದ ನಟಿ ಜ್ಯೋತಿ ರೈ ಈಗ ದಕ್ಷಿಣ ಭಾರತದ ಹಲವು ಭಾಷೆಗಳ ಧಾರಾವಾಹಿಗಳನ್ನು ನಟಿಸುತ್ತಿದ್ದಾರೆ. ಸದ್ಯಕ್ಕೆ ತೆಲುಗು ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸುತ್ತಾ ಬ್ಯೂಸಿ ಆಗಿರುವ ನಟಿ ಜ್ಯೋತಿ ರೈಗೆ ಬಿಗ್‌ ಬಾಸ್ ಮನೆಗೆ ಆಹ್ವಾನ ನೀಡಲಾಗಿದೆ.

ಈ ಬಗ್ಗೆ ಸ್ವತಃ ಸಾಮಾಜಿಕ ಜಾಲತಾಣದ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಮಾಹಿತಿ ಹಂಚಿಕೊಂಡಿರುವ ನಟಿ ಜ್ಯೋತಿ ಪೂರ್ವಜ್ ಅವರು ನನಗೆ ಕನ್ನಡ ಬಿಗ್‌ ಬಾಸ್ ಸ್ಪರ್ಧಿಯಾಗಿ ಮನೆಗೆ ಬರುವಂತೆ ಆಹ್ವಾನ ನೀಡಲಾಗಿದೆ. ಇದಕ್ಕೆ ನಾವು ಕನ್ನಡ ಬಿಗ್‌ ಬಾಸ್ ತಂಡಕ್ಕೆ ಪ್ರಶಂಸಿಸುತ್ತೇನೆ.

Tap to resize

ಕನ್ನಡ ಬಿಗ್‌ ಬಾಸ್ ತಂಡವು ನನ್ನನ್ನು ಸಂಪರ್ಕ ಮಾಡಿದಾಗ ನಾನು ಅದನ್ನು ಪರಿಗಣಿಸಿದ್ದೇನೆ. ಆದರೆ, ನಾನು ಈಗಾಗಲೇ ಹಲವು ಸಿನಿಮಾಗಳು ಮತ್ತು ಧಾರಾವಾಹಿಗಳಲ್ಲಿ ನಟಿಸಲು ದಿನಾಂಕಗಳನ್ನು ನೀಡಿದ್ದು, ಅವುಗಳಲ್ಲಿ ನನ್ನ ಇರುವಿಕೆ ಅಗತ್ಯವಾಗಿದೆ. ಆದ್ದರಿಂದ ನಾನು ಬಿಗ್‌ ಬಾಸ್ ಮನೆಗೆ ಹೋಗಲು ಸಮಯದ ಕಾರಣದಿಂದ ಬಿಗ್‌ ಬಾಸ್ ಸ್ಪರ್ಧೆಗೆ ಹೋಗುವುದನ್ನು ನಾನು ಗೌರವಯುತವಾಗಿ ನಿರಾಕರಿಸಿದ್ದೇನೆ ಎಂದು ನಟಿ ಜ್ಯೋತಿ ರೈ ತಿಳಿಸಿದ್ದಾರೆ.

ಇನ್ನು ಕನ್ನಡ ಸೇರಿದಂತೆ ದಕ್ಷಿಣ ಭಾರತದಲ್ಲಿ ನನ್ನ ಅಭಿಮಾನಿಗಳು ಮತ್ತು ಅನುಯಾಯಿಗಳ ಬೆಂಬಲದಿಂದಾಗಿ ಬಿಗ್‌ ಬಾಸ್ ಮನೆಗೆ ಸ್ಪರ್ಧಿಯಾಗಿ ಬರುವಂತೆ ಅವಕಾಶ ನೀಡಿದ್ದಕ್ಕಾಗಿ ಕೃತಜ್ಞಳಾಗಿದ್ದೇನೆ ಎಂದು ತಿಳಿಸಿದ್ದಾರೆ.

ಅಶ್ಲೀಲ ವಿಡಿಯೋ ಮೂಲಕ ಅಪ ಪ್ರಚಾರ: ಇನ್ನು ಕಳೆದ ನಾಲ್ಕೈದು ತಿಂಗಳ ಹಿಂದೆ ನಟಿ ಜ್ಯೋತಿ ರೈ ಅವರದ್ದೆನ್ನಲಾದ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವ ಮೂಲಕ ಕಿಡಿಗೇಡಿಗಳು ಜ್ಯೋತಿ ರೈ ಅವರ ವಿರುದ್ಧ ಅಪಪ್ರಚಾರ ಮಾಡಿದ್ದರು. ಆದರೆ, ಇದಕ್ಕೆ ಹೆಚ್ಚು ತಲೆ ಕೆಡಿಸಿಕೊಳ್ಳದ ಅವರು ಕಿಡಿಗೇಡಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಿ ಪಾಠ ಕಲಿಸಿದ್ದಾರೆ.

ತೆಲುಗು ಇಂಡಸ್ಟ್ರಿಯಲ್ಲಿ ಬೇಡಿಕೆಯ ನಟಿ: ಮೂಲತಃ ಕನ್ನಡತಿಯಾಗಿರುವ ನಟಿ ಜ್ಯೋತಿ ರೈ ಅವರು ಕನ್ನಡ ಧಾರಾವಾಹಿಗಳಲ್ಲಿ ಹಲವು ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಇನ್ನು ತೆಲುಗು ಧಾರಾವಾಗಹಿಗೆ ಹೋದ ನಂತರ ಹೆಚ್ಚಾಗಿ ಪ್ರಮುಖ ಪಾತ್ರಗಳುಮ ನಾಯಕಿ ಪಾತ್ರಗಳು ಸಿಕ್ಕಿವೆ. ಹೀಗಾಗಿ, ತೆಲುಗು ಇಂಡಸ್ಟ್ರಿಗೆ ಹೋದ ನಂತರ ಜ್ಯೋತಿ ರೈ ದಕ್ಷಿಣ ಭಾರತದ ಬೇಡಿಕೆ ನಟಿಯಾಗಿದ್ದಾರೆ.

ಮಾದಕತೆ ಪ್ರದರ್ಶನದಲ್ಲಿ ಹಿಂದೆ ಬೀಳದ ಜ್ಯೋತಿ: ಕೇವಲ ಧಾರಾವಾಹಿಗೆ ಸೀಮಿತವಾಗಿರದ ನಟಿ ಜ್ಯೋತಿ ರೈ ಈಗ 3 ಸಿನಿಮಾಗಳಲ್ಲಿಯೂ ನಟಿಸಲು ಸಹಿ ಹಾಕಿದ್ದಾರೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಆಕ್ಟಿವ್ ಆಗಿರುವ ಜ್ಯೋತಿ ಪುರ್ವಜ್ ತಮ್ಮ ಮಾದಕ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳ ಹಾರ್ಟ್ ಬೀಟ್ ಹೆಚ್ಚಳ ಮಾಡುತ್ತಿದ್ದಾರೆ.

ಎರಡನೇ ಮದುವೆಯಾಗಿರುವ ನಟಿ ಜ್ಯೋತಿ ಪೂರ್ವಜ್: ನಟಿ ಜ್ಯೋತಿ ರೈಗೆ ಹಲವು ವರ್ಷಗಳ ಹಿಂದೆಯೇ ಮದುವೆಯಾಗಿದ್ದು, ಒಬ್ಬ ಮಗನೂ ಇದ್ದಾನೆ. ಆದರೆ, ಸಿನಿಮಾ, ಧಾರಾವಾಹಿಯಲ್ಲಿ ಮಿಂಚುತ್ತಿದ್ದ ಜ್ಯೋತಿ ರೈಗೆ ಸಂಸಾರಿಕ ಜೀವನ ಅಷ್ಟೊಂದು ಉತ್ತಮವಾಗಿರಲಿಲ್ಲ. ಮೊದಲ ಗಂಡನಿಗೆ ಡಿವೋರ್ಸ್ ನೀಡಿ ಈಗ ಪೂರ್ವಜ್ ಎನ್ನುವವರನ್ನು ಮದುವೆಯಾಗಿದ್ದಾರೆ.

ಕನ್ನಡ ಬಿಗ್‌ ಬಾಸ್‌ಗೆ ಬಂದಿದ್ದರೆ ಹಾರ್ಟ್ ಬೀಟ್ ಹೆಚ್ಚಳ ಗ್ಯಾರಂಟಿ: ಇನ್ನು ನಟಿ ಜ್ಯೋತಿ ರೈ ಅವರ ಮಾದಕ ಫೋಟೋಗಳನ್ನು ನೋಡಿದ ಅದೆಷ್ಟೋ ಪಡ್ಡೆಗಳು ನಿದ್ದೆಯೇ ಕೆಟ್ಟು ಹೋಗಿದೆ.

ಹೀಗಿರುವಾಗ ಮಾದಕ ನಟಿ ಜ್ಯೋತಿ ರೈ ಕನ್ನಡ ಬಿಗ್‌ಬಾಸ್‌ಗೆ ಬಂದಿದ್ದರೆ ಹಾರ್ಟ್ ಬೀಟ್ ಹೆಚ್ಚಳ ಆಗುವುದರಲ್ಲಿ ಅನುಮಾನವೇ ಇರಲಿಲ್ಲ. ಆದರೆ, ನಾನು ಬಿಗ್‌ ಬಾಸ್ ಮನೆಗೆ ಬರಲು ಸಮಯ ಸಿಗುತ್ತಿಲ್ಲ ಎಂದು ನಿರಾಕರಣೆ ಮಾಡಿರುವುದರಿಂದ ಕನ್ನಡಿಗರಿಗೆ ನಿರಾಸೆ ಉಂಟಾಗಿದೆ.

Latest Videos

click me!