ಪತಿ ಜೊತೆ ರೊಮ್ಯಾಂಟಿಕ್ ಪೋಸ್ ಕೊಟ್ಟ ಶ್ರೀರಸ್ತು ಶುಭಮಸ್ತು ಸಿರಿ... ನಿಮಗೆ ಬೇರೆ ಯಾರು ಸಿಕ್ಕಿಲ್ವಾ ಅಂತಿದ್ದಾರಲ್ಲ‌ ಜನ !

First Published | Sep 2, 2024, 12:15 PM IST

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸಿರಿ ಪಾತ್ರದಲ್ಲಿ ಮಿಂಚುತ್ತಿರುವ ನಟಿ ಚಂದನಾ ರಾಘವೇಂದ್ರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ವಿಡಿಯೋ ಶೇರ್ ಮಾಡಿ, ಮದುವೆ ಸಂಭ್ರಮವನ್ನ ಎಂಜಾಯ್ ಮಾಡಿದ್ದಾರೆ. 
 

ಶ್ರೀರಸ್ತು ಶುಭಮಸ್ತು ಧಾರಾವಾಹಿ ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ. ಈ ಸೀರಿಯಲ್ ಪ್ರತಿಯೊಂದು ಪಾತ್ರಗಳು ಜನರಿಗೆ ಅಚ್ಚುಮೆಚ್ಚು ಅದರಲ್ಲಿ ಸಿರಿ ಪಾತ್ರವೂ ಒಂದು. ಅತ್ತೆ ತುಳಸಿಯ ಪ್ರೀತಿಯ ಸೊಸೆ, ಸಮರ್ಥ್’ನ ಮುದ್ದಿನ ಹೆಂಡತಿ ಸಿರಿ ಪಾತ್ರದಲ್ಲಿ ಚಂದನ ರಾಘವೆಂದ್ರ  (Chandana Raghavendra) ನಟಿಸುತ್ತಿದ್ದಾರೆ. 
 

ಚಂದನ ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಸಂಕೇತ ಎನ್ನುವವರ ಜೊತೆ ಇತ್ತೀಚೆಗೆ ತಮ್ಮ ಬಂಧು ಬಳಗ, ಸ್ನೇಹಿತರ ಮುಂದೆ ಅದ್ಧೂರಿ ಸಮಾರಂಭವಾದಲ್ಲಿ ಸಪ್ತಪದಿ ತುಳಿದಿದ್ದಾರೆ.
 

Tap to resize

ಮದುವೆಯ ಬಳಿಕ ಚಂದನ ತಮ್ಮ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ತಮ್ಮ ಮದುವೆ ಶಾಸ್ತ್ರಗಳಾದ ಅರಿಶಿನ ಶಾಸ್ತ್ರ, ಮೆಹೆಂದಿ ಶಾಸ್ತ್ರಗಳ (Haldi and mehendi) ಫೋಟೊಗಳನ್ನು ಹಂಚಿಕೊಂಡಿದ್ದು, ನಟಿ ಶುಭಾಶಯಗಳ ಮಹಾಪೂರ ಹರಿದು ಬಂದಿದೆ. 
 

ಅರಿಶಿನ ಶಾಸ್ತ್ರಕ್ಕೆ ಚಂದನ ಹಳದಿ ಫ್ಲೋರಲ್ ಡಿಸೈನ್ ಇರುವಂತಹ ಬಿಳಿ ಬಣ್ಣದ ಸೀರೆ ಉಟ್ಟಿದ್ದು, ಸಂಕೇತ್ ಹಳದಿ ಗೆರೆಗಳಿರುವ ಬಿಳಿ ಬಣ್ಣದ ಕುರ್ತಾ ಧರಿಸಿದ್ದು, ಅರಿಶಿನ ಹಚ್ಚುತ್ತಾ, ನೀರಿನ ಬಲೂನ್ ಗಳನ್ನು ಎರೆಚುತ್ತಾ, ಕುಟುಂಬದ ಜೊತೆ ಸಖತ್ ಆಗಿ ಹೆಜ್ಜೆ ಹಾಕಿ ಎಂಜಾಯ್ ಮಾಡಿದ್ದಾರೆ ಚಂದನಾ. 
 

ಅರಿಶಿನ ಶಾಸ್ತ್ರದ ಬಳಿಕ ಮೆಹೆಂದಿ ಶಾಸ್ತ್ರವೂ ನಡೆದಿದ್ದು, ಚಂದನ ಹಸಿರು ಬಣ್ಣದ ಲಂಗ ಬ್ಲೌಸ್ ತೊಟ್ಟಿದ್ದು, ಅದಕ್ಕೆ ಮರೂನ್ ಬಣ್ಣದ ದಾವಣಿ ಧರಿಸಿದ್ದಾರೆ. ಎರಡೂ ಕೈಗಳ ತುಂಬಾ ಮೆಹೆಂದಿ ಹಚ್ಚಿದ್ದಾರೆ. ಇನ್ನು ಸಂಕೇತ್ ತಮ್ಮ ಕೈ ಮೇಲೆ ಚಂದು ಎಂದು ಮೆಹೆಂದಿಯಲ್ಲಿ ಬರೆಸಿಕೊಂಡಿದ್ದಾರೆ. 
 

ಇನ್ನು ಮೆಹೆಂದಿ ಬಳಿಕ ಚಂದನಾ ಮತ್ತು ಸಂಕೇತ್ ಸಂಗೀತ ಕಾರ್ಯಕ್ರಮ ಕೂಡ ಬಹಳ ಅದ್ಧೂರಿಯಾಗಿ ನಡೆದಿದೆ. ಚಂದನಾ, ತಮ್ಮ ಸ್ನೇಹಿತರು ಮತ್ತು ಕುಟುಂಬದ ಜೊತೆಗೆ ಹಾಡು ಹೇಳಿ, ನೃತ್ಯ ಮಾಡಿ ಎಂಜಾಯ್ ಮಾಡಿದ್ದಾರೆ. 
 

ಚಂದನಾ - ಸಂಕೇತ್ ಮದುವೆ ಸಮಾರಂಭವು ಬೆಂಗಳೂರಿನ ಖಾಸಗಿ ರೆಸಾರ್ಟ್ ಒಂದರಲ್ಲಿ ಅದ್ಧೂರಿಯಾಗಿ ನಡೆದಿದ್ದು, ಮದುವೆ ಸಮಾರಂಭಕ್ಕೆ ನಟಿ ಸುಧಾರಾಣಿ (Sudharani), ಸುಶ್ಮಿತಾ ಜಗ್ಗಪ್ಪ, ಜಾನ್ವಿ ರಾಯಲ ಆಗಮಿಸಿದ್ದರು. ಜಾನ್ವಿ ಮತ್ತು ಚಂದನ ಬೆಸ್ಟ್ ಫ್ರೆಂಡ್ಸ್ ಕೂಡ ಆಗಿದ್ದಾರೆ. 
 

ಚಂದನ ಮದುವೆಯಾಗಿರುವ ಹುಡುಗನ ಹೆಸರು ಸಂಕೇತ್ ಅನ್ನೋದು ಬಿಟ್ಟರೆ ಬೇರೆ ಯಾವ ಮಾಹಿತಿಯೂ ಲಭ್ಯವಾಗಿಲ್ಲ. ಇವರದ್ದು ಲವ್ ಮ್ಯಾರೇಜ್? ಅರೇಂಜ್ ಮ್ಯಾರೇಜ್? ಸಂಕೇತ್ ಎನು ಮಾಡ್ಕೊಂಡಿದ್ದಾರೆ? ಇವರಿಬ್ಬರದು ಎಷ್ಟು ವರ್ಷದ ಪರಿಚಯ ಅನ್ನೋದು ತಿಳಿದು ಬಂದಿಲ್ಲ. 
 

‘ರಾಜು ಕನ್ನಡ ಮೀಡಿಯಂ’, ‘ಮೀರಾಳ ಕೃಷ್ಣ’, ‘ರಾಮಾಚಾರಿ 2.0’, ‘ಭಗೀರಥ’ ಸಿನಿಮಾಗಳಲ್ಲಿ ನಟಿಸಿರುವ ಚಂದನಾ ರಾಘವೇಂದ್ರ ಸದ್ಯ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ನಟಿಸುವ ಮೂಲಕ ಜನ ಮನ ಗೆದ್ದಿರುವ ಸಿರಿಯರಿಗೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಮುದ್ದಾದ ಜೋಡಿ ಯಾವಾಗ್ಲೂ ನಗು ನಗುತ್ತಾ ಬಾಳುವಂತೆ ಹರಸಿದ್ದಾರೆ. 
 

ಇನ್ನು ಚಂದನ ಹಳದಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ (social media) ವೈರಲ್ ಆಗುತ್ತಿದ್ದಂತೆ, ಕೆಲವರು ನೆಗೆಟಿವ್ ಕಾಮೆಂಟ್ ಗಳನ್ನ ಕೂಡ ಮಾಡಿದ್ದು, ನಿಮಗೆ ಬೇರೆ ಯಾರೂ ಸಿಕ್ಕಿಲ್ವಾ? ಅಂತಾನೂ ಪ್ರಶ್ನಿಸಿದ್ದಾರೆ. ಅದಕ್ಕೆ ಕೆಲವು ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿ, ಚಂದನಾ ತಮಗೆ ಇಷ್ಟವಾಗಿರೋರನ್ನ ಮದ್ವೆಯಾಗಿದ್ದಾರೆ, ಕೊಂಕು ಮಾತು ಏಕೆ ಅಂತಾನೂ ಪ್ರಶ್ನಿಸಿದ್ದಾರೆ. 
 

Latest Videos

click me!