ನಿವೇದಿತಾ ಗೌಡ: ಗಂಡ ಬಿಟ್ಟರೆ ಜೀವನವೇ ಮುಗಿತು ಅಂತಾರೆ, ನೀವು ತುಂಬಾ ಖುಷಿಯಾಗಿದ್ದೀರಿ!

First Published | Sep 1, 2024, 9:15 PM IST

ಬೆಂಗಳೂರು (ಸೆ.01): ನಟಿ ನಿವೇದಿತಾ ಗೌಡ, ಚಂದನ್‌ಶೆಟ್ಟಿಗೆ ಡಿವೋರ್ಸ್ ನೀಡಿದ ನಂತರ ತರಹೇವಾರಿ ರೀಲ್ಸ್‌ಗಳು, ಸುಂದರ ಫೋಟೋಗಳು ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ನಿವೇದಿತಾ ಗೌಡ ಸಂತಸದಿಂದ ಇರುವುದನ್ನು ನೋಡಿದ ಅಭಿಮಾನಿಯೊಬ್ಬ 'ನಮ್ಮ ಕಡೆ ಗಂಡ ಬಿಟ್ಟರೆ ಜೀವನವೇ ಮುಗಿತು ಅಂತಾರೆ, ನೀವು ಬಿಟ್ಟ ಮೇಲೆ ತುಂಬಾ ಖುಷಿಯಾಗಿದ್ದೀರಿ' ಎಂದು ಕಾಮೆಂಟ್ ಮಾಡಿದ್ದಾನೆ.

ಬಾರ್ಬಿಡಾಲ್ ಖ್ಯಾತಿಯ ರೀಲ್ಸ್ ರಾಣಿ ಕಮ್ ನಟಿ ನಿವೇದಿತಾ ಗೌಡ ಅವರು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಹಸಿರು ಸೀರೆ, ಕೆಂಪು ರವಿಕೆ ತೊಟ್ಟು ದೇವಸ್ಥಾನ ಹಾಗೂ ಬೆಟ್ಟ    ಗುಡ್ಡಗಳನ್ನು ಹೊಂದಿದ ಡಾರ್ಕ್‌ ಬ್ಯಾಕ್‌ಗ್ರೌಂಡ್ ಹೊಂದಿದ ಸ್ಥಳದಲ್ಲಿ ಫೋಟೋ ಶೂಟ್ ಮಾಡಿಸಿಕೊಂಡು ಹಂಚಿಕೊಂಡಿದ್ದಾರೆ. ನಿನ್ನೆಯಿಂದಲೂ ಈ ಫೋಟೋಶೂಟ್‌ನ ಒಂದೊಂದೇ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ಭರಪೂರ ಶಭಾಶ್‌ಗಿರಿ ಪಡೆಯುತ್ತಿದ್ದಾರೆ. ನಿವೇದಿತಾ ಅಭಿಮಾನಿಗಳು ಅವರ ನಗುಮುಖದ ಸುಂದರ ಫೋಟೋಗಳನ್ನು ನೋಡಿ ಫುಲ್ ಖುಷ್, ದಿಲ್ ಖುಷ್ ಎಂಬಂತಾಗಿದ್ದಾರೆ.

ಏಕಾಂತತೆ: ನಿವೇದಿತಾ ಗೌಡ ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಅಥವಾ ಬೆಂಗಳೂರಿನ ಹೊರ ವಲಯದ ಹಳೆಯ ಕಾಲದ ದೇವಾಲಯದಲ್ಲಿ ಸಂಜೆ ಸೂರ್ಯಾಸ್ತಮಾನದ ವೇಳೆ ಫೋಟೋ ಶೂಟ್ ಮಾಡಿಸಿದ್ದಾರೆ. ಇದಕ್ಕೆ ಸಂಜೆಯ ಹೊತ್ತಿಗಾಗಿ, ಸೂರ್ಯನ ಕೊನೆಯ ಬೆಳಕಿನ ಕಿರಣಗಳು, ಗೋಧೂಳಿ ಸಮಯಕ್ಕಾಗಿ ಕಾದು ಕುಳಿತು ಫೋಟೋ ತೆಗೆಸಿಕೊಂಡಿದ್ದಾರೆ. ಈ ಅವಧಿಯಲ್ಲಿ ದೇವಸ್ಥಾನವೊಂದರ ಜಗುಲಿ, ಮಂಟಪವೊಂದರ ನೆಲಹಾಸಿನ ಮೇಲೆ ಏಕಾಂತವಾಗಿ ಕುಳಿತು ಪೋಸ್ ಕೊಟ್ಟಿದ್ದಾರೆ. ಅವರ ಈ ಏಕಾಂತ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

Tap to resize

ಈ ಫೋಟೋಗಳನ್ನು ಕ್ಯಾಮೆರಾಮ್ಯಾನ್ ಸುಹಾಸ್ ಸಪ್ತಗಿರಿ ಅವರು ಸೆರೆ ಹಿಡಿದಿದ್ದಾರೆ. ಬಹುಶಃ ಮೇಲುಕೋಟೆಯಲ್ಲಿ ಈ ಫೋಟೋಗಳನ್ನು ಸೆರೆಹಿಡಿದಿರಬಹುದು ಎಂದು ಊಹಿಸಿದರೂ, ಅದನ್ನು ಸ್ವತಃ ನಿವೇದಿತಾ ಹಾಗೂ ಅವರ ಕ್ಯಾಮೆರಾಮ್ಯಾನ್ ತಂಡವೇ ಸ್ಪಷ್ಟಪಡಿಸಬೇಕು. ಇನ್ನು ಹಸಿರು ಸೀರೆಯನ್ನುಟ್ಟು ಬಿಂಕದ ಸಿಂಗಾರಿಯಂತೆ ಫೋಟೋಗಳಿಗೆ ಪೋಸ್ ಕೊಟ್ಟಿದ್ದಲ್ಲದೇ, ಸೂರ್ಯಾಸ್ತಕ್ಕೂ ಮುನ್ನ ಮಾಡಿದ ವಿಡಿಯೋ ಶೂಟಿಂಗ್‌ನಲ್ಲಿ ತಮ್ಮ ವೈಯಾರ ಪ್ರದರ್ಶನ ಮಾಡಿದ್ದಾರೆ.

ಸೂರ್ಯನ ಕಿರಣಕ್ಕೆ ಹೊಳಪಿನ ಮೈಬಣ್ಣದ ನಿವೇದಿತಾ ಗೌಡಳನ್ನು ನೋಡಲು ಎರಡು ಕಣ್ಣು ಸಾಲದು. ಇನ್ನು ಮದುವೆಗೂ ಮುನ್ನ ಟಿಕ್‌ಟಾಕ್‌ನಲ್ಲಿ ರೀಲ್ಸ್ ಮಾಡುವಾಗ ಬಾರ್ಬಿಡಾಲ್ ಎಂಬ ಖ್ಯಾತಿಗೆ ಕಾರಣವಾಗಿದ್ದ ಉದ್ದನೆಯ ಕೂದನ್ನು ಪುನಃ ಬೆಳೆಸಿಕೊಳ್ಳಲು ಮುಂದಾಗಿದ್ದಾರೆ. ಅಂಡುಡೊಂಕಾದ ಮೈಮಾಟ ಪ್ರದರ್ಶನಕ್ಕೆ ಉದ್ದನೆಯ ಕೂದಲು ಮತ್ತಷ್ಟು ಸೌಂದರ್ಯದ ಮೆರುಗನ್ನು ತುಂಬುತ್ತಿವೆ. ಒಟ್ಟಾರೆ, ನೀವು ಮದುವೆ ಆಗಿದ್ದಾಗ ಸಂತಸವಾಗಿದ್ದೀರೋ ಇಲ್ಲವೋ ಗೊತ್ತಿಲ್ಲ. ಆದರೆ, ಗಂಡನನ್ನು ಬಿಟ್ಟಮೇಲೆ ಹೆಚ್ಚು ಖುಷಿಯಾಗಿದ್ದೀರಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಡಿವೋರ್ಸ್ ಆಗಿ ಬೇರೆ ಬೇರೆ ಆಗಿದ್ದರೂ ಇದೀಗ ಇವರಿಬ್ಬರೇ ಜೋಡಿ ಆಗಿರುವ ಮುದ್ದು ರಾಕ್ಷಸಿ ಸಿನಿಮಾದ ಫೋಟೋವೊಂದನ್ನು ರಿಲೀಸ್ ಮಾಡಿದ್ದಾರೆ. ಇದಕ್ಕೆ ನೆಟ್ಟಿಗರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಇದೇನು ನೀವಿಬ್ಬರೂ ಸಿನಿಮಾ ಅಭಿಮಾನಿಗಳೊಂದಿಗೆ ಆಟವಾಡುತ್ತಿದ್ದೀರಾ? ಎಂದು ಪ್ರಶ್ನೆ ಮಾಡಿದ್ದಾರೆ. ಇತ್ತೀಚೆಗೆ ಡಿವೋರ್ಸ್ ಪಡೆದು ಬೇರೆ ಬೇರೆ ಆಗಿರುವ ನೀವು ಪುನಃ ಸಿನಿಮಾದಲ್ಲಿ ಪ್ರೇಮಿಗಳಾಗಿ ಕಾಣಿಸಿಕೊಂಡು ತಬ್ಬಿಕೊಂಡು ನಿಂತಿದ್ದೀರಿ. ಏನಿದರ ಮರ್ಮ ಎಂದು ನೆಟ್ಟಿಗರು ಗರಂ ಆಗಿಯೇ ಪ್ರಶ್ನೆ ಕೇಳಿದ್ದಾರೆ.

ಚಂದನ್ ಶೆಟ್ಟಿಗೆ ಬುದ್ಧಿವಂತನ ಪಟ್ಟ ಕೊಟ್ಟ ನೆಟ್ಟಿಗ: ರ್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರ ಮುದ್ದು ರಾಕ್ಷಸಿ ಸಿನಿಮಾ ಪೋಸ್ಟರ್ ರಿಲೀಸ್ ಆಗುತ್ತಿದ್ದಂತೆಯೇ ಚಂದನ್ ಶೆಟ್ಟಿಗೆ ನೆಟ್ಟಿಗರು ಬುದ್ಧಿವಂತನೆಂಬ ಪಟ್ಟ ಕೊಟ್ಟಿದ್ದಾರೆ. 'ಚಂದನ್ ಶೆಟ್ಟಿ ಬುದ್ದಿವಂತ.. 'ಮುದ್ದು ಎನ್ನವುದನ್ನು ಇವನ ಸೈಡ್ ಇಟ್ಟುಕೊಂಡು, ರಾಕ್ಷಸಿ ಎನ್ನುವ ಪದವನ್ನು ಅವಳ (ನಿವೇದಿತಾ) ಕಡೆ ಇಟ್ಟವನೆ. ಸಿನಿಮಾ ಹೆಸರಿನಲ್ಲಿ ಬೆಸ್ಟ್ ರಿವೇಂಜ್' ತೀರಿಸಿಕೊಂಡಿದ್ದಾನೆ ಎಂದು ಕಾಮೆಂಟ್ ಮಾಡಿದ್ದಾರೆ. ಇವರ ಕಾಮೆಂಟ್‌ ಅನ್ನು ಕೂಡ ಕೆಲವರು ಲೈಕ್ ಮಾಡಿದ್ದಾರೆ.

ಪಾಸಿಟಿವ್ ಕಾಮೆಂಟ್ಸ್ ಆರಂಭ: ನಟಿ ನಿವೇದಿತಾ ಗೌಡ ಡಿವೋರ್ಸ್ ನಂತರ ತುಸು ಸಂತಸವಾಗಿದ್ದಾಳೆ ಎಂದೇ ಹೇಳಬಹುದು. ತನಗಿಷ್ಟವಾದ ತುಂಡುಡುಗೆಗಳನ್ನು ಧರಿಸಿ ರೀಲ್ಸ್ ಮಾಡುತ್ತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇಷ್ಟು ದಿನ ನಿವೇದಿತಾಳ ಪೋಸ್ಟ್‌ಗಳಿಗೆ ಕೆಟ್ಟ ಕಾಮೆಂಟ್‌ ಮಾಡುತ್ತಿದ್ದ ನೆಟ್ಟಿಗರು ಈಗ ಪ್ರೀತಿ ತೋರಿಸಲು ಮುಂದಾಗಿದ್ದಾರೆ. ನಿವೇದಿತಾ ಗೌಡ ಸೌಂದರ್ಯಕ್ಕೆ ಮಾರು ಹೋಗಿರುವ ಅಭಿಮಾನಿಗಳು ನಿವಿ ನೀನು ಬ್ಯೂಟಿಫುಲ್, ಮುದ್ದು ಬಂಗಾರಿ, ಮನಮೋಹಕ ತಾರೆ, ಅಪ್ಸರೆ ಎಂತೆಲ್ಲಾ ಹೊಗಳಿಕೆ ಆರಂಭಿಸಿದ್ದಾರೆ.

Latest Videos

click me!