ಕೆಂಪು ಕಲರ್ ಅಲ್ಲ ಆಟಿಟ್ಯೂಡ್ ಎಂದ ಜ್ಯೋತಿ ರೈ, ಹುಡುಗರ ಕಣ್ಣು ಮಾತ್ರ ಹೋಗಿದ್ದು ಬೇರೆಡೆ!

First Published | Aug 7, 2024, 5:39 PM IST

ಪ್ರತಿದಿನ ತಮ್ಮ ಹೊಸ ಹೊಸ ಫೋಟೋ ಶೂಟ್ ಮೂಲಕ ಇಂಟರ್ನೆಟ್ ನಲ್ಲಿ ಟೆಂಪ್ರೇಚರ್ ಹೆಚ್ಚಿಸುತ್ತಿರೋ ನಟಿ ಜ್ಯೋತಿ ರೈ ಇದೀಗ ಮತ್ತಷ್ಟು ಫೋಟೋ ಶೇರ್ ಮಾಡಿದ್ದಾರೆ. 
 

ಜ್ಯೋತಿ ರೈ (Jyothi Rai) ಎಂದ ಕೂಡ್ಲೇ ನೆನಪಾಗೋದು ಹಿಂದೆ ಸೀರಿಯಲ್‌ಗಳಲ್ಲಿ ಸೀರೆಯುಟ್ಟು ಗರತಿ ಗೌರಮ್ಮನಂತೆ ನಟಿಸ್ತಿದ್ದ ಜ್ಯೋತಿ ಖಂಡಿತಾ ಅಲ್ಲ, ಬದಲಾಗಿ ಬೋಲ್ಡ್ ಅವತಾರದಲ್ಲಿರುವ ಜ್ಯೋತಿ ರೈ. ಯಾಕಂದ್ರೆ ಆಕೆ ಅಷ್ಟೊಂದು ಬದಲಾಗಿದ್ದಾರೆ. 
 

ಹೌದು ಜ್ಯೋತಿ ಹೊಸ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಅಂದ್ರೆ ಸಾಕು ಸೋಶಿಯಲ್ ಮೀಡಿಯಾದಲ್ಲಿ ಟೆಂಪ್ರೇಚರ್ ಹೆಚ್ಚು ಮಾಡ್ತಿದ್ದಾರೆ ಅಂತಾನೆ ಹೇಳಬಹುದು. ಯಾಕಂದ್ರೆ ನಟಿ ಅಪ್ ಲೋಡ್ ಮಾಡೋ ಫೋಟೋಗಳೇ ಅಂತದ್ದು. 
 

Tap to resize

ನೀಳ ಮೂಗು, ಕಾಸಗಲ ಕಣ್ಣು, ಹೂಬಿರಿದಂತ ನಗುವಿನ ಒಡತಿಯಾಗಿರುವ ಈ ಮಂಗಳೂರಿನ ಚೆಲುವೆ ಜ್ಯೋತಿ ರೈ, ಸದ್ಯಕ್ಕಂತೂ ಸೀರಿಯಲ್‌ಗಳಲ್ಲಿನ (serial) ಗೃಹಿಣಿ ಪಾತ್ರಗಳಿಗೆ ಗುಡ್ ಬೈ ಹೇಳಿ ಸಿನಿಮಾಗಳು, ವೆಬ್ ಸೀರೀಸ್‌ಗಳಲ್ಲಿ ತುಂಬಾನೆ ಬ್ಯುಸಿಯಾಗಿದ್ದಾರೆ. 
 

ವೆಬ್ ಸೀರೀಸ್‌ಗಳಲ್ಲಿ ನಟಿಸುವ ಎಫೆಕ್ಟ್ ಎಂಬಂತೆ ನಟಿ ಪ್ರತಿದಿನ ಒಂದಲ್ಲೊಂದು ಬೋಲ್ಡ್, ಸ್ಟೈಲಿಶ್ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಜ್ಯೋತಿ ರೈ ಬೋಲ್ಡ್ ಲುಕ್‌ಗೆ (bold look) ಅಭಿಮಾನಿಗಳು ಫಿದಾ ಆಗಿರೋದಂತೂ ನಿಜ. ಇವರನ್ನ ನೋಡಿ ನೀವು ನಿಜವಾದ ಹೀರೋಯಿನ್ ಮೆಟೀರಿಯಲ್ ಅಂತಾನೂ ಹೇಳ್ತಿದ್ದಾರೆ. 
 

ಇವತ್ತು ಕೂಡ ಜ್ಯೋತಿ ತಮ್ಮ ಇನ್’ಸ್ಟಾಗ್ರಾಂ ಖಾತೆಯಲ್ಲಿ (Instagram Account) ಒಂದಷ್ಟು ಕ್ಲೋಸಪ್ ಫೋಟೋಗಳನ್ನು ಶೇರ್ ಮಾಡಿದ್ದು, ನಟಿಯ ಆಟಿಟ್ಯೂಡ್, ಸ್ಟೈಲ್, ಕಣ್ಣೋಟ, ನಗುವಿಗೆ ಅಭಿಮಾನಿಗಳು ಅದ್ರಲ್ಲೂ ಹುಡುಗರು ಬಿದ್ದೋಗಿದ್ದಾರೆ. ಹಾಗಂತ ನಾವು ಹೇಳ್ತಿಲ್ಲ, ಫ್ಯಾನ್ಸ್ ಕಾಮೆಂಟ್ ಮಾಡುವ ಮೂಲಕ ತಿಳಿಸಿದ್ದಾರೆ. 
 

ಕೆಂಪು ಬಣ್ಣದ ಬ್ಲೇಜರ್ ರೀತಿಯ ಡ್ರೆಸ್ ಧರಿಸಿರುವ ಜ್ಯೋತಿ ರೈ, ಕ್ಲೋಸಪ್ ಫೋಟೋಗಳನ್ನ ಶೇರ್ ಮಾಡಿ, Red is not just a color; it’s an attitude, a statement of fearless beauty ಎಂದು ಕ್ಯಾಪ್ಶನ್ ಹಾಕಿದ್ದಾರೆ. ಆದ್ರೆ ಹುಡುಗರ ಕಣ್ಣು ಮಾತ್ರ ನಟಿಯ ಎದೆಯ ಮೇಲಿನ ಟ್ಯಾಟೂ ಮೇಲಿದ್ದು, ಟ್ಯಾಟೂ ಸಖತ್ತಾಗಿದೆ ಎಂದಿದ್ದಾರೆ. 
 

ಜ್ಯೋತಿ ರೈ ಗಂಡ ಪೂರ್ವಜ್ (Poorvaj) ಕಾಮೆಂಟ್ ಮಾಡಿದ್ದು, ಫೀಮೇಲ್ ಇಂಟರ್’ಪೋಲ್ ಆಫೀಸರ್ ತಮ್ಮ ಇಂಟಲಿಜೆನ್ಸ್ ಮತ್ತು ಬುದ್ದಿವಂತಿಕೆಯಿಂದ ಶೈನ್ ಆಗ್ತಾರೆ ಎಂದಿದ್ದಾರೆ. ಅದಕ್ಕೆ ಜ್ಯೋತಿ ರಿಪೋರ್ಟಿಂಗ್ ಸರ್ ಎಂದು ಉತ್ತರ ನೀಡಿದ್ದಾರೆ. ಇನ್ನು ಅಭಿಮಾನಿಗಳು ಸಹ ನಟಿಯ ಅಂದ ಹೊಗಳುತ್ತಾ ದೇವತೆ ಎಂದಿದ್ದಾರೆ. 
 

Latest Videos

click me!