ಈ ಹಿಂದೆ ರಾಮಾಚಾರಿ ಧಾರಾವಾಹಿಯಲ್ಲಿ ರಾಮಾಚಾರಿಯ ತಂಗಿ ಪಾತ್ರದಲ್ಲಿ ನಟಿಸಿದ್ದ ರಾಧಾ, ನಂತರ ಅಮೃತಧಾರೆಯಲ್ಲಿ ಕಾಣಿಸಿಕೊಂಡರು. ಅಷ್ಟೇ ಅಲ್ಲ ಇವರು ಈಗಾಗಲೇ ಅಪಾಯವಿದೆ ಎಚ್ಚರಿಕೆ, ವಸಂತ ಕಾಲದ ಹೂವುಗಳು, ಒಂದ್ಸಲ ಮೀಟ್ ಮಾಡೋಣ ಮೊದಲಾದ ಸಿನಿಮಾಗಳಲ್ಲೂ ನಟಿಸಿದ್ದಾರೆ. ಈಕೆ ಹಿನ್ನೆಲೆ ಗಾಯಕಿ, ಕಂಠದಾನ ಕಲಾವಿದೆಯೂ ಹೌದು.