ತಾಯಿಯಾಗುತ್ತಿದ್ದಾರೆ ಲಕ್ಷ್ಮೀ ಬಾರಮ್ಮ ಖ್ಯಾತಿಯ ಗಂಗಕ್ಕಾ: ನಟಿ ಹರ್ಷಿತಾ ಬೇಬಿ ಬಂಪ್ ಲುಕ್ ವೈರಲ್!

Published : Jun 15, 2025, 12:44 PM IST

ಕನ್ನಡದ ಕಿರುತೆರೆಯ ನಟಿ ಹರ್ಷಿತಾ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೇ ಖುಷಿಯಲ್ಲಿ 6 ತಿಂಗಳ ತುಂಬು ಗರ್ಭಿಣಿಯಾಗಿ ಬೇಬಿ ಬಂಪ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

PREV
16

ಕಿರುತೆರೆಯ ಲಕ್ಷ್ಮೀ ಬಾರಮ್ಮ ಧಾರಾವಾಹಿ ಮುಕ್ತಾಯಗೊಂಡರು ಗಂಗಕ್ಕಾ ಪಾತ್ರವನ್ನು ವೀಕ್ಷಕರು ಮರೆತಿಲ್ಲ. ಹೌದು! ಈ ಸೀರಿಯಲ್​ನಲ್ಲಿ ಗಂಗಾ ಪಾತ್ರದಲ್ಲಿ ನಟಿಸಿದ್ದ ನಟಿ ಹರ್ಷಿತಾ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

26

ಕನ್ನಡದ ಕಿರುತೆರೆಯ ನಟಿ ಹರ್ಷಿತಾ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೇ ಖುಷಿಯಲ್ಲಿ 6 ತಿಂಗಳ ತುಂಬು ಗರ್ಭಿಣಿಯಾಗಿ ಬೇಬಿ ಬಂಪ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದು, ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

36

ಪ್ಲವರ್ ಪ್ರಿಂಟೆಡ್ ರೆಡ್ ಕಲರ್ ಸೀರೆಯಲ್ಲಿ ಹರ್ಷಿತಾ ಮುದ್ದಾಗಿ ಕಾಣಸಿಕೊಂಡಿದ್ದು, ಬೇಬಿ ಬಂಪ್​ ಲುಕ್​ ಕೊಟ್ಟಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಹರ್ಷಿತಾ ಶುಭಹಾರೈಸಿದ್ದಾರೆ.

46

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ 'ಕನ್ನಡತಿ' ಧಾರಾವಾಹಿಯಲ್ಲಿ ಪತ್ರಕರ್ತೆ ಪೂಜಾಳಾಗಿ ಈಕೆ ನಟಿಸಿದ್ದರು. ಅಂದ ಹಾಗೇ ಪೂಜಾ ಪಾತ್ರ ಸಂಪೂರ್ಣ ನೆಗೆಟಿವ್ ರೋಲ್ ಎಂದು ಹೇಳಿದರೆ ತಪ್ಪಾಗಲಾರದು.

56

ಇಂಜಿನಿಯರಿಂಗ್ ಪದವಿ ಪಡೆದಿರುವ ಹರ್ಷಿತಾ ಮೂಲತಃ ತುಮಕೂರು ಜಿಲ್ಲೆಯ ಮಧುಗಿರಿಯವರು. ಮಜಾ ಭಾರತ ರಿಯಾಲಿಟಿ ಶೋ, ಲಕ್ಷ್ಮೀ ಬಾರಮ್ಮ, ಶ್ರಾವಣಿ ಸುಬ್ರಮಣ್ಯ ಧಾರಾವಾಹಿ, ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಸುಂದರಿ, ಜೋಗ್​ 101 ಸಿನಿಮಾ ಸೇರಿದಂತೆ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

66

ಇನ್ನು ಖಾಸಗಿ ವಾಹಿನಿಯಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡಿರುವ ಈಕೆ ಹತ್ತು ಹಲವು ಈವೆಂಟ್‌ಗಳ ನಿರೂಪಣೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಅಂದ ಹಾಗೇ ಹರ್ಷಿತಾ ಅವರಿಗೆ ಸಿನಿಮಾ ಹೊಸದೇನಲ್ಲ. ಈ ಹಿಂದೆ 'ಗಜಾನನ ಅಂಡ್ ಗ್ಯಾಂಗ್' ಸಿನಿಮಾದಲ್ಲಿ ಈಕೆ ಅಭಿನಯಿಸಿದ್ದರು.

Read more Photos on
click me!

Recommended Stories