ಎಲ್ಲರ ಅನುಮತಿ ಪಡೆದು ಮಹಾನಟಿ ಸ್ಪರ್ಧಿ ವರ್ಷಾಗೆ ಬಿರುದು ನೀಡಿದ ಆಂಕರ್ ಅನುಶ್ರೀ!

Published : Jun 15, 2025, 09:40 AM IST

Mahanati Season 2: ಚಿಕ್ಕೋಡಿಯ ವರ್ಷಾ ಡಿಗ್ರಜೆ ಮಹಾನಟಿ ರಿಯಾಲಿಟಿ ಶೋನಲ್ಲಿ ಆಯ್ಕೆಯಾಗಿ ಗೋಲ್ಡನ್ ಟಿಕೆಟ್ ಪಡೆದಿದ್ದಾರೆ. ಓದು ಮುಗಿಸಿ ಸಾಲ ತೀರಿಸಿ ಬಣ್ಣದ ಲೋಕಕ್ಕೆ ಕಾಲಿಟ್ಟ ವರ್ಷಾ ಅವರಿಗೆ ನಿರೂಪಕಿ ಅನುಶ್ರೀ ಬಿರುದು ನೀಡಿದ್ದಾರೆ.

PREV
16

ಜೀ ಕನ್ನಡ ವಾಹಿನಿಯಲ್ಲಿ ಶನಿವಾರದಿಂದ ಮಹಾನಟಿ ಸೀಸನ್ 2 ರಿಯಾಲಿಟಿ ಶೋ ಆರಂಭಗೊಂಡಿದೆ. ಶನಿವಾರ ಮಹಾನಟಿ ರಿಯಾಲಿಟಿ ಶೋ ಅದ್ಧೂರಿಯಾಗಿ ಆರಂಭಗೊಂಡಿದೆ. ಮೊದಲ ದಿನವೇ ಸ್ಪರ್ಧಿಯೊಬ್ಬರಿಗೆ ವಿಶೇಷ ಬಿರುದು ನೀಡಲಾಗಿದೆ. ನಿರೂಪಕಿ ಅನುಶ್ರೀ ಎಲ್ಲರ ಅನುಮತಿ ಪಡೆದು ಈ ಬಿರುದು ನೀಡಿದ್ದಾ

26

ಮೊದಲ ಸಂಚಿಕೆಯಲ್ಲಿ ಮೈಸೂರಿನ ಸಿಂಚನ ಆರ್, ಚಿಕ್ಕೋಡಿಯ ವರ್ಷಾ ಡಿಗ್ರಜೆ, ಬೆಂಗಳೂರಿನ ಪೂಜಾ ರಮೇಶ್, ದಕ್ಷಿಣ ಕನ್ನಡದ ವಂಶಿ ಮತ್ತು ಬೆಳಗಾವಿಯ ಖುಷಿ ಮಹಾನಟಿ ರಿಯಾಲಿಟಿ ಶೋಗೆ ಆಯ್ಕೆಯಾಗಿ ನಟ ರಮೇಶ್ ಅರವಿಂದ್ ಅವರಿಂದ ಗೋಲ್ಡನ್ ಟಿಕೆಟ್ ಪಡೆದುಕೊಂಡಿದ್ದಾರೆ.

36

ಚಿಕ್ಕೋಡಿಯ ವರ್ಷಾ ಡಿಗ್ರಜೆ ಶೋಗೆ ಸೆಲೆಕ್ಟ್ ಬಳಿಕ ತಮ್ಮ ಕುರಿತ ಹಲವು ವಿಷಯಗಳನ್ನು ಹಂಚಿಕೊಂಡರು. ತಮ್ಮ ಮನೆಯಲ್ಲಿ ಓದಿದವಳು ಮೊದಲಿಗಳು ನಾನೇ, ಓದಬೇಕೆಂಬ ಛಲದಿಂದ ಸಾಲ ಪಡೆದುಕೊಂಡಿದ್ದರು. ಇದೀಗ ಎಲ್ಲಾ ಸಾಲ ಪಾವತಿಸಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ಹೀಗೆ ತಮ್ಮ ಕಷ್ಟದ ಜೀವನದ ಬಗ್ಗೆ ವರ್ಷಾ ಮಾತಾಡಿದ್ದಾರೆ.

46

ವರ್ಷಾ ಡಿಗ್ರಜೆ ಮಾತುಗಳನ್ನು ಕೇಳಿದ ಶೋ ನಿರೂಪಕಿ ಅನುಶ್ರೀ ವಿಶೇಷ ಬಿರುದನ್ನು ಎಲ್ಲರ ಸಮ್ಮುಖದಲ್ಲಿ ನೀಡಿದರು. ನಿಮ್ಮ ಜೀವನ ಬಹುತೇಕರಿಗೆ ಸ್ಪೂರ್ತಿಯಾಗಲಿದೆ ಎಂದು ಹೇಳಿದರು. ಚಂದನವನದ ನಟ-ನಟಿಯರಿಗೆ ಅಭಿಮಾನಿಗಳು ವಿಶೇಷ ಬಿರುದು ನೀಡುತ್ತಾರೆ. ಇದೀಗ ಸ್ಪರ್ಧಿ ವರ್ಷಾ ಡಿಗ್ರಜೆ ಮೊದಲ ನಟನೆಯಲ್ಲಿ ವಿಶೇಷ ಬಿರುದು ತಮ್ಮದಾಗಿಸಿಕೊಂಡಿದ್ದಾರೆ.

56

ಚಂದನವನದ ನಟ ದರ್ಶನ್‌ ಅವರನ್ನು ಅಭಿಮಾನಿಗಳು ಚಾಲೆಂಜಿಂಗ್ ಸ್ಟಾರ್ ಎಂದು ಕರೆಯುತ್ತಾರೆ. ದರ್ಶನ್ ಹಿರಿತೆರೆಗೆ ಚಾಲೆಂಜಿಂಗ್ ಸ್ಟಾರ್ ಆದ್ರೆ, ನಮ್ಮ ಸ್ಪರ್ಧಿ ವರ್ಷಾ ಡಿಗ್ರಜೆ ಕಿರುತೆರೆಗೆ ಚಾಲೆಂಜಿಂಗ್ ಸ್ಟಾರ್ ಎಂದು ಅನುಶ್ರೀ ಘೋಷಿಸಿದರು. ಈ ವೇಳೆ ದರ್ಶನ್ ಅಭಿಮಾನಿಗಳ ಒಪ್ಪಿಗೆ ಕೇಳಿಕೊಂಡು ಈ ಬಿರುದು ನೀಡಿದರು.

66

ಹಿರಿಯ ನಟಿ ಪ್ರೇಮಾ, ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ನಿಶ್ವಿಕಾ ಈ ರಿಯಾಲಿಟಿ ಶೋನ ತೀರ್ಪುಗಾರರಾಗಿದ್ದಾರೆ. ನಟ ರಮೇಶ್ ಅರವಿಂದ್ ಶೋನ ಮಾಸ್ಟರ್ ಮೈಂಡ್ ಆಗಿದ್ದಾರೆ. ಶನಿವಾರದ ಸಂಚಿಕೆಯಲ್ಲಿ ಡ್ರಾಮಾ ಜೂನಿಯರ್ ಶೋ ವಿನ್ನರ್ ವಂಶಿ ಸಹ ಮಹಾನಟಿಗೆ ಆಯ್ಕೆಯಾಗಿರೋದು ವಿಶೇಷ.

Read more Photos on
click me!

Recommended Stories