ಸ್ಟೈಲ್ ಐಕಾನ್ ಅವಾರ್ಡ್ ಪಡೆದ ಕೀರ್ತಿ… ಜನ ಮೆಚ್ಚಿದ ನಟಿ ಪ್ರಶಸ್ತಿ ಕೂಡ ನಿಮಗೇ ಸಿಗ್ಲಿ ಎಂದು ಹಾರೈಸ್ತಿದ್ದಾರೆ ಫ್ಯಾನ್ಸ್

Published : Sep 21, 2024, 04:32 PM ISTUpdated : Sep 21, 2024, 06:09 PM IST

ಅನುಬಂಧ ಅವಾರ್ಡ್ಸ್ ಈಗಾಗಲೇ ಶುರುವಾಗಿದ್ದು, ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಕೀರ್ತಿ ಜನಮೆಚ್ಚಿದ ಸ್ಟೈಲ್ ಐಕಾನ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆದರೆ ಫ್ಯಾನ್ಸ್ ಮಾತ್ರ ನಟಿಗೆ ಬೇರೇನೋ ಪ್ರಶಸ್ತಿ ಸಿಗಬೇಕು ಎಂದು ಬಯಸ್ತಿದ್ದಾರೆ.   

PREV
18
ಸ್ಟೈಲ್ ಐಕಾನ್ ಅವಾರ್ಡ್ ಪಡೆದ ಕೀರ್ತಿ… ಜನ ಮೆಚ್ಚಿದ ನಟಿ ಪ್ರಶಸ್ತಿ ಕೂಡ ನಿಮಗೇ ಸಿಗ್ಲಿ ಎಂದು ಹಾರೈಸ್ತಿದ್ದಾರೆ ಫ್ಯಾನ್ಸ್

ಕಲರ್ಸ್ ಕನ್ನಡ ವಾಹಿನಿಯ ವರ್ಷದ ಹಬ್ಬವಾದ ಅನುಬಂಧ ಅವಾರ್ಡ್ಸ್ (Anubandha Awards) ಕಾರ್ಯಕ್ರಮ ಅದ್ಧೂರಿಯಾಗಿ ಮೂಡಿ ಬರುತ್ತಿದ್ದು, ಮೊದಲ ದಿನ 15-20 ಕೆಟಗರಿಗಳಲ್ಲಿ ಪ್ರಶಸ್ತಿ ನೀಡಿಯಾಗಿದೆ. ಅದರಲ್ಲಿ ಜನಮೆಚ್ಚಿದ ಸ್ಟೈಲ್ ಐಕಾನ್ ಪ್ರಶಸ್ತಿಯನ್ನು ಲಕ್ಷ್ಮೀ ಬಾರಮ್ಮ ಸೀರಿಯಲ್ ನಟಿ ಕೀರ್ತಿ ಪಡೆದುಕೊಂಡಿದ್ದಾರೆ. 

28

ಕೀರ್ತಿ ಎನ್ನುವ ಸ್ಟೈಲಿಶ್ ಮಾಡರ್ನ್ ಹುಡುಗಿಯ ಪಾತ್ರದಲ್ಲಿ ಮಿಂಚುತ್ತಿರುವ ತನ್ವಿ ರಾವ್ (Tanvi Rao), ಕಳೆದ ವರ್ಷದ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದಲ್ಲೂ ಕೀರ್ತಿ ಪಾತ್ರಕ್ಕೆ ಸ್ಟೈಲ್ ಐಕಾನ್ ಪ್ರಶಸ್ತಿ ಪಡೆದಿದ್ದರು. ಇದೀಗ ನಟಿ ಮತ್ತೆ ಜನಮೆಚ್ಚಿದ ಸ್ಟೈಲ್ ಐಕಾನ್ ಪ್ರಶಸ್ತಿ ಪಡೆದಿದ್ದು,ತಮ ಈ ಪ್ರಶಸ್ತಿ ಸಿಕ್ಕಿರೋದಕ್ಕಾಗಿ ನಟಿ ಸಂಭ್ರಮಿಸಿದ್ದಾರೆ. 

38

ಕೀರ್ತಿ ಜನಮೆಚ್ಚಿದ ಸ್ಟೈಲ್ ಐಕಾನ್ ಪ್ರಶಸ್ತಿ (Style Icon Award) ಪಡೆದಿರೋದಕ್ಕೆ ಸೀರಿಯಲ್ ವೀಕ್ಷಕರು ತಾವೇ ಪ್ರಶಸ್ತಿ ಗೆದ್ದಷ್ಟು ಸಂಭ್ರಮಿಸಿದ್ದಾರೆ. ಅದರ ಜೊತೆಗೆ ಕೀರ್ತಿಗೆ ಇನ್ನೂ ಒಂದು ಪ್ರಶಸ್ತಿ ಸಿಗಬೇಕು ಎಂದು ಹಾರೈಸಿದ್ದಾರೆ. ಹೌದು, ತನ್ನ ಅದ್ಭುತ ನಟನೆಯಿಂದ ವೀಕ್ಷಕರ ಮನಸ್ಸು ಗೆದ್ದಿರುವ ತನ್ವಿ ರಾವ್ ಗೆ ಜನಮೆಚ್ಚಿದ ನಟಿ ಪ್ರಶಸ್ತಿ ಕೂಡ ಸಿಗಬೇಕು ಅನ್ನೋದು ಜನರ ಹಾರೈಕೆ. 

48

ಲಕ್ಷ್ಮೀ ಬಾರಮ್ಮ (Lakshmi Baramma) ಧಾರಾವಾಹಿಯಲ್ಲಿ ಕೀರ್ತಿಯನ್ನು ನೆಗೆಟಿವ್ ಅಲ್ಲದ, ಪಾಸಿಟಿವ್ ಅಲ್ಲದ ಪಾತ್ರವಾಗಿತ್ತು. ತನ್ನ ಪ್ರೀತಿಗಾಗಿ ಏನು ಮಾಡೋದಕ್ಕೂ ತಯಾರಿರುವ ಹಠಮಾರಿ ಆದರೆ ಪ್ರಾಮಾಣಿಕ ಹುಡುಗಿ ಕೀರ್ತಿ. ಕೊನೆಗೆ ಕಾವೇರಿಯ ಮೋಸಕ್ಕೆ ಕೀರ್ತಿ ಬಲಿಯಾಗ್ತಾಳೆ. ಅಲ್ಲಿಂದ ಶುರುವಾಗಿದೆ ಟ್ವಿಸ್ಟ್. 
 

58

ಕಾವೇರಿಯ ಪಾಪ ಪ್ರಜ್ಞೆ ಆಕೆಯನ್ನು ಸುಡುತ್ತಿದ್ದು, ಈಗ ಕಾವೇರಿಗೆ ಎಲ್ಲಿ ನೋಡಿದರೂ ಕೀರ್ತಿ ತನ್ನ ಹಿಂದೆ ಬಂದಂತೆ ಕಾಣಿಸುತ್ತಾಳೆ. ಈ ಟೈಮಲ್ಲಿ ಕೀರ್ತಿ ನಟಿಸಿದಂತೆ ಆ ದೆವ್ವದ ಪಾತ್ರ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ರು, ಇಂಥ ಮನೋಜ್ಞ ಅಭಿನಯವನ್ನು ಯಾರಿಂದಲೂ ಮಾಡಲು ಸಾಧ್ಯವೇ ಇಲ್ಲ, ಕೀರ್ತಿಗೆ ಕೀರ್ತಿಯೇ ಸರಿಸಾಟಿ ಎನ್ನುವಷ್ಟು ಅಮೋಘವಾಗಿ ನಟಿಸಿದ್ದರು ತನ್ವಿ ರಾವ್. 

68

ಕೀರ್ತಿಯ ಅಮೋಘ ಅಭಿನಯಕ್ಕೆ ಸೋತಿರುವ ಜನರು ನೀವು ಸೌಂದರ್ಯ ಮೇಡಂ 2.0 ಎಂದಿದ್ದಾರೆ. ನಟ ಭಯಂಕರಿ,  ಕೀರ್ತಿ ಇಲ್ಲದೇ ಲಕ್ಷ್ಮೀ ಬಾರಮ್ಮ ಸೀರಿಯಲ್ ಅಪೂರ್ಣ , ಎಕ್ಸ್’ಪ್ರೆಶನ್ ಕ್ವೀನ್,  ನಟನೆ ಅಂತ ಬಂದ್ರೆ ತನ್ವಿ ರಾವ್ ಫುಲ್ ಪ್ಯಾಕೇಜ್, ಎಲ್ಲಾ ರೀತಿಯ ಭಾವನೆಗಳನ್ನು ತೋರಿಸುವ ಮೂಲಕ ಪ್ರೇಕ್ಷಕರನ್ನು ಗೆಲ್ಲುವ ಶಕ್ತಿ ಅವರಲ್ಲಿದೆ ಎಂದಿದ್ದಾರೆ. 
 

78

ಇನ್ನು ಕಲರ್ಸ್ ಕನ್ನಡದವರು (COlors Kannada) ಕೀರ್ತಿ ಅಂದ್ರೆ ನಿಮಗೆ ಎಷ್ಟು ಇಷ್ಟ ಎಂದು ಒಂದು ಪದದಲ್ಲಿ ಹೇಳಿ ಅಂತ ಕೇಳಿದ್ದಕ್ಕೂ ಸಹ ತನ್ವಿ ರಾವ್ ಅಭಿಮಾನಿಗಳು ಕಾಮೆಂಟ್ ಮೂಲಕ ಉತ್ತರಿಸಿದ್ದು, ಕೀರ್ತಿಯನ್ನು ಒಂದೇ ಒಂದು ಪದದಲ್ಲಿ ವರ್ಣಿಸಲು ಅಸಾಧ್ಯ... ಕೀರ್ತಿಗೆ ತನ್ವಿ ರಾವ್ ಅವರೇ ಸರಿ ಸಾಟಿ, ಈಕೆ ಅದ್ಭುತ ಕಲಾವಿದೆ,  ಲಕ್ಷ್ಮೀ ಬಾರಮ್ಮ ಸೀರಿಯಲ್ ನೋಡೋದು ಸಹ ಕೀರ್ತಿಗೋಸ್ಕರ ಎಂದಿದ್ದಾರೆ ಜನ. 

88

ಅಲ್ವಾವಧಿಯಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿರುವ ತನ್ವಿ ರಾವ್ ಈಗಾಗಲೇ ಸ್ಟೈಲಿಶ್ ಐಕಾನ್ ಪ್ರಶಸ್ತಿ ಪಡೆದಿದ್ದು, ಜನರು ಮಾತ್ರ ಆಕೆಗೆ ಜನ ಮೆಚ್ಚಿದ ನಟಿ ಪ್ರಶಸ್ತಿ ಸಿಗಬೇಕು ಎಂದು ಹಾರೈಸಿದ್ದಾರೆ. ಈಗಾಗಲೇ ಒಂದು ಪ್ರಶಸ್ತಿ ಪಡೆದಿರುವ ನಟಿಗೆ ಕಾರ್ಯಕ್ರಮದಲ್ಲಿ ಇನ್ನೊಂದು ಅವಾರ್ಡ್ ಸಿಗುತ್ತಾ ಕಾದು ನೋಡಬೇಕು. 

click me!

Recommended Stories