Published : Sep 21, 2024, 12:39 PM ISTUpdated : Sep 21, 2024, 12:56 PM IST
ಅನುಬಂಧ ಅವಾರ್ಡ್ಸ್ ಕಾರ್ಯಕ್ರಮ ಈಗಾಗಲೇ ಆರಂಭವಾಗಿದ್ದು, ಮೂರು ದಿನದ ಕಾರ್ಯಕ್ರಮದಲ್ಲಿ ಮೊದಲ ದಿನ ಕಾರ್ತಿಕ್ ಮಹೇಶ್, ಕರ್ಣ, ತನ್ವಿ ರಾವ್ ಸೇರಿ ಹಲವರಿಗೆ ಅವಾರ್ಡ್ಸ್ ಬಂದಿದೆ. ಯಾರ್ಯಾರಿಗೆ ಯಾವೆಲ್ಲಾ ಅವಾರ್ಡ್ಸ್ ಬಂದಿದೆ ಅನ್ನೋದನ್ನ ನೋಡೋಣ,
ಭಾಗ್ಯ ಮತ್ತು ತಾಂಡವ್ ನ ಸಂಸಾರದ ಕಥೆಯಾಗಿರುವ ಭಾಗ್ಯಲಕ್ಷ್ಮೀ ಧಾರಾವಾಹಿಗೆ )Bhagya Lakshmi serial) ಬೆಸ್ಟ್ ರೇಟೆಡ್ ಫಿಕ್ಷನ್ ಅವಾರ್ಡ್ಸ್ ಬಂದಿದೆ.
212
ಈ ಬಾರಿಯ ಕಲರ್ಸ್ ಅನುಬಂಧದಲ್ಲಿ ಮನೆ ಮೆಚ್ಚಿದ ಅಳಿಯ ಅವಾರ್ಡ್ - ಲಕ್ಷ್ಮೀ ಬಾರಮ್ಮ ಧಾರಾವಾಹಿಯ ವೈಷ್ಣವ್ ಗೆ ದೊರೆತಿದೆ. ಇಷ್ಟವಿಲ್ಲದೇ ಮದುವೆಯಾದರೂ ವೈಷ್ಣವ್ ಉತ್ತಮ ಗಂಡ, ಮತ್ತು ಅಳಿಯನಾಗಿದ್ದ.
312
ಜನ ಮೆಚ್ಚಿದ ಎಂಟರ್‌ಟೈನರ್ ಪುರುಷರ ವಿಭಾಗದ ಪ್ರಶಸ್ತಿಯನ್ನು ಬಿಗ್ ಬಾಸ್ ಕನ್ನಡ 10ರ ವಿನ್ನರ್ ಆಗಿರುವ ಕಾರ್ತಿಕ್ ಮಹೇಶ್ (Karthik Mahesh) ಅವರು ಪಡೆದಿದ್ದಾರೆ.
412
ಈ ಸಾಲಿನ ಮನೆ ಮೆಚ್ಚಿದ ಸೊಸೆ, ಭಾಗ್ಯಲಕ್ಷ್ಮೀ (Bhagyalakshmi) ಧಾರಾವಾಹಿಯ ಭಾಗ್ಯಾ ಪಡೆದಿದ್ದಾರೆ. ಭಾಗ್ಯ ಅತ್ತೆಗೆ ತಕ್ಕಂತ ಸೊಸೆಯಾಗಿದ್ದು, ಅತ್ತೆ ಮೆಚ್ಚಿನ ಸೊಸೆಯೂ ಹೌದು, ಈಗ ಮನೆ ಮೆಚ್ಚಿದ ಸೊಸೆ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ.
512
ಫಿಕ್ಷನ್ ವಿಭಾಗದಲ್ಲಿ ಜನ ಮೆಚ್ಚಿದ ಹೊಸ ಪರಿಚಯ - ಕರಿಮಣಿ ಧಾರಾವಾಹಿಯ ಕರ್ಣ ಪಾಲಾಗಿದೆ. ಕರಿಮಣಿ ಮೂಲಕ ಈಗಷ್ಟೇ ನಟನೆಗೆ ಎಂಟ್ರಿ ಕೊಟ್ಟರು, ತಮ್ಮ ನಟನೆ, ಸ್ಟೈಲ್ ಮೂಲಕ ಇವರು ಮನೆಮಾತಾಗಿದ್ದಾರೆ. .
612
ನಿನಗಾಗಿಯ (Ninagaagi seral) ಜೀವ ಅವರಿಗೆ ಮನೆ ಮೆಚ್ಚಿದ ಅಪ್ಪ ಪ್ರಶಸ್ತಿ ಲಭಿಸಿದೆ. ತಾಯಿಯಿಲ್ಲದ ಕೃಷ್ಣಾಳನ್ನು ಪ್ರೀತಿಯಿಂದ ಸಾಕಿ ಸಲಹುವ ಮುದ್ದಿನ ಬೇಬಿಯಾಗಿ ಜೀವಾ ಅಂದ್ರೆ ರಿತ್ವಿಕ್ ಮಠದ್ ಅದ್ಭುತವಾಗಿ ನಟಿಸಿದ್ದಾರೆ.
712
ಅನುಬಂಧ ಅವಾರ್ಡ್ಸ್ (Anubandha) ಮನೆ ಮೆಚ್ಚಿದ ಸಹೋದರ ಪ್ರಶಸ್ತಿಯನ್ನು ಕರಿಮಣಿ ಧಾರವಾಹಿಯ ಭರತ್ ಪಡೆದುಕೊಂಡಿದ್ದಾರೆ. ಅಣ್ಣ ಕರ್ಣನ ಎಲ್ಲಾ ಕೆಲಸದಲ್ಲೂ ನೆರವಾಗುತ್ತಾ, ಜೊತೆಯಾಗಿ ನಿಲ್ಲುವ ಕರ್ಣನ ಪಾತ್ರ ವೀಕ್ಷಕರಿಗೆ ಇಷ್ಟವಾಗಿದೆ.
812
ಇನ್ನು ಜನಮೆಚ್ಚಿದ ಡಿಜಿಟಲ್ ಜೋಡಿ ಪ್ರಶಸ್ತಿಯನ್ನು ರಾಮಾಚಾರಿಯ ಚಾರು-ರಾಮಾಚಾರಿ ಜೋಡಿ ಪಡೆದುಕೊಂಡಿದ್ದಾರೆ. ಇವರಿಬ್ಬರಿಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ.
912
2024ನೇ ಸಾಲಿನ ಜನ ಮೆಚ್ಚಿದ ಮಂಥರೆ ಪಟ್ಟ ಎಲ್ಲರೂ ಊಹಿಸಿದಂತೆ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಮೋಸ್ಟ್ ಡಿಸರ್ವಿಂಗ್ ನಟಿಯಾಗಿರುವ ಕಾವೇರಿ ಪಡೆದಿದ್ದಾರೆ.
1012
ಜನಮೆಚ್ಚಿದ ವಿಧೂಷಕ ಪ್ರಶಸ್ತಿಯನ್ನು ನಿನಗಾಗಿ ಧಾರವಾಹಿಯ ಬಾಲ ಆಲಿಯಾಸ್ ಬಾಲ ಮಾಮ ಪಡೆದಿದ್ದಾರೆ. ತನ್ನ ಪಂಚಿಂಗ್ ಡೈಲಾಗ್ ಮೂಲಕ ನಟ ವೀಕ್ಷಕರ ಮುಖದಲ್ಲಿ ನಗು ತರಿಸಿದ್ದಾರೆ.
1112
ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಕೀರ್ತಿ ಆಲಿಯಾಸ್ ತನ್ವಿ ರಾವ್ (Tanvi Rao) ಜನಮೆಚ್ಚಿದ ಸ್ಟೈಲ್ ಐಕಾನ್ ಪ್ರಶಸ್ತಿ ಪಡೆದಿದ್ದಾರೆ, ಕಳೆದ ಬಾರಿಯೂ ಇವರು ಸ್ಟೈಲ್ ಐಕಾನ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
1212
ಇನ್ನು ಮನೆ ಮೆಚ್ಚಿದ ಅಮ್ಮ ಪ್ರಶಸ್ತಿ ಇಬ್ಬರ ಪಾಲಾಗಿದ್ದು, ಶ್ರೀಗೌರಿ ಧಾರಾವಾಹಿಯ ಮಂಗಳಮ್ಮ ಹಾಗೂ ರಾಮಾಚಾರಿಯ ಅಮ್ಮ ಜಾನಕಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.