ಬರ್ತಾ ಬರ್ತಾ ಸಿಕ್ಕಾಪಟ್ಟೆ ಗ್ಲಾಮರಸ್ ಆಗ್ತಿದ್ದಾರೆ ನಮ್ಮನೆ ಯುವರಾಣಿ ಅಹಲ್ಯ

First Published | Sep 21, 2024, 2:58 PM IST

ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ಅಹಲ್ಯ ಪಾತ್ರಕ್ಕೆ ಜೀವ ತುಂಬಿದ ನಟಿ ಕಾವ್ಯಾ ಮಹಾದೇವ್ ಇತ್ತೀಚೆಗೆ ಸಖತ್ ಗ್ಲಾಮರಸ್ ಆಗಿದ್ದಾರೆ. 
 

ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ನಮ್ಮನೆ ಯುವರಾಣಿಯಲ್ಲಿ (Nammane Yuvarani) ಅಹಲ್ಯಾ ಪಾತ್ರದ ಮೂಲಕ ಪಾಸಿಟಿವ್ ಹಾಗೂ ನೆಗೆಟಿವ್ ಎರಡೂ ಶೇಡ್ ಗಳಲ್ಲೂ ಕಾಣಿಸಿಕೊಂಡ ನಟಿ ಕಾವ್ಯಾ ಮಹಾದೇವ್ ನಂತರ ರಿಯಾಲಿಟಿ ಶೋ ಮೂಲಕ ಸದ್ದು ಮಾಡಿದರು. 
 

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಜಾ ರಾಣಿ ಸೀಸನ್ 2 (Raja Rani Season 2) ರಿಯಾಲಿಟಿ ಶೋದಲ್ಲಿ ಪತಿ ಕುಮಾರ್ ಜೊತೆ ಭಾಗವಹಿಸಿದ್ದ ಕಾವ್ಯಾ ಮಹಾದೇವ್, ಈ ಸೀಸನ್ ವಿನ್ನರ್ ಕಿರೀಟವನ್ನು ಸಹ ಮುಡಿಗೇರಿಸಿಕೊಂಡಿದ್ದರು. ಸದ್ಯ ನಟಿ ನಟನೆಯಿಂದ ದೂರ ಉಳಿದಿದ್ದಾರೆ. 
 

Tap to resize

ನಟನೆಯಿಂದ ದೂರ ಇದ್ರೂ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಕಾವ್ಯಾ ಮಹಾದೇವ್ (Kavya Mahadev) ಹೆಚ್ಚಾಗಿ ತಮ್ಮ ಫೋಟೋ ಶೂಟ್ ಮಾಡಿ, ಅದನ್ನ ಅಪ್ ಲೋಡ್ ಮಾಡ್ತಿರ್ತಾರೆ, ಅಷ್ಟೇ ಅಲ್ಲ ಗಂಡ ಕುಮಾರ್ ಜೊತೆಗೆ ಡ್ಯಾನ್ಸ್ ವಿಡಿಯೋಗಳನ್ನು ಸಹ ನಟಿ ಶೇರ್ ಮಾಡುತ್ತಿರುತ್ತಾರೆ. 
 

ಇತ್ತೀಚಿನ ದಿನಗಳಲ್ಲಿ ಸಖತ್ ಸ್ಟೈಲಿಶ್ ಆಗಿರುವ ಫೋಟೊಗಳನ್ನು ನಟಿ ಶೇರ್ ಮಾಡುತ್ತಿದ್ದು, ನೋಡ್ತಾ ಇದ್ರೆ ಕಾವ್ಯಾ ಮಹಾದೇವ್ ತುಂಬಾನೆ ಗ್ಲಾಮರಸ್ ಆಗ್ತಿದ್ದಾರೆ ಅನಿಸ್ತಿದೆ. ಇದಕ್ಕೆ ಇತ್ತೀಚೆಗೆ ಅವರು ಶೇರ್ ಮಾಡಿರುವಂತಹ ಫೋಟೊಗಳೇ ಸಾಕ್ಷಿ. 
 

ಒಂದಷ್ಟು ಫೋಟೊಗಳಲ್ಲಿ ಕಾವ್ಯಾ ಕಲರ್ ಫುಲ್ ಆಗಿರುವ ಲೆಹೆಂಗಾ ಧರಿಸಿ ಪೋಸ್ ಕೊಟ್ಟರೆ, ಮತ್ತೊಂದಿಷ್ಟು ಫೋಟೊಗಳಲ್ಲಿ ನಟಿ ಕಪ್ಪು ಬಣ್ಣದ ಡ್ರೆಸ್ ಧರಿಸಿ, ಕೈಯಲ್ಲಿ ಗ್ಲಾಸ್ ಹಿಡಿದು ಸಿಪ್ ಮಾಡುವಂತೆ ಪೋಸ್ ನೀಡಿದ್ದಾರೆ. ಎರಡೂ ಫೋಟೊಗಳು ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿವೆ. 
 

ಕಾವ್ಯಾ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದು, ಸ್ಟನ್ನಿಂಗ್, ಸ್ಟೈಲಿಶ್ ಆಗಿ ಕಾಣಿಸ್ತಿದ್ದೀರಿ ಎಂದು ಕಾಮೆಂಟ್ ಮಾಡಿದ್ದಾರೆ. ಅಷ್ಟೇ ಅಲ್ಲ ಯಾವ ಹೊಸ ಪ್ರಾಜೆಕ್ಟ್ ಅಲ್ಲಿ ಇದ್ದೀರಿ ಮೇಡಂ, ನಿಮ್ಮ ನಟನೆಯನ್ನು ನಾವು ಮಿಸ್ ಮಾಡ್ತಿದ್ದೇವೆ, ಆದಷ್ಟು ಬೇಗ ಸೀರಿಯಲ್ ಗೆ ಬನ್ನಿ ಎಂದು ಕೇಳಿಕೊಂಡಿದ್ದಾರೆ. 
 

'ಚರಣ ದಾಸಿ' ಧಾರಾವಾಹಿಯಲ್ಲಿ (Serial) ದೀಪಾ ಪಾತ್ರದ ಮೂಲಕ ಜನಪ್ರಿಯತೆ ಪಡೆದ ನಟಿ ಕಾವ್ಯಾ ಮಹಾದೇವ್, 'ನಾನಿನ್ನ ಬಿಡಲಾರೆ ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರದ ಮೂಲಕ ಅಚ್ಚರಿ ಮೂಡಿಸಿದ್ದರು. ನಂತರ 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ಪಾಸಿಟಿವ್ ಹಾಗೂ ನೆಗೆಟಿವ್ ಈ ಎರಡೂ ಶೇಡ್‌ನಲ್ಲಿ ಕೂಡ ಕಾವ್ಯಾ ನಟಿಸಿ ಸೈ ಎನಿಸಿಕೊಂಡಿದ್ದರು. 
 

Latest Videos

click me!