Tanvi Rao: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕೀರ್ತಿ ಪಾತ್ರದ ಮೂಲಕ ಜನಪ್ರಿಯತೆ ಪಡೆದ ನಟಿ ತನ್ವಿ ರಾವ್ ಶೀಘ್ರದಲ್ಲೇ ಹೊಸ ಧಾರಾವಾಹಿ ಮೂಲಕ ಕಿರುತೆರೆಗೆ ರೀ ಎಂಟ್ರಿ ಕೊಡಲಿದ್ದಾರೆ ಎನ್ನುವ ಮಾಹಿತಿ ಇದೆ. ಹಾಗಿದ್ರೆ ಅಭಿಮಾನಿಗಳು ತಮ್ಮ ಮೆಚ್ಚಿನ ನಟಿಯನ್ನು ಮತ್ತೆ ಕಣ್ತುಂಬಿಕೊಳ್ಳುವ ಸಮಯ ಬಂದಿದೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕೀರ್ತಿ ಪಾತ್ರದ ಮೂಲಕ ಜನಪ್ರಿಯತೆ ಪಡೆದ ನಟಿ ತನ್ವಿ ರಾವ್. ಆರಂಭದಲ್ಲಿ ನೆಗೆಟೀವ್ ಶೇಡ್ ನಲ್ಲಿ ತೋರಿಸಿದರೂ ಜನರು ಕೀರ್ತಿ ಪಾತ್ರವನ್ನು, ಆಕೆಯ ನಟನೆಯನ್ನು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು.
26
ತನ್ವಿ ರಾವ್
ಲಕ್ಷ್ಮೀ ಬಾರಮ್ಮ ಧಾರಾವಾಹಿ ಕೊನೆಯಾದಾಗ ಹೆಚ್ಚಿನ ಜನರು ಕೀರ್ತಿಯನ್ನು ಮಿಸ್ ಮಾಡಿಕೊಂಡಿದ್ದರು. ಅಷ್ಟೇ ಅಲ್ಲದೇ ನಾಯಕನ ಜೊತೆ ಕೀರ್ತಿ ಒಂದಾಗಬೇಕೆಂಬ ಬಯಕೆಯನ್ನೂ ಹೊರಹಾಕಿದ್ದರು. ಜನ ಅಷ್ಟೊಂದು ಇಷ್ಟಪಟ್ಟಿದ್ದರು ನಟಿಯನ್ನು.
36
ಮತ್ತೆ ಕಿರುತೆರೆಗೆ ಕಂ ಬ್ಯಾಕ್
ಲಕ್ಷ್ಮೀ ಬಾರಮ್ಮದ ಬಳಿಕ ತನ್ವಿ ರಾವ್ ಮತ್ತೆ ಯಾವುದೇ ಸೀರಿಯಲ್ ಗಳಲ್ಲಿ ಅಭಿನಯಿಸಿಲ್ಲ. ಬದಲಾಗಿ ಒಂದಷ್ಟು ಡ್ಯಾನ್ಸ್ ವಿಡಿಯೋ, ರೀಲ್ಸ್ ಗಳಲ್ಲಿ ತನ್ವಿ ಕಾಣಿಸಿಕೊಂಡಿದ್ದರು. ಇದೀಗ ನಟಿ ಮತ್ತೆ ಕಂ ಬ್ಯಾಕ್ ಮಾಡುವ ಸುದ್ದಿ ಸಿಕ್ಕಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಮಾಹಿತಿಯಂತೆ, ಶೀಘ್ರದಲ್ಲೇ ತನ್ವಿ ರಾವ್ ಜನಪ್ರಿಯ ವಾಹಿನಿಯ, ಹೊಸ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಯಾವ ವಾಹಿನಿಯಲ್ಲಿ, ಸೀರಿಯಲ್ ಶುರುವಾಗುವುದು ಯಾವಾಗ ಎನ್ನುವ ಮಾಹಿತಿ ಲಭ್ಯವಿಲ್ಲ.
56
ಸೂರಜ್ ಸಿಂಗ್ ಗೆ ನಾಯಕಿ ಆಗ್ತಾರ?
ಕೆಲವರು ಹೇಳುವಂತೆ ತನ್ವಿ ಉದಯ ಟಿವಿಯಲ್ಲಿ ಪ್ರಸಾರವಾಗಲಿರುವ ‘ಭಾಗ್ಯವಂತರು’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇನ್ನೂ ಹಲವರ ಪ್ರಕಾರ ಬಿಗ್ ಬಾಸ್ ಖ್ಯಾತಿಯ ಸೂರಜ್ ಸಿಂಗ್ ನಟಿಸಲಿರುವ ಹೊಸ ಧಾರಾವಾಹಿಗೆ ತನ್ವಿ ನಾಯಕಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಯಾವುದು ಎಷ್ಟು ಸತ್ಯ ಅನ್ನೋದು ತಿಳಿದು ಬಂದಿಲ್ಲ.
66
ಫ್ಯಾನ್ಸ್ ಖುಷ್
ಒಟ್ಟಲ್ಲಿ ಒಬ್ಬ ಪ್ರತಿಭಾವಂತ ನಟಿಯಾಗಿರುವ ತನ್ವಿ ರಾವ್, ವರ್ಷಗಳ ಬಳಿಕ ಮತ್ತೆ ಕಿರುತೆರೆಗೆ ಎಂಟ್ರಿ ಕೊಡುತ್ತಿರುವುದಕ್ಕೆ ಅಭಿಮಾನಿಗಳಂತೂ ಸಖತ್ ಖುಷಿಯಾಗಿದ್ದಾರೆ. ಮತ್ತೊಂದು ಒಳ್ಳೆಯ ಧಾರಾವಾಹಿಯಲ್ಲಿ ನಟಿಸಿ, ಯಶಸ್ಸು ನಿಮ್ಮದಾಗಲಿ ಎಂದು ಜನ ಹಾರೈಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.