ಕಾವೇರಿ ಬಾಯಿ ಬಿಡಿಸಲು ಹೋಗಿ.... ನಿಜವಾಗ್ಲೂ ಕೀರ್ತಿಯ ಆತ್ಮ ಲಕ್ಷ್ಮೀ ಮೇಲೆ ಬಂದು ಬಿಡ್ತಾ?

First Published | Sep 24, 2024, 4:20 PM IST

ಲಕ್ಷ್ಮೀ ಬಾರಮ್ಮ ಧಾರಾವಾಹಿ ದಿನದಿಂದ ದಿನಕ್ಕೆ ಕುತೂಹಲದ ಘಟ್ಟ ತಲುಪುತ್ತಿದೆ, ಕೀರ್ತಿ ಸತ್ತಿದ್ದಾಳೋ ಇಲ್ವೋ ಅನ್ನೋದು ಇನ್ನೂ ಗೊತ್ತಾಗ್ತಿಲ್ಲ, ಇದರ ನಡುವೆ, ನಿಜವಾಗಿಯೂ ಕೀರ್ತಿ ಆತ್ಮ ಲಕ್ಷ್ಮೀ ಮೈಮೇಲೆ ಬಂದಿದ್ಯಾ ಎನ್ನುವ ಅನುಮಾನ ಶುರುವಾಗಿದೆ. 
 

ಲಕ್ಷ್ಮೀ ಬಾರಮ್ಮ (Lakshmi Baramma) ಧಾರಾವಾಹಿಯಲ್ಲಿ ಮತ್ತೆ ಥ್ರಿಲ್ಲರ್ ಎಪಿಸೋಡ್ ಆರಂಭವಾಗಿದೆ. ಲಕ್ಷ್ಮೀ ಮಾಡ್ತಿರೋದೆಲ್ಲಾ ನಾಟಕ ಅಂತ ಗೊತ್ತಾದ ಮೇಲೆ ಜನರಿಗೆ ತುಂಬಾನೆ ನಿರಾಸೆ ಉಂಟಾಗಿತ್ತು. ಆದರೆ ಇದೀಗ ಮತ್ತೆ ಹಾರರ್ ಎಳೆಯನ್ನು ಕಥೆಯಲ್ಲಿ ಸೇರಿಸಲಾಗಿದ್ದು, ಲಕ್ಷ್ಮೀ ನಟನೆ, ಕಥೆಯನ್ನು ತೆಗೆದುಕೊಂಡು ಹೋಗುತ್ತಿರುವ ರೀತಿಗೆ ವೀಕ್ಷಕರು ಥ್ರಿಲ್ ಆಗಿದ್ದಾರೆ. 
 

ಒಂದೆಡೆ ಕಾವೇರಿಗೆ ಲಕ್ಷ್ಮೀ ಮಾಡ್ತಿರೋದು ನಾಟಕ ಅನ್ನೋದು ಗೊತ್ತಾಗಿದೆ. ಮತ್ತೊಂದೆಡೆ ವೈಷ್ಣವ್ ಗೆ ಅಮ್ಮನ ಮೇಲೆ ಅನುಮಾನ ಹೆಚ್ಚಾಗಿದೆ. ತನ್ನ ಮೇಲಿನ ಅನುಮಾನವನ್ನು ಲಕ್ಷ್ಮೀ ಮೇಲೆ ತಿರುಗಿಸಲು ಕಾವೇರಿ, ಲಕ್ಷ್ಮೀ ಮಾಡ್ತಿರೋದು ನಾಟಕ, ಡಾಕ್ಟರ್ ಹೇಳಿರೋದು ಕೇಳಿಲ್ವಾ? ಅವಳಿಂದಾಗಿಯೇ ನಾನು ಹೀಗಾಗಿರೋದು ಎನ್ನುತ್ತಾಳೆ ಕಾವೇರಿ. 
 

Tap to resize

ಲಕ್ಷ್ಮೀಯನ್ನು ಪರೀಕ್ಷಿಸಲು ಮನೆಗೆ ವೈದ್ಯರು ಕೂಡ ಬಂದಿದ್ದಾರೆ. ಲಕ್ಷ್ಮಿಯನ್ನು ಕೆರಳಿಸುವಂತೆ ಮಾತನಾಡಿ, ಕಾವೇರಿಯನ್ನು ಕೊಲ್ಲುವಂತೆ, ಕೊನೆಗೆ ತನ್ನನ್ನೇ ಕೊಲ್ಲುವಂತೆ ವೈದ್ಯೆ ತುಂಬಾನೇ ಒತ್ತಾಯ ಮಾಡ್ತಾಳೆ. ಆದರೆ ಲಕ್ಷ್ಮೀ ಹಾಗೇ ಮಾಡಲ್ಲ. ಇದನ್ನ ನೋಡಿದ ವೈದ್ಯೆ, ಲಕ್ಷ್ಮೀ ನೀನು ಕೀರ್ತಿ ಅಲ್ವೇ ಅಲ್ಲ, ಲಕ್ಷ್ಮೀನೆ ಅದಕ್ಕಾಗಿ ನೀನು ಏನು ಮಾಡಲ್ಲ, ಇನ್ನು ಮುಂದೆ ನಿನ್ನ ನಾಟಕ ಈ ಮನೆಯವರ ಮುಂದೆ ನಡೆಯಲ್ಲ, ನಡೆಯೋದಕ್ಕೆ ನಾನು ಬಿಡಲ್ಲ ಎನ್ನುತ್ತಾಳೆ. 
 

ಇನ್ನೊಂದೆಡೆ ಕಾವೇರಿ ಮಗ ವೈಷ್ಣವ್ ಗೆ ಎಲ್ಲದಕ್ಕೂ ಲಕ್ಷ್ಮೀ ಕಾರಣ ಅವಳ ನಾಟಕ ನಿಲ್ಲಿಸು ಎನ್ನುವಾಗಲೇ, ಅಲ್ಲಿಗೆ ಬರೋ ವೈದ್ಯರು, ಭಯ ವ್ಯಕ್ತಪಡಿಸುತ್ತಾ, ಲಕ್ಷ್ಮೀ ಇದ್ದಕ್ಕಿದ್ದಂತೆ ಕೀರ್ತಿ ಆಗಿ ಬದಲಾಗಿದ್ದಾಳೆ, ಅವಳಿಗೆ ಅನ್ಯಾಯ ಆಗಿದ್ಯಂತೆ, ಅದಕ್ಕೆ ಉತ್ತರ ಸಿಗೋವರೆಗೂ ಯಾರನ್ನೂ ಬಿಡಲ್ಲ ಎಂದು ಹೇಳಿರೋದಾಗಿ ವೈದ್ಯೆ ಹೇಳುವಾಗ ಕಾವೇರಿ ಭಯದಿಂದ ನಡುಗ್ತಾಳೆ. 
 

ಮತ್ತೊಂದೆಡೆ ಕೀರ್ತಿಯಾಗಿ ಬದಲಾದ ಲಕ್ಷ್ಮೀ ಮುಖಕ್ಕೆ ಕುಂಕುಮ ಹಚ್ಚಿ ನೃತ್ಯ ಮಾಡ್ತಿದ್ದಾಳೆ. ಈವಾಗ ನಾಟಕ ಮಾಡಲು ಹೋಗಿ ನಿಜವಾಗಿಯೂ ಲಕ್ಷ್ಮೀ ದೇಹದಲ್ಲಿ ಕೀರ್ತಿ ಆತ್ಮ ಸೇರಿಕೊಂಡಿದೆಯೇನೋ ಅನಿಸುತ್ತಿದೆ. ಹೀಗಾದ್ರೆ ಮುಂದೆ ಕೀರ್ತಿ ಬರೋದೆ ಇಲ್ವಾ? ಕಾವೇರಿ ಎಲ್ಲವನ್ನೂ ಬಾಯಿಬಿಟ್ಟು ಹೇಳ್ತಾಳ ಅನ್ನೋದನ್ನು ಕಾದು ನೋಡಬೇಕು. 
 

ಕಳೆದೆರಡು ದಿನಗಳ ಎಪಿಸೋಡ್ ನೋಡಿ ಥ್ರಿಲ್ ಆಗಿರುವ ವೀಕ್ಷಕರು, ಲಕ್ಷ್ಮೀ ನಟನೆಗೆ ಭೇಷ್ ಅಂದಿದ್ದಾರೆ. ಲಕ್ಷ್ಮೀ ಆಕ್ಟಿಂಗ್ ದಿನೇ ದಿನೇ ಸೂಪರ್ ಆಗಿದೆ, ಎಕ್ಸಲೆಂಟ್ ಎಂದಿದ್ದಾರೆ, ಅಷ್ಟೇ ಅಲ್ಲ ಅಬ್ಬಾ ಹಾರರ್ ಮೂವಿಯಲ್ಲೂ ಇಷ್ಟು ಸಸ್ಪೆನ್ಸ್ ಇರಲ್ಲ..ವಾವ್ ಲಕ್ಷ್ಮೀ ಮತ್ತು ಕೀರ್ತಿ ಇಬ್ಬರು ಸೂಪರ್ ಎಂದಿದ್ದಾರೆ. 
 

ಅಷ್ಟೇ ಅಲ್ಲ ಪ್ರೊಮೊ (Serial promo) ನೋಡಿದ ಜನರು ಲಕ್ಷ್ಮೀ ಮತ್ತು ಗಂಗಾ ಜೊತೆ ಡಾಕ್ಟರ್ ಕೂಡ ಸೇರಿಕೊಂಡ್ರು ಅನ್ಸತ್ತೆ, ಇನ್ನು ಕಾವೇರಿಗೆ ಉಳಿಗಾಲವಿಲ್ಲ ಎಂದಿದ್ದಾರೆ. ಇನ್ನೂ ಲಕ್ಷ್ಮಿ ಅಂದ್ರೆ ಲಕ್ಷ್ಮಿ ಬಾಂಬ್ ತರ ನಮ್ಮನ್ನು ಸರ್ಪ್ರೈಸ್ ಮಾಡುತ್ತಾರೆ. ಈ ಮಗು ತುಂಬಾ ಅದ್ಭುತ ಕಲಾವಿದೆ. ದೇವರು ಅವರಿಗೆ ಇನ್ನೂ ಬೆಳೆಯಲು ಅವಕಾಶ ಮಾಡಿ ಕೊಡಲಿ ಎಂದು ಹಾರೈಸಿದ್ದಾರೆ. 
 

Latest Videos

click me!