ಶೀಘ್ರದಲ್ಲೇ ಮದ್ವೆ ಆಗ್ತಿದ್ದಾರೆ ಲಕ್ಷ್ಮೀ ಬಾರಮ್ಮ ವಿಧಿ… ಭಾವಿ ಪತಿ ಜೊತೆಗಿನ ರೊಮ್ಯಾಂಟಿಕ್ ಫೋಟೊ ವೈರಲ್

First Published | Nov 1, 2024, 2:32 PM IST

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಮಗಳು, ವೈಷ್ಣವ್ ತಂಗಿ ವಿಧಿ ಪಾತ್ರದಲ್ಲಿ ನಟಿಸುತ್ತಿರುವ ಲಾವಣ್ಯ  ಹಿರೇಮಠ್ ಶೀಘ್ರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. 
 

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ (Lakshmi Baramma) ಧಾರಾವಾಹಿಯಲ್ಲಿ ಕಾವೇರಿ ಕಷ್ಯಪ್ ಹಾಗೂ ಕೃಷ್ಣ ಕಷ್ಯಪ್ ಪುತ್ರಿ ಹಾಗೂ ವೈಷ್ಣವ್ ತಂಗಿ ವಿಧಿ ಪಾತ್ರದಲ್ಲಿ ಸೊಕ್ಕಿನ ಹುಡುಗಿಯಾಗಿ, ಯಾರ ಮಾತನ್ನು ಕೇಳದೆ ಇರುವ ಪಾತ್ರ ಇವರದ್ದು. 
 

ಯಾರ ಮಾತನ್ನೂ ಕೇಳದೆ, ತಾನು ಮಾಡಿದ್ದೆ ಸರಿ ಎನ್ನುವಂತೆ ನಡೆದುಕೊಂಡು, ಅಣ್ಣನನ್ನು ಪ್ರೀತಿ ಮಾಡುವಷ್ಟು ನನ್ನನ್ನು ಈ ಮನೆಯಲ್ಲಿ ಯಾರೂ ಪ್ರೀತಿ ಮಾಡಲ್ಲ ಕೇರ್ ಮಾಡಲ್ಲ ಎಂದು ದೂರುವ ಹುಡುಗಿ ವಿಧಿ. ಯಾವಾಗ್ಲೂ ಲಕ್ಷ್ಮೀ ಮಾತಿಗೆ ವಿರೋಧವಾಡುವ ಈಕೆಯನ್ನ ಕಂಡ್ರೆ ವೀಕ್ಷಕರಿಗೂ ಕೋಪ. 
 

Tap to resize

ವಿಧಿ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಲಾವಣ್ಯ ಹಿರೇಮಠ್ (Lavanya Hiremath) ಬಗ್ಗೆ ಹೇಳೋದಾದ್ರೆ ಇವರು ವೃತ್ತಿಯಲ್ಲಿ ವೈದ್ಯೆ. ಹೌದು ದಂತವೈದ್ಯೆಯಾಗಿರುವ ವಿಧಿ ಪ್ಯಾಶನ್ ನಟನೆ. ಹಾಗಾಗಿಯೇ ಲಕ್ಷ್ಮೀ ಬಾರಮ್ಮ ಪಾತ್ರದಲ್ಲಿ ನಟಿಸುತ್ತಾ, ಡೆಂಟಿಸ್ಟ್ ಆಗಿ ಸೇವೆ ಸಲ್ಲಿಸುತ್ತ ಎರಡೂ ಕೆಲಸವನ್ನು ನಿಭಾಯಿಸುತ್ತಿದ್ದಾರೆ ಲಾವಣ್ಯ. 
 

ಇದೀಗ ಲಾವಣ್ಯ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ರೊಮ್ಯಾಂಟಿಕ್ ಫೋಟೊಗಳನ್ನು (romatic photos)ಶೇರ್ ಮಾಡಿದ್ದು, ಶೀಘ್ರದಲ್ಲೇ ಮದುವೆಯಾಗುವ ಸೂಚನೆಯನ್ನು ನೀಡಿದ್ದಾರೆ. ಪ್ರೀ ವೆಡ್ಡಿಂಗ್ ಶೂಟ್ ಫೋಟೊಗಳು ಇದಾಗಿದ್ದು, ನಟಿ our roller coaster journey be-gins ಎಂದು ಕ್ಯಾಪ್ಶನ್ ಕೊಟ್ಟು ಫೋಟೊಗಳನ್ನು ಶೇರ್ ಮಾಡಿದ್ದಾರೆ. 
 

ಮಾಹಿತಿಯ ಪ್ರಕಾರ ಲಾವಣ್ಯ ಇದೇ ನವಂಬರ್ 11 ರಂದು ತಮ್ಮ ಬಾಯ್ ಫ್ರೆಂಡ್ ಆಗಿದ್ದ, ಆಕಾಶ್ ಆಚಾರ್ಯ ಎನ್ನುವವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಆಕಾಶ್ ಕೂಡ ವೈದ್ಯರಾಗಿದ್ದು, ಇಬ್ಬರು ಬಹಳ ಸಮಯದಿಂದ ಸ್ನೇಹಿತರು ಎನ್ನಲಾಗುತ್ತಿದೆ. 
 

ಲಾವಣ್ಯ ಹೀರೇಮಠ್ ಪ್ರಿ ವೆಡ್ಡಿಂಗ್ ಫೋಟೊ ಶೂಟ್ (pre wedding photoshoot) ಸೋಶಿಯಲ್ ಮೀಡೀಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದು , ನಟಿ ತಮ್ಮ ಭಾವಿ ಪತಿ ಜೊತೆ ರೋಮ್ಯಾಂಟಿಕ್ ಆಗಿ ಪೋಸ್ ಕೊಟ್ಟಿದ್ದಾರೆ. ಇಬ್ಬರು ತಪ್ಪಿಕೊಂಡ, ಕಿಸ್ ಮಾಡುತ್ತಿರುವ ಫೋಟೊಗಳು ಸಹ ವೈರಲ್ ಆಗಿವೆ. 
 

ಲಾವಣ್ಯ ಹಿರೇಮಠ್ ಇತ್ತೀಚೆಗೆ ಥಾರ್ ಕಾರು ಖರೀದಿಸಿ ಸುದ್ದಿಯಾಗಿದ್ದರು. ಸಣ್ಣ ವಯಸ್ಸಿಗೆ ಥಾರ್ ಕಾರು ಖರೀದಿಸಿದ ನಟಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿತ್ತು. ಲಾವಣ್ಯ ಮೂಲತಃ ರಾಯಚೂರಿನವರಾಗಿದ್ದು, ಸದ್ಯ ಬೆಂಗಳೂರಿನಲ್ಲಿ ಡೆಂಟಿಸ್ಟ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಆಕಾಶ್ ಕೂಡ ಜೊತೆಗೆ ಕೆಲಸ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. 
 

Latest Videos

click me!