ಸವಿರುಚಿ ನಿರೂಪಣೆಗೆ ಗುಡ್ ಬೈ ಹೇಳಿದ ಜಾಹ್ನವಿ… ಇನ್ಮುಂದೆ ಲಾಯರ್ ಜಗದೀಶ್ ನಿರೂಪಣೆ ಮಾಡ್ತಾರ?!

Published : Oct 24, 2024, 12:24 PM ISTUpdated : Oct 25, 2024, 12:01 PM IST

ಬಿಗ್ ಬಾಸ್ ಸೀಸನ್ 11 ರ ಸ್ಪರ್ಧಿಯಾಗಿ ಭಾರಿ ಜನಪ್ರಿಯತೆ ಗಳಿಸಿದ ಲಾಯರ್ ಜಗದೀಶ್ ಇನ್ನು ಮುಂದೆ ಕಲರ್ಸ್ ಕನ್ನಡ ವಾಹಿನಿಯ ಸವಿರುಚಿ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರ? ಹಾಗೊಂದು ಚರ್ಚೆ ಶುರುವಾಗಿದೆ.   

PREV
17
ಸವಿರುಚಿ ನಿರೂಪಣೆಗೆ ಗುಡ್ ಬೈ ಹೇಳಿದ ಜಾಹ್ನವಿ… ಇನ್ಮುಂದೆ ಲಾಯರ್ ಜಗದೀಶ್ ನಿರೂಪಣೆ ಮಾಡ್ತಾರ?!

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಶೋಗಳಲ್ಲಿ ಒಂದು ಸವಿರುಚಿ ಕಾರ್ಯಕ್ರಮ. ಆಂಕರ್ ಜಾಹ್ನವಿ (Anchor Jhanvi) ನಿರೂಪಣೆಯಲ್ಲಿ ಹಾಗೂ ಚಂದ್ರು ಜೊತೆ, ವಿಶೇಷ ಅತಿಥಿಗಳು ಆಗಮಿಸಿ, ತಿಂಡಿ ತಯಾರಿಸುತ್ತಿದ್ದಂತ ಈ ಅಡುಗೆ ಕಾರ್ಯಕ್ರಮ ಜನರಿಗೆ ಸಖತ್ ಇಷ್ಟವಾಗಿತ್ತು. 

27

ಇದೀಗ ನಿರೂಪಕಿ ಜಾಹ್ನವಿ ಸವಿರುಚಿ ಕಾರ್ಯಕ್ರಮದಿಂದ ಹೊರ ಬಂದಿದ್ದಾರೆ ಎನ್ನುವ ಸುದ್ದಿಯೂ ಇದೆ. ಅಷ್ಟೇ ಅಲ್ಲ ಜಾಹ್ನವಿ ಅವರ ಕೊನೆಯ ಎಪಿಸೋಡ್ ನಲ್ಲಿ ಬಿಗ್ ಬಾಸ್ ಸೀಸನ್ 11 ರಲ್ಲಿ (Bigg Boss Season 11) ಎವಿಕ್ಟೆಡ್ ಆದ ಲಾಯರ್ ಜಗದೀಶ್ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಜನರಿಗೆ ಈಗ ಹೊಸ ಸಂಶಯವೊಂದು ಮೂಡಿದೆ. 
 

37

ಬಿಗ್ ಬಾಸ್ ಸೀಸನ್ 11 ರಲ್ಲಿ ಜಗದೀಶ್ (Lawyer Jagadish) ಇದ್ದಷ್ಟು ದಿನ ಸಖತ್ ಮನರಂಜನೆ ನೀಡಿದ್ದರು. ಪ್ರತಿ ಪ್ರೊಮೋದಲ್ಲೂ ಜಗದೀಶ್ ಅವರೇ ಹೈಲೈಟ್ ಆಗಿದ್ದರು. ಜಗಳ ಮಾಡೊದಕ್ಕೂ ಸೈ, ಮನರಂಜನೆ ನೀಡೋದಕ್ಕೂ ಸೈ ಎನ್ನುವಂತೆ ತುಂಬಾನೆ ಕಟೆಂಟ್ ಗಳನ್ನ ನೀಡುತ್ತಿದ್ದದ್ದು ಜಗದೀಶ್. ಜೊತೆಗೆ ಬಿಗ್ ಬಾಸ್ ಗೆ ಅವಾಜ್ ಹಾಕಿ ಸಹ ಸದ್ದು ಮಾಡಿದ್ದರು. 
 

47

ಲಾಯರ್ ಜಗದೀಶ್ ಬಿಗ್ ಬಾಸ್ ಮನೆಯಲ್ಲಿ ಇದ್ದಿದ್ದು 2 ವಾರಗಳು ಅಷ್ಟೇ ಆದರೆ ಕರ್ನಾಟಕದಾದ್ಯಂತ ಇವರು ಭಾರಿ ಜನಪ್ರಿಯತೆ ಪಡೆದಿದ್ದಾರೆ. ಮೊದಲಿಗೆ ಇವರನ್ನ ಯಾರಪ್ಪ ಬಿಗ್ ಬಾಸ್ ಗೆ ಕರೆಸಿದ್ದು ಒಂದು ಸಲ ಹೊರ ಹಾಕಿ ಎನ್ನುತ್ತಿದ್ದವರೆಲ್ಲಾ, ಜಗದೀಶ್ ಗೆ ಫ್ಯಾನ್ಸ್ ಆಗ್ಬಿಟ್ಟಿದ್ದಾರೆ. ಹಾಗಾಗಿ ಮತ್ತೆ ಜಗದೀಶ್ ಅವರನ್ನ ಬಿಗ್ ಬಾಸ್ ಮನೆಗೆ ಕರೆಯಿರಿ ಎಂದು ಹೇಳುತ್ತಿದ್ದಾರೆ. 
 

57

ಜಗದೀಶ್ ಇಲ್ಲದೇ ಮನೆ ಕೂಡ ತುಂಬಾನೆ ಖಾಲಿ ಖಾಲಿ ಅನಿಸ್ತಿದೆ, ಜಗ್ಗು ಇದ್ರೆನೆ ಬಿಗ್ ಬಾಸ್ ಮನೆಯಲ್ಲಿ ಜಾಲಿ. ಆದಷ್ಟು ಬೇಗ ಜಗದೀಶರನ್ನು ಮನೆಗೆ ಕಳುಹಿಸಿ, ಇಲ್ಲಾಂದ್ರೆ ಬಿಗ್ ಬಾಸ್ ನೋಡೋದಕ್ಕೂ ಸಾಧ್ಯ ಇಲ್ಲ. ಜಗದೀಶ್ ಇಲ್ಲದೇ ಬಿಗ್ ಬಾಸ್ ನೋಡೋದನ್ನ ಬಿಟ್ಟಿದ್ದೀವಿ, ಜಗದೀಶ್ ಬಿಗ್ ಬಾಸ್ ನ ನಿಜವಾದ ವಿನ್ನರ್ ಎನ್ನುವಷ್ಟರ ಮಟ್ಟಿಗೆ, ಜನಕ್ಕೆ ಇಷ್ಟವಾಗಿದ್ದರು. 
 

67

ಇದೀಗ ಸವಿರುಚಿ ಕಾರ್ಯಕ್ರಮದಲ್ಲೂ ಕರ್ನಾಟಕದ ಹೊಸ ಕ್ರಶ್ (Karnataka Crush) ಜಗದೀಶ್ ಕಾಣಿಸಿಕೊಂಡಿದ್ದಾರೆ. ಜೊತೆಗೆ ತಮ್ಮ ಕೈಚಳಕವನ್ನ ತೋರಿಸಿ, ತಮ್ಮ ಮಾತಿನ ಮೂಲಕ ಮತ್ತೆ ಮೋಡಿ ಮಾಡಿದ್ದಾರೆ. ಇದರ ಮಧ್ಯೆ ಜನರು ನಿರೂಪಕಿ ಜಾಹ್ನವಿ ಜಾಗವನ್ನು ಇನ್ನು ಮುಂದೆ ಜಗದೀಶ್ ಅವರು ತುಂಬಲಿದ್ದಾರೆ. ಸವಿರುಚಿಯ ನಿರೂಪಣೆ ಜಗದೀಶ್ ಮಾಡಲಿದ್ದಾರೆ ಎನ್ನುತ್ತಿದ್ದಾರೆ. 
 

77

ಇದು ಎಷ್ಟರಮಟ್ಟಿಗೆ ನಿಜವೋ? ಸುಳ್ಳೊ ಗೊತ್ತಿಲ್ಲ. ಆದರೆ, ಜಗದೀಶ್ ಅಡುಗೆ ಕಾರ್ಯಾಕ್ರಮ ನಡೆಸಿಕೊಟ್ಟರೆ ಹೇಗಿರಬಹುದು ಎಂದು ಎಲ್ಲರೂ ಯೋಚನೆ ಮಾಡುವಂತಾಗಿದೆ. ಅಷ್ಟೇ ಅಲ್ಲ ಇನ್ನೂ ಕೆಲವರು, ಈ ಕಾರ್ಯಕ್ರಮಕ್ಕೆ ಅವರು ನಿರೂಪಕರಾಗೋದು ಬೇಡ ಜಗದೀಶ್ ಅವರು ಬಿಗ್ ಬಾಸ್ ಗೆ ಮತ್ತೆ ಹೋಗಬೇಕು, ಅವ್ರನ್ನ ಅಲ್ಲಿಯೇ ನೋಡೋದಕ್ಕೆ ಚೆಂದ ಎಂದಿದ್ದಾರೆ. 
 

Read more Photos on
click me!

Recommended Stories