ವಿಜಯ್ ಸೂರ್ಯ ಮನೆಯಲ್ಲಿ ಲಕ್ಷ್ಮೀ ಪೂಜೆ...ತುಂಬು ಗರ್ಭಿಣಿ ನೇಹಾ ಗೌಡ ಸೇರಿ ಕಿರುತೆರೆ ತಾರೆಯರು ಭಾಗಿ

Published : Aug 24, 2024, 12:23 PM IST

ನಟ ವಿಜಯ್ ಸೂರ್ಯ ಮನೆಯಲ್ಲಿ ಲಕ್ಷ್ಮೀ ಪೂಜೆ ಅದ್ಧೂರಿಯಾಗಿ ನೆರವೇರಿದ್ದು, ನಮ್ಮ ಲಚ್ಚಿ ತಂಡ ಸೇರಿ ಹಲವಾರು ಸೆಲೆಬ್ರಿಟಿಗಳು ಭಾಗಿಯಾಗಿದ್ದರು.   

PREV
18
ವಿಜಯ್ ಸೂರ್ಯ ಮನೆಯಲ್ಲಿ ಲಕ್ಷ್ಮೀ ಪೂಜೆ...ತುಂಬು ಗರ್ಭಿಣಿ  ನೇಹಾ ಗೌಡ ಸೇರಿ ಕಿರುತೆರೆ ತಾರೆಯರು ಭಾಗಿ

ಕಳೆದ ಶುಕ್ರವಾರ ವರಮಹಾಲಕ್ಷ್ಮೀ ಪೂಜೆ ಎಲ್ಲರ ಮನೆಯಲ್ಲೂ ಅದ್ಧೂರಿಯಾಗಿ ನಡೆದಿತ್ತು. ಇದೀಗ ಈ ಶುಕ್ರವಾರ ಕಿರುತೆರೆಯ ಜನಪ್ರಿಯ ನಟ ವಿಜಯ್ ಸೂರ್ಯ (Vijay Surya)ಮನೆಯಲ್ಲಿ ಲಕ್ಷ್ಮೀ ಪೂಜೆ ಅದ್ಧೂರಿಯಾಗಿ ನಡೆದಿದೆ. 
 

28

ವಿಜಯ್ ಸೂರ್ಯ ಮನೆಯಲ್ಲಿ ನಡೆದ ಲಕ್ಷ್ಮೀ ಪೂಜೆಯಲ್ಲಿ (Lakshmi Puja) ಕಿರುತೆರೆಯ ನಟ-ನಟಿಯರು ಸಂಭ್ರಮದಿಂದ ಭಾಗಿಯಾಗಿದ್ದು, ಈ ಫೋಟೊಗಳು ವೈರಲ್ ಆಗಿವೆ. 
 

38

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಮ್ಮ ಲಚ್ಚಿ ಧಾರಾವಾಹಿಯಲ್ಲಿ ನಾಯಕನಾಗಿ ವಿಜಯ್ ಸೂರ್ಯ ನಟಿಸಿದ್ದರು. ಈ ಹಿನ್ನೆಲೆಯಲ್ಲಿ ಸೀರಿಯಲ್ ನ ಸಂಪೂರ್ಣ ತಂಡ ಪೂಜೆಯಲ್ಲಿ ಭಾಗಿಯಾಗಿತ್ತು. 
 

48

ನಮ್ಮ ಲಚ್ಚಿ ಧಾರಾವಾಹಿಯ ನಿರ್ದೇಶಕ ಸಂಪೃಥ್ವಿ, ನಾಯಕಿ ನೇಹಾ ಗೌಡ, (Neha Gowda) ಶಾಸ್ತ್ರೀ, ಸುಷ್ಮಿತಾ ಜಗ್ಗಪ್ಪ, ವಾಣಿಶ್ರೀ, ಮಾನಸ ಭಟ್ ಪೂಜೆಯಲ್ಲಿ ಭಾಗಿಯಾಗಿದ್ದರು. 
 

58

ಅಷ್ಟೇ ಅಲ್ಲ ನಟಿ ನಿರೂಪಕಿ ಅನುಪಮಾ ಗೌಡ (Anupama Gowda), ಸ್ಯಾಂಡಲ್ ವುಡ್ ನಟಿ ಹಿತಾ ಚಂದ್ರಶೇಖರ್ ಮತ್ತು ಸಹೋದರಿ ಖುಷಿ ಚಂದ್ರಶೇಖರ್, ನಟ ಚಂದು ಗೌಡ, ಸುಜಯ್ ಹೆಗಡೆ, ಮುಖ್ಯಮಂತ್ರಿ ಚಂದ್ರು ಸಹ ಭಾಗವಹಿಸಿದ್ದರು. 
 

68

ಎರಡು ದಿನಗಳ ಹಿಂದಷ್ಟೇ ಸೀಮಂತ ಮುಗಿಸಿದ್ದ ತುಂಬುಗರ್ಭಿಣಿ ನಟಿ ನೇಹಾ ಗೌಡ ಕೂಡ ಪೂಜೆಯಲ್ಲಿ ಭಾಗಿಯಾಗಿದ್ದರು. ಕೆಂಪು ಸೀರೆಯುಟ್ಟು ಬಂದ ನೇಹಾ ಮುಖದಲ್ಲಿ ಪ್ರೆಗ್ನೆನ್ಸಿ ಗ್ಲೋ ಎದ್ದು ಕಾಣುತ್ತಿತ್ತು. 
 

78

ನಮ್ಮ ಲಚ್ಚಿ (Namma Lacchi) ಬಳಿಕ ಇದೀಗ ವಿಜಯ್ ಸೂರ್ಯ ಮತ್ತೊಂದು ಹೊಸ ಧಾರಾವಾಹಿ (Serial) ಮೂಲಕ ಕನ್ನಡಿಗರನ್ನು ರಂಜಿಸೋಕೆ ಬರ್ತಿದ್ದಾರೆ.  
 

88

ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗಲಿರುವ ದೃಷ್ಟಿ ಬೊಟ್ಟು ಧಾರಾವಾಹಿಯಲ್ಲಿ ವಿಜಯ್ ಸೂರ್ಯ ದತ್ತಾ ಭಾಯ್ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಸೀರಿಯಲ್ ಸದ್ಯದಲ್ಲಿ ಪ್ರಸಾರವಾಗಲಿದೆ. . 
 

Read more Photos on
click me!

Recommended Stories