ದೀಪಾವಳಿ ಫೋಟೋಶೂಟ್ ಮಾಡಿದ ಕಾವ್ಯಾ ಗೌಡ; ಪುಟ್ಟ ಮಗುವಿಗೂ ಈಗಲೇ ಶೋಕಿ ಕಲಿಸಬೇಡಿ ಎಂದು ಕಾಲೆಳೆದ ನೆಟ್ಟಿಗರು!

First Published | Nov 2, 2024, 10:40 AM IST

ವೈರಲ್ ಆಯ್ತು ಕಾವ್ಯಾ ಗೌಡ ದೀಪಾವಳಿ ಫೋಟೋಶೂಟ್‌. ಪುಟ್ಟ ಮಗುವನ್ನು ಹೆಚ್ಚಿಗೆ ಎಕ್ಸ್‌ಪೋಸ್ ಮಾಡುತ್ತಿರುವುದಕ್ಕೆ ನೆಟ್ಟಿಗರಿಂದ ಆಕ್ರೋಶ...... 
 

ರಾಧಾ ರಮಣ, ಗಾಂಧಾರಿ ಸೇರಿದಂತೆ ಹಲವು ಕಿರುತೆರೆ ಧಾರಾವಾಹಿಗಳಲ್ಲಿ ಅಭಿನಯಿಸಿರುವ ಕಾವ್ಯಾ ಗೌಡ, ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಂತೆ ಬಣ್ಣದ ಪ್ರಪಂಚದಿಂದ ದೂರ ಉಳಿದುಬಿಟ್ಟರು.

 ಮದುವೆ ನಂತರ ಸೀರಿಯಲ್ ಬಿಟ್ಟರೂ ಸೋಷಿಯಲ್ ಮೀಡಿಯಾದ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕ ಹೊಂದಿದ್ದು, ತಮ್ಮ ಜೀವನದ ಅಪ್ಡೇಟ್‌ಗಳನ್ನು ಶೇರ್ ಮಾಡುತ್ತಾರೆ. 

Tap to resize

ಕಾವ್ಯಾ ಈ ವರ್ಷ ತಮ್ಮ ದೀಪಾವಳಿ ಹಬ್ಬವನ್ನು ಇನ್ನು ಹೆಚ್ಚು ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಲು ಪುತ್ರಿ ಸಿಯಾ ಕಾರಣ. ಹೀಗಾಗಿ ಮೊದಲ ವರ್ಷ ಎಂದು ಫೋಟೋಶೂಟ್ ಮಾಡಿಸಿದ್ದಾರೆ.

ಹೌದು! ಕೆಂಪು ಬಣ್ಣದ ರೇಶ್ಮೆ ಡಿಸೈನರ್ ಲಂಗಾ ಬ್ಲೌಸ್‌ನಲ್ಲಿ ಸಿಯಾ ಕಾಣಿಸಿಕೊಂಡರೆ, ಗೋಲ್ಡನ್ ಕ್ರೀಮ್ ಕಾಂಬಿನೇಷನ್‌ ಇರುವ ಸೀರೆಯಲ್ಲಿ ಕಾವ್ಯಾ ಗೌಡ ಮಿಂಚಿದ್ದಾರೆ.

ಈ ಫೋಟೋಶೂಟ್‌ನ ಕಾವ್ಯಾ ಗೌಡ ಮತ್ತು ಪುತ್ರಿ ಸಿಯಾ ಮಾತ್ರವಲ್ಲದೆ ಅಕ್ಕ ಭವ್ಯಾ ಗೌಡರ ಮಕ್ಕಳಾದ ಆದ್ಯಾ ಮತ್ತು ಆರ್ಯ ಕೂಡ ಭಾಗಿಯಾಗಿದ್ದಾರೆ. 

ನೀವು ಐಷಾರಾಮಿ ಜೀವನ ನೋಡಿದ್ದು ದೊಡ್ಡವರಾದ ಮೇಲೆ ಹೀಗಿರುವಾಗಿ ನಿಮ್ಮ ಪುಟ್ಟ ಕಂದಮ್ಮನಿಗೆ ಯಾಕೆ ಈಗಲೇ ಶೋಕಿ ಜೀವನ ಮಾಡಿಸುತ್ತಿದ್ದೀರಿ ಎಂದು ನೆಟ್ಟಿಗರು ನೆಗೆಟಿವ್ ಕಾಮೆಂಟ್ ಹಾಕಿದ್ದಾರೆ. 

Latest Videos

click me!