Kishen Bilagali ಮಾಜಿ ಗರ್ಲ್ ಫ್ರೆಂಡ್ ಬರ್ತ್ ಡೇ…. ಹುಡುಗಿ ಫೋಟೊ ಶೇರ್ ಮಾಡಿದ ಕಿಶನ್ ಹೇಳಿದ್ದೆನು?

Published : Nov 24, 2025, 07:43 PM IST

ಡ್ಯಾನ್ಸರ್ ಹಾಗೂ ನಟನಾಗಿ ಗುರುತಿಸಿಕೊಂಡಿರುವ ಚಿಕ್ಕಮಗಳೂರು ಹುಡುಗ ಕಿಶನ್ ಬಿಳಗಲಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಾಜಿ ಗರ್ಲ್ ಫ್ರೆಂಡ್ ಫೋಟೊ ಶೇರ್ ಮಾಡಿ, ಆಕೆಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಕಿಶನ್ ನಡೆಗೆ ಅಭಿಮಾನಿಗಳು ಭೇಷ್ ಎಂದಿದ್ದಾರೆ.

PREV
16
ಕಿಶನ್ ಬಿಳಗಲಿ

ಕನ್ನಡ ಮಾತ್ರವಲ್ಲದೇ ಹಿಂದಿ ರಿಯಾಲಿಟಿ ಶೋಗಳನ್ನು ಡ್ಯಾನ್ಸ್ ಮಾಡಿ ವಿಜೇತರಾಗಿ ಖ್ಯಾತಿ ಪಡೆದ ಕಿಶನ್ ಬಿಳಗಲಿ, ಕನ್ನಡ ಬಿಗ್ ಬಾಸ್ ಮೂಲಕ ಕನ್ನಡಿಗರಿಗೆ ಹತ್ತಿರವಾಗಿದ್ದರು. ಇದೀಗ ಸ್ಪೆಷಲ್ ಫೋಟೊ ಶೇರ್ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ.

26
ಕಿಶನ್ ಮಾಜಿ ಗೆಳತಿಯ ಹುಟ್ಟುಹಬ್ಬ

ಸದ್ಯ ಕಿಶನ್ ತಮ್ಮ ಇನ್’ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿರುವ ಫೋಟೊಗಳು ಭಾರಿ ಸದ್ದು ಮಾಡುತ್ತಿವೆ. ಅಷ್ಟಕ್ಕೂ ಕಿಶನ್ ಶೇರ್ ಮಾಡಿರೋದು ಯಾರ್ ಫೋಟೊ ಗೊತ್ತಾ? ತಮ್ಮ ಮಾಜಿ ಗರ್ಲ್ ಫ್ರೆಂಡ್ ಫೋಟೊ. ಕಾರಣ ಇವತ್ತು ಆಕೆಯ ಬರ್ತ್ ಡೇ.

36
ಮಾಜಿ ಗರ್ಲ್ ಫ್ರೆಂಡ್ ಗೆ ಸ್ಪೆಷಲ್ ಬರ್ತ್ ಡೇ ವಿಶ್

ಕಿಶನ್ ಬಿಳಗಲಿ ತಮ್ಮ ಮಾಜಿ ಗರ್ಲ್ ಫ್ರೆಂಡ್ ಹುಟ್ಟುಹಬ್ಬಕ್ಕೆ ಒಂದಷ್ಟು ಹಳೆಯ ಫೋಟೊಗಳನ್ನು ಶೇರ್ ಮಾಡಿ, ಬೆಂಬಲ ನೀಡಿದಕ್ಕಾಗಿ ಥ್ಯಾಂಕ್ಯೂ ಎಂದಿದ್ದಾರೆ. ಜೊತೆಗೆ ಮುದ್ದಾಗಿ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

46
ಏನ್ ಹೇಳಿದ್ರು ಕಿಶನ್

ಪ್ರತಿಯೊಂದು ಪ್ರೇಮಕಥೆಯೂ ಸುಖಾಂತ್ಯವಾಗಬೇಕಾಗಿಲ್ಲ, ಪ್ರತಿ ಬ್ರೇಕಪ್ ದ್ವೇಷವಾಗಿ ಬದಲಾಗಬೇಕಾಗಿಲ್ಲ .. ನನ್ನದು ನನ್ನ ಜೀವನವನ್ನು ಬದಲಾಯಿಸಿತು ... ಹುಟ್ಟುಹಬ್ಬದ ಶುಭಾಶಯಗಳು ಪ್ರಿನ್ಸೆಸ್. ನಾನು ನನ್ನ ಜೀವನದ ಕಠಿಣ ಪರಿಸ್ಥಿತಿಯಲ್ಲಿದ್ದಾಗ ನನ್ನ ಪಕ್ಕದಲ್ಲಿದ್ದಕ್ಕಾಗಿ ಮತ್ತು ನನ್ನ ಎಲ್ಲಾ ಪರಿಸ್ಥಿತಿಯಲ್ಲೂ ನಂಬಿದ್ದಕ್ಕಾಗಿ ಧನ್ಯವಾದಗಳು .. ನಿನ್ನ ನೆನಪುಗಳು ನನ್ನ ದೊಡ್ಡ ನಿಧಿಯಾಗಿರುತ್ತವೆ .. ಹೇಳಲಾಗದ ಕಥೆ . “ಮಿಸ್ ಇಂಡಿಪೆಂಡೆಂಟ್. ಎಂದು ಕಿಶನ್ ಬರೆದುಕೊಂಡಿದ್ದಾರೆ.

56
ಕಿಶನ್ ನಡೆ ಮೆಚ್ಚಿಕೊಂಡ ಫ್ಯಾನ್ಸ್

ಬ್ರೇಕಪ್ ಮಾಡಿಕೊಂಡ ಹುಡುಗಿಯನ್ನು ದ್ವೇಷಿಸುವವರ ಮಧ್ಯೆ, ಆಕೆಯನ್ನು ಹೊಗಳಿ, ತನ್ನ ಬದಕು ಬದಲಾಯಿಸಿದ ಆಕೆಗೆ ಶುಭ ಕೋರಿದ ಕಿಶನ್ ನಡೆಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ನಿಮ್ಮ ಮೃದು ಹೃದಯಕ್ಕೆ, ಮುದ್ದಾದ ಶುಭಾಶಯಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ ಅಭಿಮಾನಿಗಳು.

66
ಯಾರು ಈ ಮಿಸ್ಟ್ರೀ ಗರ್ಲ್

ಅಂದ ಹಾಗೆ ಕಿಶನ್ ಶೇರ್ ಮಾಡಿರುವಂತಹ ಆ ಮಿಸ್ಟ್ರಿ ಗರ್ಲ್ ಯಾರು ಎಂಬುದು ಗೊತ್ತಿಲ್ಲ. ಫೋಟೊ ನೋಡುತ್ತಿದ್ದರೆ ತುಂಬಾ ಹಳೆಯ ಫೋಟೊದಂತಿದೆ. ಎಲ್ಲೂ ಕಿಶನ್ ಆಕೆಯ ಫೇಸ್ ರಿವೀಲ್ ಮಾಡಿಲ್ಲ. ಹಾಗಾಗಿ ಆಕೆ ಕಿಶನ್ ಬಿಳಗಲಿಯ ಮಿಸ್ಟ್ರಿ ಎಕ್ಸ್ ಗರ್ಲ್ ಫ್ರೆಂಡ್ ಆಗಿಯೇ ಉಳಿದುಕೊಂಡಿದ್ದಾರೆ.

Read more Photos on
click me!

Recommended Stories