ಧರೆಗಿಳಿದ ಶಿವ-ಪಾರ್ವತಿ: ಬಿಗ್​ಬಾಸ್​ ಕಿಶನ್​ ಬಿಳಗಲಿಗೆ Lakshmi Nivasa ಭಾವನಾ ಜೋಡಿ- ಅದ್ಭುತ ಫೋಟೋಗಳು

Published : Feb 15, 2026, 08:01 PM IST

ಬಿಗ್​ಬಾಸ್ ಖ್ಯಾತಿಯ ಡಾನ್ಸರ್ ಕಿಶನ್‌ ಬಿಳಗಲಿ, 'ಲಕ್ಷ್ಮೀ ನಿವಾಸ' ಸೀರಿಯಲ್ ನಟಿ ದಿಶಾ ಮದನ್ (ಭಾವನಾ) ಜೊತೆ ಶಿವರಾತ್ರಿ ಪ್ರಯುಕ್ತ  ಡ್ಯುಯೆಟ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಈ ವಿಡಿಯೋ

PREV
16
ಕಿಶನ್‌ ಬಿಳಗಲಿ ಫೇಮಸ್​

ಬಿಗ್​ಬಾಸ್ ಮೂಲಕವೇ ಸಕತ್​ ಫೇಮಸ್​ ಆಗಿರೋ ಕಿಶನ್‌ ಬಿಳಗಲಿ ಇದಾಗಲೇ ಹಲವು ನಟಿಯರ ಜೊತೆ ರೊಮ್ಯಾಂಟಿಕ್​ ಸ್ಟೆಪ್​ ಹಾಕುವ ಮೂಲಕ ಫೇಮಸ್​ ಆಗಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಇವರು ಕಿಚ್ಚು ಹೊತ್ತಿಸುತ್ತಿದ್ದಾರೆ.

26
ಲಕ್ಷ್ಮೀ ನಿವಾಸ ಭಾವನಾ ಜೊತೆ

ಇದಾಗಲೇ ಹಲವು ಕಿರುತೆರೆ ನಟಿಯರ ಜೊತೆ ಸೇರಿ ಕೆಲವು ಡ್ಯೂಯೆಟ್​ ಹಾಡಿದ್ದು, ಅದಕ್ಕೆ ಅಭಿಮಾನಿಗಳು ಮನಸೋತಿದ್ದಾರೆ. ಇಂದು ಶಿವರಾತ್ರಿ ಹಿನ್ನೆಲೆಯಲ್ಲಿ ಅವರು ಲಕ್ಷ್ಮೀ ನಿವಾಸ (Lakshmi Nivasa Serial) ಭಾವನಾ ಅರ್ಥಾತ್​ ದಿಶಾ ಮದನ್ ಜೊತೆ ಡ್ಯುಯೆಟ್​ ಹಾಡಿದ್ದಾರೆ. ​

36
ಕಿಶನ್​ ಕುರಿತು

ಕಿಶನ್‌ ಬಿಳಗಲಿ (Kishen Bilagali). ಕಿಶನ್​ ಅವರು ಮೂಲತಃ ಡಾನ್ಸರ್​ ಚಿಕ್ಕಮಗಳೂರಿನ ಇವರು ಬಿಗ್​ಬಾಸ್​ 7ರಿಂದ ಸಕತ್​ ಫೇಮಸ್​ ಆಗಿದ್ದರೂ, 2018 ರ ಹಿಂದಿ ರಿಯಾಲಿಟಿ ಷೋ ಡ್ಯಾನ್ಸ್ ದಿವಾನಿಯ ವಿಜೇತರು ಕೂಡ. ಹೀಗೆ ಕನ್ನಡ ಮಾತ್ರವಲ್ಲದೇ ಹಿಂದಿಯಲ್ಲಿಯೂ ಛಾಪು ಮೂಡಿಸಿದ್ದಾರೆ ಕಿಶನ್​.

46
ಬಿಸಿನೆಸ್​ಮನ್​ ಕೂಡ

ಡಾನ್ಸ್​ ಮಾತ್ರವಲ್ಲದೇ ಬಿರಿಯಾನಿ ಪ್ಯಾಲೇಸ್‌ ಫ್ರಾಂಚೈಸಿ ಕೂಡ ಇವರು ಹೊಂದಿದ್ದು, ಬೆಂಗಳೂರಿನಲ್ಲಿ ಇವರ ಔಟ್​ಲೆಟ್​ಗಳಿವೆ. ಇದಕ್ಕೆ ಸಾಕ್ಷಿ ಎಂಬಂತೆ ಖುದ್ದು ಇವರೇ ಬಿರಿಯಾನಿ ತಯಾರಿಸುತ್ತಿದ್ದ ವಿಡಿಯೋ ಒಂದು ವೈರಲ್​ ಆಗಿತ್ತು.

56
ನಟಿ ದಿಶಾ ಮದನ್​ ಕುರಿತು

ಇನ್ನು, ನಟಿ ದಿಶಾ ಮದನ್​ (Disha Madan) ಎಂದರೆ ಕಿರುತೆರೆ ವೀಕ್ಷಕರಿಗೆ ಯಾರೆಂದು ತಿಳಿಯದೇ ಹೋಗಬಹುದು. ಆದರೆ ಲಕ್ಷ್ಮೀನಿವಾಸ ಸೀರಿಯಲ್​ ಭಾವನಾ, ಸಿದ್ದೇಗೌಡ್ರ ಮುದ್ದಿನ ಹೆಂಡ್ತಿ ಎಂದರೆ, ಸಾಫ್ಟ್​ ಆಗಿರೋ ತುಂಬಾ ಮಿತವಾಗಿ ಮಾತನಾಡುವ ಹೆಣ್ಣುಮಗಳೊಬ್ಬಳು ಕಣ್ಣೆದುರು ಬರುತ್ತಾಳೆ. ಆಕೆಯೇ ನಿಜ ಜೀವನದಲ್ಲಿ ಸ್ಟೈಲಿಷ್​ ಆಗಿರೋ ನಟಿ ದಿಶಾ ಮದನ್​.

66
ಸಿನಿಮಾಗಳಲ್ಲಿ ನಟನೆ

ಕಳೆದ ವರ್ಷ ಕೇನ್ಸ್​ ಫಿಲ್ಮ್​ ಫೆಸ್ಟಿವಲ್​ನ ರೆಡ್​​ ಕಾರ್ಪೆಟ್​ ಮೂಲಕ ಮಿಂಚುವ ಮೂಲಕ ಕರುನಾಡಿಗೂ ಕೀರ್ತಿ ತಂದಿರುವ ನಟಿ ಈಕೆ. ಅಸಲಿ ಜೀವನದಲ್ಲಿ ಇಬ್ಬರು ಮಕ್ಕಳಾದ ಮೇಲೂ ಬಣ್ಣದ ಲೋಕದಲ್ಲಿ ಮಿಂಚುತ್ತಿದ್ದಾರೆ ನಟಿ. ಇವರು ಕುಲವಧು ಸೀರಿಯಲ್ ಮೂಲಕ ಕನ್ನಡಿಗರಿಗೆ ಪರಿಚಿತರಾದರು. ಬಳಿಕ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದ ನಟಿ, ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories