ಕೆಂಡ ಸಂಪಿಗೆಯ ಹಳ್ಳಿ ಹುಡುಗಿ ಸುಮನ ರಿಯಲ್ ಲೈಫಲ್ಲಿ ಸಖತ್ ಸ್ಟೈಲಿಶ್!

Published : Aug 25, 2023, 02:20 PM IST

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕೆಂಡಸಂಪಿಗೆ ಸೀರಿಯಲ್ ನಲ್ಲಿ ನಾಯಕಿ ಸುಮನಾಳನ್ನು ನೋಡಿ ಮರುಕ ಪಟ್ಟವರೇ ಹೆಚ್ಚು, ಯಾಕಂದ್ರೆ ಆಕೆಯದು ಮುಗ್ಧ ಹಳ್ಳಿ ಹುಡುಗಿ ಪಾತ್ರ. ಆದರೆ ನಿಜ ಜೀವನದಲ್ಲಿ ಇವರು ಹೇಗಿದ್ದಾರೆ ಗೊತ್ತಾ?   

PREV
18
ಕೆಂಡ ಸಂಪಿಗೆಯ ಹಳ್ಳಿ ಹುಡುಗಿ ಸುಮನ ರಿಯಲ್ ಲೈಫಲ್ಲಿ ಸಖತ್ ಸ್ಟೈಲಿಶ್!

ವಿಭಿನ್ನ ಕಥೆಗಳ ಮೂಲಕ ಪ್ರೇಕ್ಷಕರನ್ನು ರಂಜಿಸಲು ಒಂದು ಹೆಜ್ಜೆ ಮುಂದೆ ಇರುವ ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಕೆಂಡಸಂಪಿಗೆ ಸೀರಿಯಲ್ ಸಹ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈವಾಗ ಈ ಸೀರಿಯಲ್ ನಾಯಕಿ ಸುಮನಾ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ತಿಳಿಯೋಣ. 
 

28

ಎಲ್ಲರೂ ಹೇಳಿದ್ದಕ್ಕೆ ಸುಮ್ಮನೆ ತಲೆಯಾಡಿಸುವ, ಎಲ್ಲರನ್ನೂ ಕಣ್ಣು ಮುಚ್ಚಿ ನಂಬುವ ಹಳ್ಳಿಯ ಮುಗ್ಧ ಹುಡುಗಿ  ಸುಮನಾ ಆಗಿ ನಟಿಸುತ್ತಿರುವ ಕೆಂಡ ಸಂಪಿಗೆ ಸೀರಿಯಲ್ ನಾಯಕಿಯ ನಿಜವಾದ ಹೆಸರು ಕಾವ್ಯ ಶೈವ (Kavya Shaiva). ತಮ್ಮ ಮುಗ್ಧ ಅಭಿನಯದ ಮೂಲಕ ಇವರು ಅಭಿಮಾನಿಗಳನ್ನು ಪಡೆಯುವಲ್ಲಿಯೂ ಯಶಸ್ವಿಯಾಗಿದ್ದಾರೆ. 
 

38

ಕಾವ್ಯಗೆ ಇದು ಮೊದಲ ಸೀರಿಯಲ್ ಅಲ್ಲ, ಪೋಷಕ ಪಾತ್ರದ ಮೂಲಕ ಕಾವ್ಯ ನಟನಾ ರಂಗಕ್ಕೆ ಎಂಟ್ರಿ ಕೊಟ್ಟರು. ಇವರು ಈ ಮೊದಲು ಕಲರ್ಸ್ ಸೂಪರ್ (Colors Super) ನಲ್ಲಿ ಪ್ರಸಾರವಾಗುತ್ತಿದ್ದ ಭೂಮಿ ತಾಯಾಣೆ ಸೀರಿಯಲ್ ನಲ್ಲಿ ನಾಯಕನ ಲವರ್ ಆಗಿ ಕಾಣಿಸಿಕೊಂಡಿದ್ದರು. ಆದರೆ ಜನಮನ ಗೆದ್ದಿದ್ದು ಕೆಂಡ ಸಂಪಿಗೆಯ ಮೂಲಕ. 
 

48

ಕನ್ನಡ ಮಾತ್ರ ಅಲ್ಲ, ಕಾವ್ಯ ಶೈವ ತೆಲುಗು ಕಿರುತೆರೆಯಲ್ಲೂ (telugu serial) ಸಹ ಮಿಂಚಿದ್ದಾರೆ. ಇವರು ತೆಲುಗಿನಲ್ಲಿ ಹಂಸಗೀತಂ ಎಂಬ ಸೀರಿಯಲ್ ನಲ್ಲಿ ಮುಸ್ಲಿಂ ಹುಡುಗಿಯ ಪಾತ್ರದಲ್ಲಿ ನಟಿಸಿದ್ದರು. ಅಲ್ಲೂ ಸಹ ಇವರು ತಮ್ಮ ನಟನೆಯ ಮೂಲಕ ಸೈ ಎನಿಸಿಕೊಂಡಿದ್ದರು. 
 

58

ಕಾವ್ಯ ಹುಟ್ಟಿದ್ದು ಬೆಳೆದಿದ್ದು ಎಲ್ಲಾ ಕೆ. ಆರ್ ಪೇಟೆಯಲ್ಲಿ.ಇವರು  ಬಾಲ್ಯದ ಶಿಕ್ಷಣವನ್ನು ಕೆ. ಆರ್ ಪೇಟೆಯಲ್ಲೇ ಮುಗಿಸಿದ್ದರು. ಆ ಬಳಿಕ ತಮ್ಮ ಉನ್ನತ ಶಿಕ್ಷಣಕ್ಕಾಗಿ ಮೈಸೂರಿಗೆ ಬಂದರು. ಬಾಲ್ಯದಿಂದಲೇ ನಟನೆಯ ಮೇಲೆ ಒಲವಿದ್ದುದರಿಂದ, ಯಾವುದೇ ನಟನಾ ತರಭೇತಿ ಪಡೆಯದಿದ್ದರೂ ನಟನಾರಂಗದಲ್ಲಿ ಒಂದೊಂದೆ ಹೆಜ್ಜೆ ಇಟ್ಟು ಮುಂದೆ ಸಾಗಿದರು. 
 

68

ಎಲ್ಲರಂತೆ ಕಾವ್ಯ ಕೂಡ ಸೋಶಿಯಲ್ ಮೀಡಿಯಾದಲ್ಲಿ (Social media) ಆಕ್ಟೀವ್ ಆಗಿರ್ತಾರೆ. ಹೆಚ್ಚಾಗಿ ಫೋಟೋ ಶೂಟ್ ಮಾಡಿಸಿಕೊಳ್ಳುವ ಇವರು, ತಮ್ಮ ಟ್ರೆಡಿಶನಲ್ ಲುಕ್ ಫೋಟೋಸ್ ಮತ್ತು ಮಾಡರ್ನ್ ಫೋಟೋಗಳನ್ನು ಸಹ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡುತ್ತಿರುತ್ತಾರೆ. 
 

78

ಇನ್ನು ಸೀರಿಯಲ್ ಬಗ್ಗೆ ಹೇಳೋದಾದ್ರೆ ಸದ್ಯ ಸುಮನಾ ಗರ್ಭಿಣಿಯಾಗಿದ್ದಾರೆ. ಅನಿವಾರ್ಯವಾಗಿ ಸುಮನಾಳನ್ನು ಮದುವೆಯಾದ ತೀರ್ಥಂಕರ್ ಗೆ ಇದೀಗ ಸುಮನಾ ಮೇಲೆ ಪ್ರೀತಿನೂ ಆಗಿದೆ. ಮಾವ ಅತ್ತೆಯರ ಮುದ್ದಿನ ಸೊಸೆ ಸುಮನಾ, ಜೊತೆಗೆ ಮೈದುನನ ಪ್ರೀತಿಯ ಅತ್ತಿಗೆಯೂ ಹೌದು. ಆದರೆ ಸಾಧನಾ ಮತ್ತು ನಾದಿನಿ ಜಾನುವಿನ ಸಂಚಿಗೆ ಆಗಾಗ ಬಲಿಯಾಗುತ್ತಿದ್ದಾಳೆ ಸುಮನಾ. 
 

88

ಸುಮನಾ ಮುಂದೆ ತುಂಬಾ ಒಳ್ಳೆಯವಳಂತೆ ನಟಿಸುತ್ತಾ, ಬೆನ್ನ ಹಿಂದೆ ಸಂಚು ರೂಪಿಸುತ್ತಿರುವ ಸಾಧನಾಳನ್ನು ಮುಗ್ಧೆಯಾಗಿರುವ ಸುಮನಾ ಸಂಪೂರ್ಣವಾಗಿ ನಂಬಿದ್ದಾಳೆ. ಸಾಧನಾಳ ಸಂಚು ಸುಮನಾಳಿಗೆ ಯಾವಾಗ ತಿಳಿಯುತ್ತೆ? ಮುಂದೆ ಸುಮನಾ ಎಲ್ಲವನ್ನೂ ಎದುರಿಸಿ ನಿಲ್ಲುತ್ತಾಳ ಕಾದು ನೋಡಬೇಕು. 
 

click me!

Recommended Stories