ಬರೋಬ್ಬರಿ 30 ವರ್ಷಗಳ ಬಳಿಕ ಕನ್ನಡಕ್ಕೆ ಬಂದ ಹಿರಿಯ ನಟಿ ಮಹಾಲಕ್ಷ್ಮೀ!

First Published | Aug 24, 2023, 5:00 PM IST

ಸ್ಟಾರ್ ಸುವರ್ಣದಲ್ಲಿ ಆರಂಭವಾಗಲಿರುವ ಹೊಸ ಧಾರಾವಾಹಿ 'ಕಾವೇರಿ ಕನ್ನಡ ಮೀಡಿಯಂ' ನಲ್ಲಿ ಕನ್ನಡದಲ್ಲಿ ಒಂದು ಕಾಲದಲ್ಲಿ ಮಿಂಚಿದ್ದ ನಟಿ ಮಹಾಲಕ್ಷ್ಮೀ ನಟಿಸುತ್ತಿದ್ದಾರೆ. ಬರೋಬ್ಬರಿ ಮೂವತ್ತು ವರ್ಷಗಳ ಬಳಿಕ ಮಹಾಲಕ್ಷ್ಮಿ ಕನ್ನಡದಲ್ಲಿ ನಟಿಸುತ್ತಿದ್ದಾರೆ. 
 

ಮಹಾಲಕ್ಷ್ಮೀ  (Mahalakshmi) ಎಂದ ಕೂಡಲೇ ಆ ಸುಂದರ ನಗುವಿನ, ಅದ್ಭುತ ನಟನೆಯ, ಯಾವ ಪಾತ್ರಕ್ಕೂ ಸೈ ಎನಿಸುವ ಕನ್ನಡದ ಖ್ಯಾತ ನಟಿ ಮಹಾಲಕ್ಷ್ಮಿ ಕಣ್ಣೆದುರು ಬಾರದೇ ಇರರು. ಯಾಕಂದ್ರೆ 90ರ ದಶಕದಲ್ಲಿ ಜನರ ಮನಸ್ಸು ಗೆದ್ದಿದ್ದ ನಟಿ ಇವರು. 

80 -90ರ ದಶಕದಲ್ಲಿ ಕನ್ನಡ, ತಮಿಳು, ಮಲಯಾಲಂ ಮತ್ತು ತೆಲುಗು ಚಿತ್ರರಂಗದಲ್ಲಿ ತನ್ನ ಛಾಪು ಮೂಡಿಸಿ, ಸಡನ್ ಆಗಿ ಚಿತ್ರರಂಗದಿಂದಲೇ ಸಂಪೂರ್ಣವಾಗಿ ಮರೆಯಾದ ನಟಿ ಮಹಾಲಕ್ಷ್ಮಿ. ನಟನೆಯಿಂದಲೇ ದೂರ ಇದ್ದು, ಸಿಸ್ಟರ್ ಆಗಿದ್ದ ಇವರು, ಇದೀಗ ಬರೋಬ್ಬರಿ 30 ವರ್ಷಗಳ ಬಳಿಕ ಕನ್ನಡ ಕಿರುತೆರೆಗೆ ಎಂಟ್ರಿ (acting in Kannada serial) ಕೊಡ್ತಿದ್ದಾರೆ. 

Tap to resize

ಬಾರೇ ನನ್ನ ಮುದ್ದಿನ ರಾಣಿ, ಹೆಂಡ್ತಿಗೇಳ್ಬೇಡಿ, ಪರಶುರಾಮ, ಸಂಸಾರ ನೌಕೆ, ಜಯಸಿಂಹ ಮೊದಲಾದ ಹಿಟ್ ಕನ್ನಡ ಚಿತ್ರಗಳಲ್ಲಿ ನಟಿಸಿದ್ದು ಮಾತ್ರವಲ್ಲದೇ, ರಾಜ್ ಕುಮಾರ್, ವಿಷ್ಣುವರ್ಧನ್, ಅನಂತನಾಗ್, ಟೈಗರ್ ಪ್ರಭಾಕರ್, ಅಂಬರೀಶ್ ಜೊತೆ ನಟಿಸಿದ್ದರು. 
 

1991 ರವರೆಗೆ ಕನ್ನಡದಲ್ಲಿ ಸುಮಾರು 30ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಹಲವು ಹಿಟ್ ಚಿತ್ರಗಳನ್ನು ನೀಡಿ, ಬಹುಬೇಡಿಕೆಯ ನಟಿಯಾಗಿರುವಾಗಲೇ ಮಹಾಲಕ್ಷ್ಮಿ ಚಿತ್ರರಂಗದಿಂದ ದೂರ ಸರಿದಿದ್ದರು. ಇವರು ಜೀವನದಲ್ಲಿ ಪ್ರೇಮವೈಫಲ್ಯದಿಂದ ನಟನೆಯಿಂದ ದೂರ (dissapeared from film industry) ಇದ್ದರು ಎನ್ನಲಾಗಿತ್ತು. 

ನಿರ್ದೇಶಕರೊಬ್ಬರ ಪ್ರೇಮದಲ್ಲಿ ಬಿದ್ದು, ಕುಟುಂಬದ ವಿರೋಧದ ನಡುವೆ ಮದುವೆಯಾಗಲು ಸಾಧ್ಯವಾಗದೇ ಹತಾಶರಾಗಿ ಅವರು ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿ ಕ್ರೈಸ್ತ ಸನ್ಯಾಸಿನಿಯಾಗಿ (Christian nun) ಜನರ ಸೇವೆ ಮಾಡಿಕೊಂಡು, ಹೊರಜಗತ್ತಿನಿಂದ ತುಂಬಾನೆ ದೂರ ಉಳಿದಿದ್ದರು. 
 

ಇದೀಗ ಮಹಾಲಕ್ಷ್ಮೀ ಮತ್ತೆ ಕನ್ನಡ ಜನರಿಗೆ ಮನರಂಜನೆ ನೀಡಲು ಬಂದಿದ್ದಾರೆ. ಬರೋಬ್ಬರಿ 30 ವರ್ಷಗಳ ನಂತರ ನಟಿ ಕನ್ನಡ ಸೀರಿಯಲ್ ಮೂಲಕ ಕನ್ನಡ ಜನರ ಮುಂದೆ ಬಂದಿದ್ದಾರೆ. ಯಾವ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ? ಯಾವ ಪಾತ್ರದಲ್ಲಿ ನಟಿಸುತ್ತಿದ್ದಾರೆ ಗೊತ್ತಾ? 
 

ಸ್ಟಾರ್ ಸುವರ್ಣದಲ್ಲಿ (Star Suvarna)  ಮುಂದಿನ ವಾರದಿಂದ ಪ್ರಸಾರ ಆಗಲಿರುವ 'ಕಾವೇರಿ ಕನ್ನಡ ಮೀಡಿಯಂ'  ಧಾರಾವಾಹಿಯಲ್ಲಿ ಮಹಾಲಕ್ಷ್ಮಿ ನಟಿಸುತ್ತಿದ್ದಾರೆ. ಮನೆಯ ಮುಖ್ಯಸ್ಥೆಯ ಪಾತ್ರದಲ್ಲಿ ಮಹಾಲಕ್ಷ್ಮಿ ನಟಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇದು ಹಾಗೆ ಬಂದು ಹೀಗೆ ಹೋಗುವ ಪಾತ್ರ ಅಲ್ಲ, ಬದಲಾಗಿ ಪವರ್ ಫುಲ್ ಪಾತ್ರ ಎನ್ನಲಾಗಿದೆ. 
 

ಕಾವೇರಿಗೆ ಸದಾ ಬೆಂಬಲವಾಗಿ ನಿಲ್ಲುವ ಶಿಸ್ತಿನ ಅಜ್ಜಿಯಾಗಿ ನಟಿ ಮಹಾಲಕ್ಷ್ಮಿ ಕಾಣಿಸಿಕೊಳ್ಳುತ್ತಿದ್ದಾರೆ.  'ಕಾವೇರಿ ಕನ್ನಡ ಮೀಡಿಯಂ' ಇದೇ ಆಗಸ್ಟ್ 28ರಿಂದ ರಾತ್ರಿ 7.30 ಕ್ಕೆ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗಲಿದೆ. ತಂದೆ ಕಟ್ಟಿಸಿರುವ ಕನ್ನಡ ಮೀಡಿಯಂ ಸ್ಕೂಲ್ ಉಳಿಸಿಕೊಳ್ಳುವ ಕಾವೇರಿಯ ಕಥೆಯನ್ನು ಈ ಧಾರಾವಾಹಿ ಒಳಗೊಂಡಿದೆ. 
 

Latest Videos

click me!