ಕನ್ನಡ ಸೀರಿಯಲ್‌ನ ಅತ್ಯಂತ ಕಿರಿಯ ವಯಸ್ಸಿನ ನಾಯಕಿ ಯಾರು ಗೊತ್ತೇ.? ಇಲ್ಲಿದೆ ನಿಮ್ಮಿಷ್ಟದ ನಟಿಯರ ವಿವರ...

Published : Aug 24, 2023, 06:29 PM ISTUpdated : Aug 24, 2023, 06:31 PM IST

ಪ್ರತನಿತ್ಯ ನಮ್ಮ ಮನೆಯ ಟಿವಿಗಳಲ್ಲಿ ಸಂಜೆಯಾದರೆ ಕಣ್ಣಮುಂದೆ ಬರುವ ಧಾರವಾಹಿಗಳ ನಾಯಕ ನಟಿಯರ ಪೈಕಿ ಯಾರು ಅತ್ಯಂತ ಕಿರಿಯರು, ಹಿರಿಯರು ಎಂಬುದರ ಮಾಹಿತಿ ಇಲ್ಲಿದೆ. ಅವರ ನೈಜ ವಯಸ್ಸೆಷ್ಟು ಎಂಬ ವಿವರವೂ ಇಲ್ಲಿದೆ. 

PREV
19
ಕನ್ನಡ ಸೀರಿಯಲ್‌ನ ಅತ್ಯಂತ ಕಿರಿಯ ವಯಸ್ಸಿನ ನಾಯಕಿ ಯಾರು ಗೊತ್ತೇ.? ಇಲ್ಲಿದೆ ನಿಮ್ಮಿಷ್ಟದ ನಟಿಯರ ವಿವರ...

ರಾಮಾಚಾರಿ (Ramachari) ಧಾರವಾಹಿಯ ನಾಯಕಿ ಮೌನಾ ಗುಡ್ಡೇಮನೆ (Mouna Guddemane) ಅವರಿಗೆ ಈಗಿನ್ನೂ ಕೇವಲ 20 ವರ್ಷ. ಇಷ್ಟುದಿನ ಮಾಡರ್ನ್‌ ಡ್ರೆಸ್‌ ಹಾಕುತ್ತಿದ್ದ ಚಾರು, ರಾಮಾಚಾರಿ ಮದುವೆಯಾದ ನಂತರ ಸೀರೆಯುಡುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ.

29

ಲಕ್ಷ್ಮೀ ಬಾರಮ್ಮ (Lakshmi Baramma) ಧಾರವಾಹಿಯಲ್ಲಿ ಲಕ್ಷ್ಮಿ ಪಾತ್ರವನ್ನು ಮಾಡುತ್ತಿರುವ ಭೂಮಿಕಾ ರಮೇಶ್‌ (Bhoomika Ramesh) ವಯಸ್ಸು ಕೂಡ ಕೇವಲ 20 ವರ್ಷವಾಗಿದೆ. ಇನ್ನು ಮನೆಯಲ್ಲಿ ಮುದ್ದಿನ ಮಗಳಾಗಿದ್ದು, ಸೀರಿಯಲ್‌ ಸೆಟ್‌ನಲ್ಲಿ ಸುಷ್ಮಾರಾವ್‌ ಅವರ ಮುದ್ದಿನ ತಂಗಿಯಾಗಿದ್ದಾಳೆ.

39

ಅಮೃತಧಾರೆ (Amruthadhare) ಧಾರಾವಾಹಿಯ ಮಹಿಮಾ ಪಾತ್ರಧಾರ ನಟಿ ಸಾರಾ ಅಣ್ಣಯ್ಯ (Sara annaiah) ಅವರಿಗೆ ಈಗ 27 ವರ್ಷವಾಗಿದೆ. ಕನ್ನಡತಿ ಧಾರಾವಾಹಿಯಲ್ಲಿ ವಿಲನ್‌ ಪಾತ್ರವನ್ನು ಮಾಡಿದ್ದ ಸಾರಾ ಈಗ ಅಮೃತಧಾರೆ ಧಾರವಾಹಿಯಲ್ಲಿ ನಟ ಗೌತಮ್ ದಿವಾನ್‍ನ ಮುದ್ದಿನ ತಂಗಿಯಾಗಿ ಪಾತ್ರ ಮಾಡುತ್ತಿದ್ದಾಳೆ.

49

ಸತ್ಯ (Sathya) ಧಾರವಾಹಿಯಲ್ಲಿ ಹುಡುಗರಂತೆ ಹೇರ್‌ಸ್ಟೈಲ್, ಜೀನ್ಸ್‌ ಪ್ಯಾಂಟ್‌ ಹಾಗೂ ಶರ್ಟ್‌ ಧರಿಸಿ ಮೆಕ್ಯಾನಿಕ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಗೌತಮಿ ಜಾಧವ್‌ (Gouthami Jadhav) ಅವರಿಗೆ 30 ವರ್ಷವಾಗಿದೆ. ಧಾರವಾಹಿಯಲ್ಲಿ ಮದುವೆಯಾದ ನಂತರ ಸೀರೆ ಧರಿಸುತ್ತಿದ್ದಾರೆ.

59

ಜೊತೆ ಜೊತೆಯಲಿ (Jote Joteyali) ಧಾರವಾಹಿಯ ಖ್ಯಾತ ನಟಿ ಮೇಘಾ ಶೆಟ್ಟಿ (Megha Shety) ಅವರಿಗೆ ಈಗ 25 ವರ್ಷ. ಇತ್ತೀಚೆಗೆ ಕೆಲವು ಸಿನಿಮಾಗಳಲ್ಲಿಯೂ ನಟಿಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್‌ ಆಗಿದ್ದಾರೆ. ತಮ್ಮ ಹಾಟ್‌ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

69

ನಮ್ಮನೆ ಯುವರಾಣಿ (Nammane Yuvarani) ಧಾರವಾಹಿಯಲ್ಲಿ ನಟಿಸಿರುವ ಅಂಕಿತಾ ಅಮರ್‌ (Ankita Amar) ಅವರಿಗೆ ಈಗ 26 ವರ್ಷ. ಸಾಮಾಜಿಕ ಜಾಲತಾಣದ ಮಾಹಿತಿ ಪ್ರಕಾರ 1997ರಲ್ಲಿ ಇವರು ಜನಿಸಿದ್ದಾರೆ.

79

ಪುಟ್ಟಗೌರಿ ಮದುವೆ (Puttagowri Maduve) ಧಾರವಾಹಿಯಲ್ಲಿ ನಟಿಸಿದ್ದ ಹಾಗೂ ಕನ್ನಡತಿ ಧಾರವಾಹಿಯಲ್ಲಿ ಮಿಂಚಿದ್ದ ರಂಜನಿ ರಾಘವನ್‌ (Ranjani Raghavan) ಅವರಿಗೆ ಈಗ 29 ವರ್ಷವಾಗಿದೆ. ಸಾಮಾಜಿಕ ಜಾಲತಾಣದ ಮಾಹಿತಿ ಪ್ರಕಾರ 1994ರ ಮಾ.29ರಂದು ಅವರ ಜ್ಮದಿನಾಂಕವಾಗಿದೆ.

89

ನಾಗಿಣಿ (Nagini) ಧಾರವಾಹಿಯ ಮೂಲಕ ಖ್ಯಾತಿ ಗಳಿಸಿದ ಹಾಗೂ ಕನ್ನಡ ಬಿಗ್‌ಬಾಸ್‌ ರಿಯಾಲಿಟಿ ಮೂಲಕವೂ ಮನೆ ಮಾತಾಗಿರುವ ದೀಪಿಕಾ ದಾಸ್‌ (Deepika Das) ಅವರಿಗೆ ಈಗ 30 ವರ್ಷ. ಇನ್ನು ಅವರು 1993ರಲ್ಲಿ ಜನಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಿಂದ ಮಾಹಿತಿ ಲಭ್ಯವಾಗಿದೆ.

99

ಭಾಗ್ಯಲಕ್ಷ್ಮಿ (Bhagya Lakshmi) ಧಾರಾವಾಹಿಯಲ್ಲಿ 35 ವರ್ಷದ ಮಹಿಳೆಯಾಗಿ ಕಾಣಿಸಿಕೊಂಡಿರುವ ಸುಷ್ಮಾ ರಾವ್‌ (Sushma Rao) ನಿಜವಾದ ವಯಸ್ಸು 38 ವರ್ಷವಾಗಿದೆ. ಸಾಮಾಜಿಕ ಜಾಲತಾಣದ ಮಾಹಿತಿ ಪ್ರಕಾರ ಸುಷ್ಮಾರಾವ್‌ 1985ರಲ್ಲಿ ಜನಿಸಿದ್ದಾರೆ. ಅವರನ್ನು ನೋಡಿದರೆ ಇನ್ನೂ ಯುವತಿಯಂತೆ ಕಾಣುತ್ತಾರೆ.

Read more Photos on
click me!

Recommended Stories