ಮಿನಿ ಸ್ಕರ್ಟ್, ಕ್ರಾಪ್ ಟಾಪಲ್ಲಿ ಮಿಂಚಿದ ಬೆಂಕಿ ತನಿಷಾ ಕುಪ್ಪಂಡ … ತೂಕ ಇಳಿಸಿ ಎಂದ ಅಭಿಮಾನಿ

Published : Aug 15, 2024, 03:30 PM ISTUpdated : Aug 15, 2024, 03:32 PM IST

ಬಿಗ್ ಬಾಸ್ ಫೇಮ್ ತನಿಷಾ ಕುಪ್ಪಂಡ ಮಿನಿಸ್ಕರ್ಟ್ , ಕ್ರಾಪ್ ಟಾಪ್ ಧರಿಸಿ ಸ್ಟೈಲಿಶ್ ಆಗಿ ಪೋಸ್ ನೀಡಿದ್ದು, ಸದ್ಯ ಅವರ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.   

PREV
17
ಮಿನಿ ಸ್ಕರ್ಟ್, ಕ್ರಾಪ್ ಟಾಪಲ್ಲಿ ಮಿಂಚಿದ ಬೆಂಕಿ ತನಿಷಾ ಕುಪ್ಪಂಡ … ತೂಕ ಇಳಿಸಿ ಎಂದ ಅಭಿಮಾನಿ

ಸೀರಿಯಲ್, ಸಿನಿಮಾಗಳಲ್ಲಿ ನಟಿಸಿದ್ದ ನಟಿ ತನಿಷಾ ಕುಪ್ಪಂಡ (Tanisha Kuppanda) ಬಿಗ್ ಬಾಸ್ ಕನ್ನಡ ಸೀಸನ್ 10 ರ ಮೂಲಕ ಜನಪ್ರಿಯತೆ ಗಳಿಸಿದ್ದರು. ಬಿಗ್ ಬಾಸ್ ನಿಂದಾಗಿ ಬೆಂಕಿ ಅಂತಾನೆ ಫೇಮಸ್ ಆಗಿದ್ದಾರೆ ತನಿಷಾ. 
 

27

ಇತ್ತೀಚೆಗೆ ನಟಿ ತನಿಷಾ ಬಿಳಿ ಬಣ್ಣದ ಡೆನಿಮ್ ಮಿನಿ ಸ್ಕರ್ಟ್, ಬಿಳಿ ಬಣ್ಣದ ಕ್ರಾಪ್ ಟಾಪ್ ಜೊತೆಗೆ ಕೇಸರಿ ಬಣ್ಣದ ಜಾಕೆಟ್ ಕೂಡ ಧರಿಸಿದ್ದು ತುಂಬಾನೆ ಸ್ಟೈಲಿಶ್ ಆಗಿ ಕಾಣಿಸುತ್ತಿದ್ದಾರೆ. 
 

37

ತಮ್ಮ ಫೋಟೊಗಳ ಜೊತೆ ನಟಿ ನಿಜವಾದ ಶಕ್ತಿಗೆ ಪರಿಶ್ರಮ, ದಯೆ ಮತ್ತು ಶೌರ್ಯದ ಮಿಶ್ರಣದ ಅಗತ್ಯವಿದೆ ( True strength requires a mix of perseverance, kindness, and bravery) ಎಂದು ಕ್ಯಾಪ್ಶನ್ ಕೂಡ ಹಾಕಿದ್ದರು. 
 

47

ನೀವು ತುಂಬಾನೇ ಸುಂದರ ಮತ್ತು ಶುದ್ಧ ಹೃದಯವನ್ನು ಹೊಂದಿದ್ದೀರಿ. ನಿಮ್ಮ ದಯೆ ಮತ್ತು ಇತರರ ಬಗ್ಗೆ ನೀವು ಕಾಳಜಿ ತೋರುವ ರೀತಿಯೇ ಚಂದ.  ನಿಮ್ಮಂತಹ ಪ್ರಾಮಾಣಿಕ ಮತ್ತು ಸಹಾನುಭೂತಿಯುಳ್ಳ ವ್ಯಕ್ತಿ ಇರೋದೆ ಅಪರೂಪ. ನಿಮ್ಮ ಒಳ್ಳೆಯತನವು ನಿಮ್ಮ ಸುತ್ತಲಿನ ಎಲ್ಲರಿಗೂ ಸ್ಫೂರ್ತಿಯಾಗಿದೆ ಎಂದು ಒಬ್ರು ಕಾಮೆಂಟ್ ಮಾಡಿದ್ದಾರೆ. 
 

57

ಹೆಚ್ಚಿನ ಜನ ತನಿಷಾ ಫೋಟೊ ನೋಡಿ ಬೆಂಕಿ, ಗಾರ್ಜಿಯಸ್, ಬ್ಯೂಟಿ, ಡ್ರೀಮ್ ಗರ್ಲ್ (dream girl), ಗಾರ್ಜಿಯಸ್ ಎಂದೆಲ್ಲಾ ಕಾಮೆಂಟ್ ಮಾಡುವ ಮೂಲಕ ತಮ್ಮ ನೆಚ್ಚಿನ ನಟಿಯನ್ನ ಹೊಗಳಿದ್ದಾರೆ. ಇನ್ನು ಕೆಲವರು ತೂಕ ಇಳಿಸಿ ಮೇಡಂ ಎಂದಿದ್ದಾರೆ. 

67

ಬಿಗ್ ಬಾಸ್ (Bigg Boss) ನಿಂದ ಬಂದ ನಂತರ ತನಿಷಾ ಕುಪ್ಪಂಡ ತುಂಬಾನೆ ಬ್ಯುಸಿಯಾಗಿದ್ದಾರೆ, ತಮ್ಮದೇ ಆದ ರೆಸ್ಟೋರೆಂಟ್ ಹೊಂದಿದ್ದು, ನಂತ್ರ ತಮ್ಮದೇ ಆದ ಕುಪ್ಪಂಡಾಸ್ ಜ್ಯುವೆಲ್ಲರಿ ಕೂಡ ತೆರೆದಿದ್ದಾರೆ. 
 

77

ಇತ್ತೀಚೆಗೆ ನಟಿ ಹೊಸ ಸಾಹಸಕ್ಕೆ ಕೈ ಇಟ್ಟಿದ್ದು, ಕುಪ್ಪಂಡಾಸ್ ಪ್ರೊಡಕ್ಷನ್ ಹೌಸ್ (production house) ನಿರ್ಮಾಣ ಮಾಡಿದ್ದಾರೆ. ತಮ್ಮ ಪ್ರೊಡಕ್ಷನ್ ಹೌಸ್ ನಿಂದ ಮೊದಲ ಸಿನಿಮಾ ನಿರ್ಮಾಣಕ್ಕೂ ಮುಂದಾಗಿದ್ದು, ಕೋಮಲ್ ಕುಮಾರ್ ಅವರ ಕೋಣ ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ. 
 

Read more Photos on
click me!

Recommended Stories