ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಶ್ರಾವಣಿ ಸುಬ್ರಹ್ಮಣ್ಯ (Shravani Subramanya) ಧಾರಾವಾಹಿಯಲ್ಲಿ ಶ್ರಾವಣಿಯನ್ನು ಕಂಡರೇನೆ ಆಗದ ಶ್ರಾವಣಿಯ ಅಪ್ಪ ಹಾಗೂ ಶಿಕ್ಷಣ ಮಂತ್ರಿ ವೀರೆಂದ್ರನಾಥ್, ವೀರೂ ಪಾತ್ರಕ್ಕೆ ಜೀವ ತುಂಬುತ್ತಿರುವ ನಟ ಮೋಹನ್ ಶಂಕರ್ ಚಂದನವನದ ಹಿರಿಯ ಕಲಾವಿದೆ.
ಮೋಹನ್ ಶಂಕರ್ (Mohan Shankar) ಕನ್ನಡಿಗರಿಗೆ ಪರಿಚಯವಾಗಿದ್ದೇ, ಕನ್ನಡ ಸಿನಿಮಾಗಳ ಮೂಲಕ. ಎಲೆಕ್ಟ್ರಾನಿಕ್ಸ್ ನಲ್ಲಿ ಡಿಗ್ರಿ ಪಡೆದಿರುವ ಮೋಹನ್, ಇಪ್ಪತ್ತರ ಹರೆಯದಲ್ಲೇ ನಟನೆಯಲ್ಲಿ ತೊಡಗಿಸಿಕೊಂಡರು. ಇವರು ಕೇವಲ ನಟ ಮಾತ್ರ ಅಲ್ಲ, ನಿರ್ದೇಶಕ, ಕಥೆಗಾರ, ಸಿನಿಮಾದಲ್ಲಿ ನಾಯಕನಾಗಿಯೂ, ವಿಲ್ಲನ್ ಆಗಿಯೂ ಮಿಂಚಿದ್ದಾರೆ, ಸದ್ಯ ಕಿರುತೆರೆಯಲ್ಲಿ ಪೋಷಕ ನಟನಾಗಿ ಗುರುತಿಸಿಕೊಂಡಿದ್ದಾರೆ.
ಸೆಪ್ಟೆಂಬರ್ 24 ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಮೋಹನ್ ಹುಟ್ಟಿದ್ದು ಬೆಳೆದದ್ದು ಎಲ್ಲವೂ ಬೆಂಗಳೂರಲ್ಲಿ. ಇವರ ತಂದೆ ಹಿಂದುಸ್ಥಾನ್ ಏರೋನಾಟಿಕ್ಸ್ ನಲ್ಲಿ ಕೆಲಸ ಮಾಡುತ್ತಿದ್ದರು. ಮೋಹನ್ ಮದುವೆಯಾಗಿದ್ದು, ವಿದ್ಯಾ ಎನ್ನುವವರನ್ನು, ಇವರು ಗಾಯಕಿಯಾಗಿದ್ದು, ಕಾಲೇಜಿನಲ್ಲಿ ಮೋಹನ್ ಅವರ ಜ್ಯೂನಿಯರ್ ಆಗಿದ್ದವರು ಇವರು. ಇವರಿಬ್ಬರಿಗೆ ಒಬ್ಬ ಮಗನೂ ಇದ್ದು ಆತನ ಹೆಸರು ಮಯೂಕ ಮೋಹನ್. ಇವರು ಕೆಲವೊಂದು ಸಿನಿಮಾಗಳಲ್ಲಿ ಬಾಲನಟನಾಗಿ ನಟಿಸಿದ್ದಾರೆ.
ಸೆಂಟ್ರಲ್ ಜೈಲ್ ಸಿನಿಮಾ ಮೂಲಕ ಕನ್ನಡ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಮೋಹನ್, ಯಾರಿಗೆ ಸಾಲುತ್ತೆ ಸಂಬಳ, ಕುರಿಗಳು ಸರ್ ಕುರಿಗಳು, ಎಲ್ಲರ ಮನೆ ದೋಸೆನೂ, ಕೋದಂಡ ರಾಮ, ಕೋತಿಗಳು ಸರ್ ಕೋತಿಗಳು, ಸತ್ಯವಾನ್ ಸಾವಿತ್ರಿ ಸೇರಿ ಹಲವು ಕಾಮಿಡಿ ಸಿನಿಮಾಗಳಲ್ಲಿ ನಟಿಸುವ ಮೂಲಕ ಸಿಕ್ಕಾಪಟ್ಟೆ ಮನರಂಜನೆ ನೀಡಿದ್ದಾರೆ.
ಅಷ್ಟೇ ಅಲ್ಲ ಇವರು ಯಾರಿಗೆ ಸಾಲುತ್ತೆ ಸಂಬಳ, ಛತ್ರಿಗಳು ಸರ್ ಛತ್ರಿಗಳು, ಹೆಂಡ್ತೀರಾ ದರ್ಭಾರ್, ಲವ ಕುಶ ಸಿನಿಮಾಗಳಿಗೆ ಕಥೆ ಬರೆದಿದ್ದು, ಕೃಷ್ಣ ನೀ ಲೇಟಾಗಿ ಬಾರೋ, ನರಸಿಂಹ, ಮಂಜುನಾಥ ಬಿಎ ಎಲ್ ಎಲ್ ಬಿ, ಸಚಿನ್! ತೆಂಡೂಲ್ಕರ್ ಅಲ್ಲ, ಮಳೆ ನಿಲ್ಲುವವರೆಗೆ, ಹಲೋ ಮಾಮ ಸಿನಿಮಾಗಳನ್ನು ನಿರ್ದೇಶನ (direction) ಕೂಡ ಮಾಡಿದ್ದಾರೆ.
ಕನ್ನಡ ಕಿರುತೆರೆಯಲ್ಲೂ ಗುರುತಿಸಿಕೊಂಡಿರುವ ಮೋಹನ್ ಕಥೆಗಾರ, ಸಿಲ್ಲಿ ಲಲ್ಲಿ, ನಾಗಿಣಿ 2 ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಸದ್ಯ ಸ್ಟಾರ್ ಸುವರ್ಣ ವಾಹಿನಿಯ ಗೌರಿ ಶಂಕರ ಧಾರವಾಹಿಯಲ್ಲಿ ಹಾಗೂ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯಲ್ಲಿ ನಾಯಕಿಯ ತಂದೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಮೋಹನ್ ಅವರು ಬಿಗ್ ಬಾಸ್ ಸೀಸನ್ 4 (bigg boss season 4) ರಲ್ಲೂ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಕನ್ನಡ ಚಿತ್ರರಂಗದಲ್ಲಿ ನಟನಾಗಿ, ನಿರ್ದೇಶಕನಾಗಿ ಹಾಗೂ ಕಥೆಗಾರರಾಗಿ ಗುರುತಿಸಿಕೊಂಡ ಮೋಹನ್, ಸದ್ಯ ಹಿರಿತೆರೆಯಿಂದ ಸ್ವಲ್ಪ್ ದೂರವೇ ಉಳಿದು ಕಿರುತೆರೆಯಲ್ಲೇ ಬ್ಯುಸಿಯಾಗಿದ್ದಾರೆ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಖಡಕ್ ತಂದೆ ವೀರೂ ಪಾತ್ರವನ್ನು ಜನರು ಮೆಚ್ಚಿಕೊಂಡಿದ್ದಾರೆ.