ನಿವೇದಿತಾ ಗೌಡ ಏನು ಮಾಡುತ್ತಿದ್ದಾರೆ? ಫ್ಲೋರಿಡಾದಿಂದ ಅಪ್‌ಡೇಟ್ ಕೊಟ್ಟ ಬಿಗ್ ಬಾಸ್ ಮಾಜಿ ಸ್ಪರ್ಧಿ

Published : Jan 26, 2026, 05:36 PM IST

ನಿವೇದಿತಾ ಗೌಡ ಏನು ಮಾಡುತ್ತಿದ್ದಾರೆ? ಫ್ಲೋರಿಡಾದಿಂದ ಅಪ್‌ಡೇಟ್ ಕೊಟ್ಟ ನಿವೇದಿತಾ ಗೌಡ, ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ ಇನ್‌ಸ್ಟಾಗ್ರಾಂ ಫಾಲೋವರ್ಸ್ ನಿವೇದಿತಾ ಗೌಡ ಸನಿಹಕ್ಕೆ ಬರುತ್ತಿದ್ದಂತೆ ಅಮೆರಿಕದ ಫ್ಲೋರಿಡಾದಿಂದ ನಿವೇದಿತಾ ಅಪ್‌ಡೇಟ್ ನೀಡಿದ್ದಾರೆ.

PREV
16
ಸಂದೇಶ ರವಾನಿಸಿದ ನಿವೇದಿತಾ ಗೌಡ

ಬಿಗ್ ಬಾಸ್ ಸೇರಿದಂತೆ ಟಿವಿ ಕಾರ್ಯಕ್ರಮಗಳ ಮೂಲಕ ಭಾರಿ ಜನಪ್ರಿಯತೆ ಪಡೆದ ನಿವೇದಿತಾ ಗೌಡ ಅಷ್ಟೇ ಬೇಗನೆ ವಿವಾದಕ್ಕೂ ಸಿಲುಕಿ ಕರ್ನಾಟಕದಿಂದಲೇ ದೂರ ಉಳಿದಿದ್ದಾರೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾಗಳಲ್ಲೂ ಅಷ್ಟಾಗಿ ಸಕ್ರಿಯವಾಗಿರದ ನಿವೇದಿತಾ ಗೌಡ ಡ್ಯಾನ್ಸ್ ಮೂಲಕ ಪ್ರತ್ಯಕ್ಷರಾಗಿದ್ದರು. ಇದೀಗ ಮಹತ್ವದ ಅಪ್‌ಡೇಟ್ ಮೂಲಕ ಮತ್ತೆ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದರೆ.

26
ಫ್ಲೋರಿಡಾದಿಂದ ನಿವೇದಿತಾ ಗೌಡ ಅಪ್‌ಡೇಟ್

ಬಿಗ್ ಬಾಸ್ 12ರ ವಿನ್ನರ್ ಗಿಲ್ಲಿ ನಟ ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ 2 ಮಿಲಿಯನ್ ಫಾಲೋವರ್ಸ್ ದಾಖಲೆ ಬರೆದಿದ್ದಾರೆ. ಈ ಮೂಲಕ ಕನ್ನಡ ಬಿಗ್ ಬಾಸ್ ಸ್ಪರ್ಧಿಗಳ ಪೈಕಿ ಅತೀ ಹೆಚ್ಚು ಇನ್‌ಸ್ಟಾ ಫಾಲೋವರ್ಸ್ ಪಟ್ಟಿಯಲ್ಲಿ ನಿವೇದಿತಾ ಗೌಡ ನಂತರದ ಸ್ಥಾನದಲ್ಲಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಅಭಿಮಾನಿಗಳು ನಿವೇದಿತಾ ಗೌಡ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂದು ಹುಡುಕಾಡಿದ್ದಾರೆ. ಈ ಹುಡುಕಾಟಕ್ಕೆ ಖುದ್ದು ನಿವೇದಿತಾ ಗೌಡ ಉತ್ತರ ನೀಡಿದ್ದಾರೆ.

36
ನಿವೇದಿತಾ ಸಂದೇಶವೇನು?

ನಿವೇದಿತಾ ಗೌಡ ಅಮೆರಿಕದ ಫ್ಲೋರಿಡಾದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ಕೆಲ ವಿಶೇಷ ಖಾದ್ಯಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ತಮ್ಮ ಲೋಕೇಶನ್ ಫ್ಲೋರಿಡಾದ ಟಂಪಾ ಎಂದು ಉಲ್ಲೇಖಿಸಿದ್ದಾರೆ.

46
ಸೈಲೆಂಟ್ ಉತ್ತರ

ಕಾರು ಪ್ರಯಾಣದ ವೇಳೆಯಲ್ಲಿನ ಫೋಟೋಗಳನ್ನು ಹಂಚಿಕೊಂಡಿರುವ ನಿವೇದಿತಾ ಸೈಲೆಂಟ್ ಆಗಿ ಸಂದೇಶ ರವಾನಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹೊರತುಪಡಿಸಿ ಇನ್ನೇನು ಹೇಳಿಕೊಂಡಿಲ್ಲ. ಆದರೆ ಕೆಲೆ ಫೋಟೋಗಳೇ ನಿವೇದಿತಾ ಎನು ಮಾಡುತ್ತಿದ್ದಾರೆ ಅನ್ನೋ ಪ್ರಶ್ನೆಗೆ ಉತ್ತರ ನೀಡಿದೆ.

56
ಯೂಟ್ಯೂಬ್ ಚಾನೆಲ್ ಡಿಲೀಟ್

ಇತ್ತೀಚೆಗೆ ನಿವೇದಿತಾ ಗೌಡ ತಮ್ಮ 4 ಲಕ್ಷ ಫಾಲೋವರ್ಸ್ ಇದ್ದ ಯೂಟ್ಯೂಬ್ ಚಾನೆಲ್ ಡಿಲೀಟ್ ಮಾಡಿದ್ದರು. ಭಾರವಾದ ಮನಸ್ಸಿನ ಕುರಿತು ಹೇಳಿಕೊಂಡಿದ್ದರು. ಯೂಟ್ಯೂಬ್ ವಿಡಿಯೋ ಮಾಡಲು ಸಮಯ ಸಿಗುತ್ತಿಲ್ಲ. ಸಿಕ್ಕ ಸಮಯದಲ್ಲಿ ವಿಡಿಯೋ ಮಾಡಿ ಪೋಸ್ಟ್ ಮಾಡುವ ಮನಸ್ಸು ಇರುವುದಿಲ್ಲ ಎಂದು ಹೇಳಿಕೊಂಡಿದ್ದರು.

66
ಹೊಸ ಚಾನೆಲ್ ಆರಂಭ

ಹಳೇ ಯೂಟ್ಯೂಬ್ ಚಾನೆಲ್ ಡಿಲೀಟ್ ಮಾಡಿದ ನಿವೇದಿತಾ ಗೌಡ, ಹೊಸ ಚಾನೆಲ್ ಆರಂಭಿಸಿದ್ದಾರೆ. ಈ ಚಾನೆಲ್ ತಾವೇ ನಿರ್ವಹಿಸುವುದಾಗಿ ಹೇಳಿಕೊಂಡಿದ್ದಾರೆ. ಹಲವರು, ಆಪ್ತರು ವಿಡಿಯೋ ಮಾಡಲು ಸೂಚಿಸಿದ್ದರು. ಹೊಸ ಚಾನೆಲ್‌ನಲ್ಲಿ ಅಡುಗೆ, ಫ್ಯಾಶನ್, ಮೇಕ್ಅಪ್ ಸೇರಿದಂತೆ ಕೆಲ ಆಸಕ್ತಿಕರ ವಿಚಾರಗಳನ್ನು ಹಂಚಿಕೊಳ್ಳುವುದಾಗಿ ಹೇಳಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories