ಕಾವೇರಿ ವೈಷ್ಣವ್ ಬಳಿ ಬಂದು, ನಿನಗೂ ಈಗ ಈ ಅಮ್ಮ ಬೇಡವಾಗಿ ಬಿಟ್ಲಾ, ಹೆಂಡ್ತಿ ಬಂದ ಮೇಲೆ ಅವಳ ಸೆರಗು ಹಿಡಿದು ಓಡಾಡ್ತಾ ಇದ್ಯಾ? ನಿನ್ನ ಹೆಂಡ್ತಿ ನನ್ನನ್ನ ಕೊಲೆಗಾರ್ತಿ ಅಂತಿದ್ದಾಳೆ ನಾನು ಕೊಲೆ ಮಾಡಿಲ್ಲ, ಹೇಳು ಎಂದು ವೈಷ್ಣವ್ ನನ್ನು ಪ್ರಶ್ನಿಸುತ್ತಾಳೆ ಕಾವೇರಿ. ಆವಾಗ ಲಕ್ಷ್ಮಿ ಸಿಟ್ಟಿನಿಂದ ಹೌದು ನೀವೇ ಕೊಲೆಗಾರ್ತಿ, ನನ್ನನ್ನು ಮತ್ತು ಕೀರ್ತಿಯನ್ನು ಕೊಲ್ಲೋದಿಕ್ಕೆ ಪ್ರಯತ್ನಿಸಿದ್ದು ನೀವೇ ಎನ್ನುತ್ತಾಳೆ. ಲಕ್ಷ್ಮಿ ಹೀಗೆ ಹೇಳ್ತಿರೋವಾಗ್ಲೇ ಕಾವೇರಿ ಇದಕ್ಕೆ ಏನ್ ಸಾಕ್ಷಿ ಅಂತ ಕೇಳ್ತಾಳೆ. ಅದಕ್ಕೆ ಲಕ್ಷ್ಮಿ ಮನಸಾಕ್ಷಿಗೆ ಹೆದರೋರು ಮನುಷ್ಯರ ಸಾಕ್ಷಿಯನ್ನು ಕೇಳುವುದಿಲ್ಲ ಎನ್ನುತ್ತಾ ಖಡಕ್ ಉತ್ತರ ನೀಡುತ್ತಾಳೆ.