ರಸಪ್ರಶ್ನೆ ಆಧಾರಿತ ರಿಯಾಲಿಟಿ ಶೋ ಕೌನ್ ಬನೇಗಾ ಕರೋಡ್‌ಪತಿ - 15ನ ಪ್ರೀಮಿಯರ್ ಸಂಚಿಕೆ ಆಗಸ್ಟ್ 14 ರಂದು ಮೊದಲ ಬಾರಿಗೆ ಪ್ರದರ್ಶನಗೊಂಡಿದೆ. ಅದರ ತಿಳಿವಳಿಕೆ ಮತ್ತು ಉತ್ತೇಜಕ ಸಂಚಿಕೆಗಳೊಂದಿಗೆ ಅಭಿಮಾನಿಗಳಿಗೆ ಗರಿಷ್ಠ ಮನರಂಜನೆಯನ್ನು ಸಹ ಈ ಕಾರ್ಯಕ್ರಮ ಒದಗಿಸುತ್ತಿದೆ. ಈ ನಡುವೆ, ಮುಂಬರುವ ಸಂಚಿಕೆಯ ಪ್ರೋಮೋ ಹೊರಬಂದಿದ್ದು, ನೆಟ್ಟಿಗರು ಪೂರ್ಣ ಸಂಚಿಕೆಯನ್ನು ವೀಕ್ಷಿಸಲು ಕುತೂಹಲದಿಂದ ಕಾಯ್ತಿದ್ದಾರೆ.