ಕನ್ನಡ ಕಿರುತೆಯಲ್ಲಿ ಸೀರಿಯಲ್ ಗಳು ವೀಕ್ಷಕರ ಹಾದಿ ತಪ್ಪಿಸುತ್ತಿದೆಯಾ? ಎಲ್ಲಾ ಸೀರಿಯಲ್‌ಗಳಲ್ಲಿ ಒಂದೇ ರೀತಿಯ ಕಥೆ ಹೆಣೆದು ಜನರನ್ನು ಮರಳು ಮಾಡಲಾಗುತ್ತಿದೆಯಾ? ಹೌದು ಎನ್ನುತ್ತಿದ್ದಾರೆ ಪ್ರೇಕ್ಷಕರು.
ಸೀರಿಯಲ್ ಗಳಲ್ಲಿ ಪಾತ್ರಗಳಲ್ಲಿ ಹೆಸರು ಮಾತ್ರ ಬದಲಾವಣೆ ಮಾಡಿ ಒಂಂದೇ ತರಹದ ಕಥೆ ಹೆಣೆಯಲಾಗುತ್ತಿದೆ ಎಂದು ಪ್ರೇಕ್ಷಕರು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಬಹುತೇಕ ಕಥೆಗಳಲ್ಲಿ ಅತ್ತೆ, ಅತ್ತಿಗೆ, ಚಿಕ್ಕಮ್ಮ, ಮಲತಾಯಿ, ದೊಡ್ಡಮ್ಮ, ಓರಗಿತ್ತಿಯರೇ ವಿಲನ್‌ಗಳಾಗಿದ್ದಾರೆ. ಈ ಎಲ್ಲಾ ಪಾತ್ರಧಾರಿಗಳು ನಾಯಕನ ಮುಂದೆ ಒಳ್ಳೆಯವರು. ನಾಯಕಿಯರ ವಿರುದ್ಧ ವಿಲನ್‌ಗಳಾಗಿರುತ್ತಾರೆ.
ಮನೆ ಮಂದಿಯ ಮುಂದೆ ಹಿರಿಯರ ಮುಂದೆ ತೀರಾ ಒಳ್ಳೆಯವರಂತೆ ನಟಿಸುವ ಖಳನಾಯಕಿಯರು ನಾಯಕಿಯರ ಮುಂದೆ ಮಾತ್ರ ತಮ್ಮ ಇನ್ನೊಂದು ಮುಖ ಅನಾವರಣ ಮಾಡುತ್ತಾರೆ. ಕಥೆ ಸಾಗಿದಂತೆ ಇದೆಲ್ಲವೂ ಆಸ್ತಿ, ಚಿನ್ನಕ್ಕಾಗಿಯೇ ಆಗಿರುತ್ತದೆ.
ನಾಯಕಿ ಮತ್ತು ವಿಲನ್ ನಡುವೆಯೇ ಪೈಪೋಟಿ ನಡೆಯುವ ಆಸ್ತಿ ಚಿನ್ನ ಕಸಿದುಕೊಳ್ಳಲು ವಿಲನ್ ನಾಯಕನನ್ನು ಕೊಲೆ ಮಾಡಲು ಯತ್ನಿಸುವ ಪಾತ್ರ. ನಾಯಕಿಯು ಕೊಲೆಯನ್ನು ತಪ್ಪಿಸುವ ಪಾತ್ರವಿರುತ್ತದೆ.
ಇನ್ನು ಕೆಲವು ಸೀರಿಯಲ್ ಗಳಲ್ಲಿ ನಾಯಕನಿಗೆ ಇಬ್ಬರು ಹೆಂಡತಿಯರು ಒಬ್ಬಾಕೆ ವಿಲನ್. ಖಳನಾಯಕಿಯ ಗಂಡನಿಗೆ ಎರಡು ಮದುವೆ ಆಕೆಯ ಸವತಿ ಸಾಧು ಪಾತ್ರಧಾರಿಯಾಗಿ ಮನೆಗೆ ಬರುವ ಸೊಸೆಗೆ ಆಪ್ತ ಅತ್ತೆಯಾಗಿರುತ್ತಾಳೆ.
ಅಮೃತಧಾರೆಯಲ್ಲಿ ಚಿಕ್ಕಮ್ಮ, ಸೀತಾರಾಮ ದಲ್ಲಿ ಚಿಕ್ಕಿ, ಶ್ರೀರಸ್ತು ಶುಭಮಸ್ತು ಸೀರಿಯಲ್ ನಲ್ಲಿ ಚಿಕ್ಕಮ್ಮ, ಪುಟ್ಟಕ್ಕನ ಮಕ್ಕಳಲ್ಲಿ ಚಿಕ್ಕಮ್ಮ, ಶ್ರಾವಣಿ ಸುಬ್ರಹ್ಮಣ್ಯ ದಲ್ಲಿ ಅತ್ತೆ, ಅವನು ಮತ್ತು ಶ್ರಾವಣಿಯಲ್ಲಿ ದೊಡ್ಡಮ್ಮ, ಸತ್ಯದಲ್ಲಿ ನಾಯಕನ ಅಕ್ಕ, ಅಂತರಪಟದಲ್ಲಿ ನಾಯಕನ ಅಕ್ಕ, ರಾಮಾಚಾರಿಯಲ್ಲಿ ಚಾರುವಿನ ತಾಯಿ, ಕೆಂಡಸಂಪಿಗೆಯಲ್ಲಿ ನಾಯಕನ ಅತ್ತಿಗೆ. ಹೀಗೆ ಬಹುತೇಕ ಎಲ್ಲಾ ಸೀರಿಯಲ್ ಗಳಲ್ಲಿ ಮಹಿಳೆಯನ್ನೇ ವಿಲನ್ ಎಂದು ಬಿಂಬಿಸಲಾಗುತ್ತದೆ.
ಇನ್ನು ಕೆಲವು ಸೀರಿಯಲ್‌ಗಳಲ್ಲಿ ನಾಯಕಿಯನ್ನು ಚುರುಕುತನದಂತೆ ಬಿಂಬಿಸಿ ಕೆಲವೊಂದು ಬಾರಿ ಪೆದ್ದಿಯಂತೆ ತೋರಿಸುತ್ತಾರೆ. ಈ ರೀತಿಯ ಅಸಮಂಜಸ ದೃಶ್ಯಕ್ಕೆ ಪದೇ ಪದೇ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿರುತ್ತಾರೆ. ವಿಲನ್ ಗಳು ಕೊಲೆ ಮಾಡಿದ್ರು ಶಿಕ್ಷೆ ಆಗುವುದೇ ಇಲ್ಲ.
ಭಾಗ್ಯ ಲಕ್ಷ್ಮಿ ಸೀರಿಯಲ್ ನಲ್ಲಿ ಮಗಳ ಜೊತೆ ಒಂದು ಪ್ರತಿಷ್ಠಿತ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಓದಿ 10 ತರಗತಿಯನ್ನು ಪ್ರಥಮ ದರ್ಜೆಯಲ್ಲಿ ಪಾಸ್ ಮಾಡುವ ಸೀರಿಯಲ್ ನಾಯಕಿಗೆ ಕೆಲಸಕ್ಕೆಂದು ಇಂಟರ್ವ್ಯೂ ಕೊಡುವಾಗ ಇಂಗ್ಲಿಷ್ ಬರೋದೆ ಇಲ್ಲ. ಇದೆನ್ನೆಲ್ಲ ವೀಕ್ಷಕರು ಗಮನಕ್ಕೆ ತೆಗೆದುಕೊಂಡು ಸರಿಯಾಗಿಯೇ ಸೀರಿಯಲ್ ತಂಡಕ್ಕೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.
ಒಟ್ನಲ್ಲಿ ಎಲ್ಲಾ ತರಹದ ಸೀರಿಯಲ್ ನಲ್ಲೂ ಬಹುತೇಕ ಕಥೆ ಒಂದೇ ಆದರೆ ಪಾತ್ರಗಳು ಸನ್ನಿವೇಶಗಳು ಮಾತ್ರ ಬೇರೆ ಬೇರೆ ಅಷ್ಟೇ ಎಂಬುದು ಪ್ರೇಕ್ಷಕರಿಗಂತು ಈಗ ಅರಿವಾಗಿದೆ. ಆದರೆ ಒಳ್ಳೆಯ ಸದಬರುಚಿಯ ಸೀರಿಯಲ್ ಬಂತೆಂದರೆ ಟಿಆರ್‌ಪಿ ಇಳಿಮುಖವಾಗುತ್ತದೆ. ಯಾವ ಸೀರಿಯಲ್ ಅನ್ನು ಹೆಚ್ಚು ಟ್ರೋಲ್ ಮಾಡಲಾಗುತ್ತದೋ ಅದೇ ಸೀರಿಯಲ್ ಟಾಪ್ ಟಿಆರ್‌ಪಿ ಪಡೆದುಕೊಂಡಿರುತ್ತದೆ.