Karna Serial ಟ್ವಿಸ್ಟ್​: ಕತ್ತಲಲ್ಲಿದ್ದ ಭುವನೇಶ್ವರಿ ಬೆಳಕಿಗೆ ಬಂದಳು- ತನ್ನದೇ ಆಸ್ಪತ್ರೆಯಲ್ಲಿ ಕೆಲಸದವನಾದ ಕರ್ಣ

Published : Jul 23, 2026, 06:17 PM IST

ಕರ್ಣ ಸೀರಿಯಲ್​ನಲ್ಲಿ, ಭುವನೇಶ್ವರಿ ಕುತಂತ್ರದಿಂದ ಕರ್ಣನ ಆಸ್ಪತ್ರೆಯನ್ನು ತನ್ನದಾಗಿಸಿಕೊಂಡಿದ್ದಾಳೆ. ತನ್ನ ತಾಯಿಯೆಂದೇ ಅರಿಯದ ಕರ್ಣ, ಸೇಡು ತೀರಿಸಿಕೊಳ್ಳಲು ಮತ್ತು ಆಸ್ಪತ್ರೆಯನ್ನು ಮರಳಿ ಪಡೆಯಲು ಅದೇ ಆಸ್ಪತ್ರೆಗೆ ವೈದ್ಯನಾಗಿ ಸೇರಿಕೊಂಡಿದ್ದಾನೆ.

PREV
15
ವೈರಿಯಾದ ಅಮ್ಮ- ಮಗ

ಕರ್ಣ ಸೀರಿಯಲ್​ನಲ್ಲಿ ಅಮ್ಮ ಮತ್ತು ಮಗ ಈಗ ವೈರಿಗಳಾಗಿದ್ದಾರೆ. ತನ್ನ ಕರುಳ ಬಳ್ಳಿ ಕರ್ಣನೇ ಎಂದು ಅರಿಯದ ಭುವನೇಶ್ವರಿ ಅವನ ವಿರುದ್ಧ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದರೆ, ಅತ್ತ ಭುವನೇಶ್ವರಿಯೇ ತನ್ನ ಅಮ್ಮ ಎನ್ನುವುದು ಕರ್ಣನಿಗೆ ತಿಳಿದಿಲ್ಲ.

25
ಭುವನೇಶ್ವರಿ ಹೆಸರಿಗೆ ಆಸ್ಪತ್ರೆ

ಕುತಂತ್ರದಿಂದ ಭುವನೇಶ್ವರಿ ಕರ್ಣನ ಆಸ್ಪತ್ರೆಯನ್ನು ತನ್ನ ಹೆಸರಿಗೆ ಮಾಡಿಕೊಂಡಿದ್ದಾಳೆ. ಅದೇ ಇನ್ನೊಂದೆಡೆ, ಕರ್ಣನ ಇಡೀ ಫ್ಯಾಮಿಲಿಯನ್ನು ಮುಗಿಸುವುದಾಗಿ ಕರ್ಣನಿಗೆ ಚಾಲೆಂಜ್​ ಹಾಕಿದ್ದರೆ, ಅದಕ್ಕೆ ಪ್ರತಿ ಸವಾಲು ಎಸೆದಿದ್ದಾನೆ ಕರ್ಣ.

35
ತಾಯಿ-ಮಗ ಸೇಡು

ಇದೀಗ ಭುವನೇಶ್ವರಿ ವಿರುದ್ಧ ಸೇಡು ತೀರಿಸಿಕೊಳ್ಳಲು ಕರ್ಣ ಮತ್ತು ನಿಧಿ ತಮ್ಮದೇ ಆಸ್ಪತ್ರೆಗೆ ಡ್ಯೂಟಿ ಡಾಕ್ಟರ್​ ಆಗಿ ಬಂದಿದ್ದಾರೆ. ತೋಳ ಬಂದು ಹಳ್ಳಕ್ಕೆ ಬಿತ್ತು ಎಂದಿರುವ ಭುವನೇಶ್ವರಿ ಅವರನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದಾಳೆ.

45
ಪ್ಲ್ಯಾನ್​ ಮಾಡಿದ ಕರ್ಣ

ಅತ್ತ ಕರ್ಣ ಎಲ್ಲಾ ರೀತಿಯ ಪ್ಲ್ಯಾನ್​ ಮಾಡಿಯೇ ಅದೇ ಆಸ್ಪತ್ರೆಗೆ ಬಂದಿದ್ದಾನೆ. ಆಸ್ಪತ್ರೆಯನ್ನು ಉಳಿಸಿಕೊಂಡು ತಾತನಿಗೆ ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳುವುದು ಒಂದೆಡೆಯಾದರೆ, ಭುವನೇಶ್ವರಿಯನ್ನು ಸೋಲಿಸುವುದು ಆತನ ಇನ್ನೊಂದು ಗುರಿ.

55
ಕಾದು ನೋಡುವ ತಂತ್ರ

ಸದ್ಯ ಸೀರಿಯಲ್​ನಲ್ಲಿ ರೋಚಕತೆ ಬಂದಿದೆ. ತಾಯಿ ಮತ್ತು ಮಗ ಒಂದಾಗಬೇಕಿದೆ. ಅದಕ್ಕೆ ಇನ್ನೂ ಕೆಲವು ವರ್ಷಗಳೇ ಬೇಕಾಗಬಹುದು. ಅಲ್ಲಿಯವರೆಗೂ ಅಮ್ಮ-ಮಗನ ಫೈಟಿಂಗ್ ಯಾವ ಹಂತ ತಲುಪುತ್ತದೆಯೋ ಕಾದು ನೋಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories