ನಟನೆಗೆ ಮಾತ್ರವಲ್ಲ, ಡಾನ್ಸ್​ನಲ್ಲೂ ಮುಂದು Amruthadhaare ಭೂಮಿಕಾ: ಮೋರಿನಿಯಾಗಿ ಮನಗೆದ್ದ ಛಾಯಾ ಸಿಂಗ್​

Published : Jun 21, 2026, 06:56 PM IST

'ಅಮೃತಧಾರೆ' ಖ್ಯಾತಿಯ ನಟಿ ಛಾಯಾ ಸಿಂಗ್ ಅವರು ತಮ್ಮ ನಟನೆಗೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇತ್ತೀಚೆಗೆ 'ಮೋರಿನಿ' ಹಾಡಿಗೆ ನೃತ್ಯ ಮಾಡಿ ರೀಲ್ಸ್ ಹಂಚಿಕೊಂಡಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ಗಳಿಸಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ 'ಮುನ್ನಡಿ' ಚಿತ್ರದ ಮೂಲಕ ಪದಾರ್ಪಣೆ ಮಾಡಿದ್ದಾರೆ.

PREV
16
ನಟನೆಗೆ ಮನಸೋಲದವರಿಲ್ಲ

ಅಮೃತಧಾರೆ (Amruthadhaare) ಭೂಮಿಕಾ ಅರ್ಥಾತ್​ ನಟಿ ಛಾಯಾ ಸಿಂಗ್​ ಅವರ ನಟನೆಗೆ ಮನ ಸೋಲದವರೇ ಇಲ್ಲವೇನೋ. ಇದೇ ಕಾರಣಕ್ಕೆ ಇವರು ಇತ್ತ ಅಮೃತಧಾರೆಯಲ್ಲಿಯೂ ಬೆಸ್ಟ್​ ನಟಿ ಅವಾರ್ಡ್​ ಪಡೆದುಕೊಂಡಿದ್ದರೆ, ಕನ್ನಡದ ಲಕ್ಷ್ಮೀ ನಿವಾಸ ರೀಮೇಕ್​ ಆಗಿರೋ ತಮಿಳಿನ ಗಟ್ಟಿಮೇಳಂ ಸೀರಿಯಲ್​ನಲ್ಲಿಯೂ ಬೆಸ್ಟ್​ ನಟಿ ಅವಾರ್ಡ್​ ಪಡೆದುಕೊಂಡಿದ್ದಾರೆ.

26
ಮೋರಿನಿ ಎಂದು ಡಾನ್ಸ್​ ಮಾಡಿದ ನಟಿ

ಸನ್ನಿವೇಶ ಏನೇ ಇರಲಿ, ಅದಕ್ಕೆ ತಕ್ಕಂತೆ ನಟನೆ ಮಾಡುವಲ್ಲಿ ನಟಿಯದ್ದು ಎತ್ತಿದ ಕೈ. ಇಂತಿಪ್ಪ ನಟಿ ಇದಾಗಲೇ ತಮ್ಮ ಸೋಷಿಯಲ್​​ ಮೀಡಿಯಾದಲ್ಲಿ ಸಾಕಷ್ಟು ರೀಲ್ಸ್​ಗಳನ್ನು ಶೇರ್​ ಮಾಡುತ್ತಾರೆ. ಆದರೆ, ಡಾನ್ಸ್​ ಮಾಡಿದ್ದು ಕಡಿಮೆನೇ ಅವರು. ತಮಗೆ ನೃತ್ಯದಲ್ಲಿ ಆಸಕ್ತಿ ಇದ್ದರೂ ಕ್ಯಾಮೆರಾ ಎದುರು ನರ್ತಿಸಲು ಮುಜುಗರ ಎಂದು ಶೀರ್ಷಿಕೆ ಕೊಡುತ್ತಲೇ ಈಗ ಮೋರಿನಿ ಹಾಡಿಗೆ ನರ್ತಿಸಿದ್ದಾರೆ.

36
ಅಭಿಮಾನಿಗಳು ಫಿದಾ

ಇದನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದು, ನೀವು ನಟನೆ ಮಾತ್ರವಲ್ಲ, ಡಾನ್ಸ್​ನಲ್ಲಿಯೂ ಸೂಪರ್​ ಎನ್ನುತ್ತಿದ್ದಾರೆ. ಛಾಯಾ ಅವರ ಡಾನ್ಸ್​ಗೆ ಹಾರ್ಟ್​ ಎಮೋಜಿಗಳ ಸುರಿಮಳೆಯೇ ಆಗಿದೆ.

46
25 ವರ್ಷಗಳ ಹಿಂದೆನೇ ಸಿನಿಮಾ

ಅಂದಹಾಗೆ, ನಟಿ ಛಾಯಾ ಅವರು ತಮ್ಮನ್ನು ನಟಿ ಮಾಡಿ ಎಂದು ಕೇಳಿಕೊಂಡಿಲ್ಲ. ಏಕೆಂದರೆ, ಇದಾಗಲೇ ಅವರು ಸ್ಯಾಂಡಲ್​ವುಡ್​ ಸೇರಿದಂತೆ ವಿವಿಧ ಭಾಷೆಗಳಲ್ಲಿ ಚಿರಪರಿಚಿತರು. 2000ನೇ ಇಸವಿಯಲ್ಲಿ ತೆರೆಕಂಡ ಪಿ ಶೇಷಾದ್ರಿ ನಿರ್ದೇಶನದ `ಮುನ್ನಡಿ' ಚಿತ್ರದಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು.

56
ರಾಷ್ಟ್ರ ಪ್ರಶಸ್ತಿ

ಇವರು ನಟಿಸಿದ ಮೊದಲ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು. ಬಳಿಕ ರಾಷ್ಟ್ರಗೀತೆ, ಚಿಟ್ಟೆ, ಗುಟ್ಟು ಸಿನಿಮಾಗಳಲ್ಲಿ ನಟಿಸಿದರು. ನಂತರ ಅನಿರುದ್ಧ್ ನಟನೆಯ 'ತುಂಟಾಟ' ಸಿನಿಮಾದಲ್ಲಿ ಅಭಿನಯಿಸಿದರು. ಈ ಸಿನಿಮಾ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು.

66
ಕಾಲಿವುಡ್​ನಲ್ಲೂ ನಟನೆ

ತುಂಟಾಟ ಸಿನಿಮಾ ಬಳಿಕ ಕಾಲಿವುಡ್‌ಗೆ ಎಂಟ್ರಿಕೊಟ್ಟ ಛಾಯಾ, ಧನುಷ್ ಜೊತೆ 'ತಿರುಡಾ ತಿರುಡಿ' ಚಿತ್ರದಲ್ಲಿ ನಟಿಸಿದರು. ಈ ಸಿನಿಮಾ ಅವರಿಗೆ ದೊಡ್ಡ ಯಶಸ್ಸು ತಂದುಕೊಟ್ಟಿತು. ನಂತರ ಮಲಯಾಳಂ ಸಿನಿರಂಗಕ್ಕೂ ಕಾಲಿಟ್ಟರು. ಹೀಗೆ ನಟನೆಯಲ್ಲಿ ಮುಂದುವರೆದ ಛಾಯಾ ಸಿಂಗ್, ಬಂಗಾಳಿ, ಬೋಜಪುರಿ, ತೆಲುಗು ಮತ್ತು ಓರಿಯಾ ಚಿತ್ರಗಳಲ್ಲೂ ನಟಿಸಿದ್ದಾರೆ. ಜೊತೆಗೆ ಬಂಗಾಳಿ ಭಾಷೆಯಲ್ಲಿ 'ಕಿ ಕೋರ್ ಬೋಝಭೋ ತೊಮಾಕೆ' ಎಂಬ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಛಾಯಾ ಕೇವಲ ನಟಿಯಷ್ಟೇ ಅಲ್ಲ, ಅದ್ಭುತ ಡ್ಯಾನ್ಸರ್ ಕೂಡ ಆಗಿದ್ದಾರೆ. ಅವರ ನೃತ್ಯಗಳು ಸಿಕ್ಕಾಪಟ್ಟೆ ಫೇಮಸ್ ಆಗಿವೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories