ಕಾಮಿಡಿಯನ್‌ ಕಪಿಲ್‌ ಶರ್ಮಾ ಹಾಗೂ ಗಿನ್ನಿ ಚಾತ್ರತ್‌ ಇಂಟರೆಸ್ಟಿಂಗ್‌ ಲವ್‌ ಸ್ಟೋರಿ!

First Published | Apr 3, 2021, 6:56 PM IST

ಟಿವಿಯ ಕಾಮಿಡಿ ಕಿಂಗ್‌ ಕಪಿಲ್ ಶರ್ಮಾರಿಗೆ 40 ವರ್ಷದ ಸಂಭ್ರಮ. 2 ಏಪ್ರಿಲ್ 1981ರಂದು ಅಮೃತಸರದಲ್ಲಿ (ಪಂಜಾಬ್) ಜನಿಸಿದ ಕಪಿಲ್ ಇಂದು ಸಖತ್‌ ಫೇಮಸ್‌ ಸೆಲೆಬ್ರೆಟಿಯಾಗಿದ್ದಾರೆ. ಆದರೆ ಈ ಮಟ್ಟ ತಲುಪುವುದು ಅವರಿಗೆ ಅಷ್ಟು ಸುಲಭವಾಗಿರಲಿಲ್ಲ. ಕಪಿಲ್ ಗಿನ್ನಿಯನ್ನು ಪ್ರೀತಿಸಿದಾಗ, ಗಿನ್ನಿ ತಂದೆ ಈ ಸಂಬಂಧವನ್ನು ನಿರಾಕರಿಸಿದ್ದರು. ಇದರ ನಂತರ, ಕಪಿಲ್‌ ಕೂಡ ಗಿನ್ನಿಯೊಂದಿಗಿನ ಸಂಬಂಧವನ್ನು ಮುರಿದು ಬಿಟ್ಟಿದ್ದರು. ಆದರೆ ಈ ದಂಪತಿ ಪ್ರಸ್ತುತ 2 ಮಕ್ಕಳ ಪೋಷಕರಾಗಿ ಸಂತೋಷದ ಜೀವನ ನೆಡೆಸುತ್ತಿದ್ದಾರೆ. ಇಲ್ಲಿದೆ ಕಪಿಲ್‌ ಶರ್ಮರ ಲವ್‌ ಸ್ಟೋರಿ ಡಿಟೈಲ್ಸ್. 

ಕೆಲವು ವರ್ಷಗಳ ಹಿಂದೆ, ಕಪಿಲ್ ಮತ್ತು ಗಿನ್ನಿ ಸಂದರ್ಶನವೊಂದರಲ್ಲಿ ತಮ್ಮ ಲವ್‌ ಸ್ಟೋರಿಯನ್ನುಬಹಿರಂಗಪಡಿಸಿದರು.
ಕಪಿಲ್‌ ಜಲಂಧರ್‌ನ ಎಚ್‌ಎಂವಿ ಕಾಲೇಜಿನಿಂದ ಓದಿದ್ದಾಗ ವಿದ್ಯಾರ್ಥಿ ವೇತನ ಪಡೆಯುತ್ತಿದ್ದರು ಮತ್ತು ರಂಗ ಭೂಮಿಯಲ್ಲಿ ನ್ಯಾಷನಲ್‌ ಲೆವೆಲ್‌ ವಿನ್ನರ್‌ ಆಗಿದ್ದರು. 2005ರಲ್ಲಿ, ಐಪಿಜೆ ಕಾಲೇಜಿನಲ್ಲಿ ಓದುತ್ತಿದ್ದಾಗ, ಪಾಕೆಟ್ ಮನಿಗಾಗಿ ನಾಟಕವನ್ನು ನಿರ್ದೇಶಿಸುತ್ತಿದ್ದ ಅವರುವಿದ್ಯಾರ್ಥಿಗಳಿಗೆ ಆಡಿಷನ್ ಮಾಡಲು ಗಿನಿಯ ಕಾಲೇಜಿಗೆ ಹೋಗಿದ್ದರು. ಆ ಸಮಯದಲ್ಲಿ ಆಡಿಷನ್‌ಗೆ ಬಂದಿದ್ದ ಗಿನ್ನಿಯನ್ನು ಮೊದಲ ಬಾರಿಗೆ ಭೇಟಿಯಾದ ಬಗ್ಗೆ ಹೇಳಿದರು ಕಪಿಲ್‌ ಶರ್ಮಾ.
Tap to resize

'ಹುಡುಗಿಯರ ಆಡಿಷನ್ ತೆಗೆದು ಕೊಳ್ಳುವಾಗ ನಾನು ಗಿನ್ನಿಯಿಂದ ತುಂಬಾ ಪ್ರಭಾವಿತನಾಗಿದ್ದೆ. ನಾವು ರಿಹರ್ಸಲ್‌ ಪ್ರಾರಂಭಿಸಿದಾಗ, ಅವಳು ನನಗೆ ಊಟ ತರಲು ಪ್ರಾರಂಭಿಸಿದಳು. ನನಗೆ ಗೌರವ ನೀಡಲು ಅವಳು ಇವೆಲ್ಲವನ್ನೂ ಮಾಡುತ್ತಿದ್ದಾಳೆ, ಎಂದು ನಾನು ಭಾವಿಸಿದೆ,' ಎನ್ನುತ್ತಾರೆ ಕಪಿಲ್.‌
'ಗಿನ್ನಿ ನನ್ನನ್ನು ಇಷ್ಟಪಡುತ್ತಿರವ ವಿಷಯ ಫ್ರೆಂಡ್‌ ಹೇಳಿದಾಗ ನಂಬಲಿಲ್ಲ. ಆದರೆ ಗಿನ್ನಿಗೆ ಈ ವಿಷಯ ಕೇಳಿದಾಗ ಹೌದು ಎಂದು ಉತ್ತರಿಸಿದಳು. ಆ ಸಮಯದಲ್ಲಿ ಗಿನ್ನಿಗೆ 19 ಮತ್ತು ನನಗೆ 24 ವರ್ಷ,' ಎಂದು ಕಪಿಲ್‌ ತಮ್ಮ ಲವ್‌ ಸ್ಟೋರಿಬಗ್ಗೆ ಹೇಳಿದರು.
ಕಪಿಲ್‌ನ‌ನ್ನು ನೋಡಿದ ಮೇಲೆ, ನಾನು ಅವನನ್ನು ಇಷ್ಟ ಪಡಲು ಪ್ರಾರಂಭಿಸಿದೆ. ಈ ಕಾರಣಕ್ಕಾಗಿ ನಾನು ಅವರಿಗೆ ಊಟ ತರುತ್ತಿದ್ದೆ.
'ಗಿನ್ನಿ ನನ್ನಿಂದ ತುಂಬಾ ಇಂಪ್ರೆಸ್‌ ಆಗಿದ್ದಳು. ಏಕೆಂದರೆ ನಾನು ಚಿಕ್ಕ ವಯಸ್ಸಿನಲ್ಲಿಯೇ ಕೆಲಸ ಮಾಡುತ್ತಿರುವುದನ್ನು ಅವಳು ನೋಡಿದ್ದಳು. ಮತ್ತು ನಮ್ಮ ನಡುವೆ ನಮಗೆ ಉತ್ತಮವಾದ ಟ್ಯೂನಿಂಗ್ ಇತ್ತು. ನಂತರ ನಾನು ಲಾಫ್ಟರ್ ಚಾಲೆಂಜ್ಆಡಿಷನ್ ನೀಡಲು ಮುಂಬೈಗೆ ಬಂದೆ. ಅದರಲ್ಲಿ ರಿಜೆಕ್ಟ್‌ ಆದಾಗ,ಇನ್ನು ಮುಂದೆ ಕಾಲ್‌ ಮಾಡಬೇಡ ಎಂದು ಗಿನ್ನಿಗೆ ಫೋನ್‌ ಮಾಡಿ ಹೇಳಿದೆ,' ಎಂದು ಗಿನ್ನಿ ಜೊತೆ ಬ್ರೇಕಪ್‌ ಮಾಡಿಕೊಂಡ ಬಗ್ಗೆ ಹೇಳಿಕೊಂಡಿದ್ದರು ಕಪಿಲ್‌ ಶರ್ಮ.
'ಅವಳು ನನಗಿಂತ ಆರ್ಥಿಕವಾಗಿ ಬಲಶಾಲಿಯಾಗಿದ್ದಳು ಮತ್ತು ನಮ್ಮ ಜಾತಿ ಕೂಡ ಬೇರೆಯಾಗಿತ್ತು. ಆದ್ದರಿಂದ ಈ ಸ್ನೇಹಕ್ಕೆ ಭವಿಷ್ಯವಿಲ್ಲದ ಕಾರಣ ನಾನು ಸಂಬಂಧ ಕಡಿದು ಕೊಂಡೆ. ಇದರ ನಂತರ ಮತ್ತೊಮ್ಮೆ ಲಾಫ್ಟರ್ ಚಾಲೆಂಜ್‌ಗೆ ಆಡಿಷನ್ ನೀಡಿ ಆಯ್ಕೆಯಾಗಿದ್ದೆ. ಆಗ ಗಿನ್ನಿ ನನಗೆ ಕಾಲ್‌ ಮಾಡಿ ಅಭಿನಂದಿಸಿದಳು'.
'ನಾನು ಸಂಪಾದಿಸಲು ಪ್ರಾರಂಭಿಸಿದಾಗ, ನನ್ನ ತಾಯಿ ಮದುವೆಯ ಪ್ರಸ್ತಾಪದೊಂದಿಗೆ ಗಿನ್ನಿಯ ತಂದೆಯ ಬಳಿಗೆ ಹೋದಾಗ ಅವರು ನೋ ಎಂದಿದ್ದರು.ಬಹುಶಃ ನಾನು ಆ ಸಮಯದಲ್ಲಿ ಇನ್ನೂ ಕಷ್ಟಪಡುತ್ತಿದ್ದೆ, ಆದ್ದರಿಂದ ಅವರು ತಮ್ಮ ಮಗಳು ನನ್ನನ್ನು ಮದುವೆಯಾಗುವುದನ್ನು ಇಷ್ಟ ಪಡಲಿಲ್ಲ ಎನಿಸುತ್ತೆ.ಇದರ ನಂತರವೂ ನಾನು ನನ್ನ ಕೆಲಸದಲ್ಲಿ ಮತ್ತು ಎಂಬಿಎ ಅಧ್ಯಯನದಲ್ಲಿ ಬ್ಯುಸಿಯಾದೆ' - ಕಪಿಲ್‌ಶರ್ಮ.
ನಂತರ ನಾನು ಮುಂಬೈನಲ್ಲಿಯೇ ವಾಸಿಸಲು ಆರಂಭಿಸಿದೆ. ನನ್ನ ಜೀವನವೂ ಬದಲಾಯಿತು. ಇಷ್ಟೇಲ್ಲಾ ನಡೆದರೂ ಎಂದಿಗೂ ಅವಳು ಡಿಸ್ಟರ್ಬ್‌ ಮಾಡಲಿಲ್ಲ.ಇಷ್ಟು ಧೈರ್ಯವನ್ನುನಾನು ಯಾರಲ್ಲೂ ನೋಡಿಲ್ಲ, ಎನ್ನುತ್ತಾರೆ ಕಪಿಲ್.
ಜೀವನದಲ್ಲಿ ಕಷ್ಟಗಳಿದ್ದ ಸಮಯದಲ್ಲಿಯೇ ಮದುವೆಯಾಗಲು ಇದು ಸರಿಯಾದ ಸಮಯವೆಂದು ಕಪಿಲ್ ನಿರ್ಧರಿಸಿದ್ದರಂತೆ. ಕಪಿಲ್ ಡಿಸೆಂಬರ್ 12, 2018ರಂದು ಜಲಂಧರ್‌ನಲ್ಲಿ ಗಿನ್ನಿ ಚತ್ರತ್ ಅವರನ್ನು ವಿವಾಹವಾದರು.
ಕಾಮಿಡಿ ಶೋ ಹೊರತಾಗಿ, ಕಪಿಲ್ ಫಿರಂಗಿ ಮತ್ತು ಕಿಸ್ ಕಿಸ್ ಕೊ ಪ್ಯಾರ್ ಕರೂ ನಂತಹ ಸಿನಿಮಾಗಳಲ್ಲಿಯೂ ಕೆಲಸ ಮಾಡಿದ್ದಾರೆ .

Latest Videos

click me!