ಬೆಂಗಳೂರು(ಏ. 01) ಧಾರಾವಾಹಿಯ ಜೋಡಿ ಜೀವನದಲ್ಲೂ ಒಂದಾಗುವ ನಿರ್ಧಾರ ಮಾಡಿದೆ. ಇಷ್ಟು ದಿನ ಬಚ್ಚಿಟ್ಟಿದ್ದ ಪ್ರೀತಿಯನ್ನು ಈಗ ಸಾರಿದ್ದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ನಟ ಚಂದನ್ ಕುಮಾರ್ ಹಾಗೂ ನಟಿ ಕವಿತಾ ಗೌಡ ಹೊಸ ಬಾಳಿಗೆ ಅಡಿ ಇಡಲು ಮುನ್ನುಡಿ ಬರೆದಿದ್ದಾರೆ. ನಟ ಚಂದನ್ ಕುಮಾರ್ ಹಾಗೂ ನಟಿ ಕವಿತಾ ಗೌಡ ಅವರು ಏಪ್ರಿಲ್ 1ನೇ ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ವರ್ಷಗಳಿಂದ ಈ ಜೋಡಿ ಪ್ರೀತಿ ಮಾಡುತ್ತಿತ್ತು. ಈ ಬಗ್ಗೆ ಪ್ರಶ್ನೆ ಮಾಡಿದ್ದರೂ ಕೂಡ ಚಂದನ್ ಹಾಗೂ ಕವಿತಾ ನಾವಿಬ್ಬರೂ ಸ್ನೇಹಿತರು ಅಂತೆಲ್ಲ ಹೇಳಿದ್ದರು. ಕವಿತಾಗೌಡ ಜನ್ಮದಿನದಂದು ಮಧ್ಯರಾತ್ರಿ ಅವರ ಮನೆಗೆ ತೆರಳಿ ಚಂದನ್ ವಿಶ್ ಮಾಡಿ ಬಂದಿದ್ದರು. ವಿಶೇಷ ಉಡುಗೊರೆ ನೀಡಿದ್ದರು. ಜೋಡಿ ಒಟ್ಟಾಗಿಯೇ ಬೆಂಗಳೂರಿನ ಸುತ್ತ ಮುತ್ತದ ತಾಣಗಳಿಗೆ ಭೇಟಿ ಕೊಡುತ್ತಿತ್ತು. ಕವಿತಾ ಗೌಡ ಬಿಗ್ ಬಾಸ್ ನಲ್ಲಿಯೂ ಭಾಗವಹಿಸಿದ್ದರು. ಒಟ್ಟಿನಲ್ಲಿ ಕಿರುತೆರೆಯ ಮತ್ತೊಂದು ಜೋಡಿ ಮದುವೆ ಬಂಧನಕ್ಕೆ ಒಳಗಾಗುತ್ತಿದ್ದು ನಮ್ಮ ಕಡೆಯಿಂದಲೂ ಶುಭಾಶಯ Small Screen Marriage lakshmi baramma serial fame chandan kumar got engaged with Bigg Boss kavitha gowda ಏಪ್ರಿಲ್ ಒಂದಕ್ಕೆ ದೊಡ್ಡ ಸುದ್ದಿ ಕೊಟ್ಟ ಚಂದನ್ ಮತ್ತು ಕವಿತಾ ಗೌಡ