ಕಪಿಲ್ ಶರ್ಮಾ ಇಂದಿನಈ ಮಟ್ಟ ತಲುಪಲು ಸಾಕಷ್ಟು ಶ್ರಮವಹಿಸಿದ್ದಾರೆ. ಸ್ನೇಹಿತರೊಂದಿಗೆ ಕಾಲ ಕಳೆಯುವ ಸಮಯದಲ್ಲಿ ಕಪಿಲ್ ಕುಟುಂಬಕ್ಕಾಗಿ ಸಂಪಾದಿಸಲು ಪ್ರಾರಂಭಿಸಿದರು.
ತಂದೆಯ ಮರಣದ ನಂತರ, ಫ್ಯಾಮಿಲಿಗಾಗಿ ಅವರು ಸ್ವಲ್ಪ ಸಮಯದವರೆಗೆ ಫೋನ್ ಬೂತ್‌ನಲ್ಲಿಯೂಕೆಲಸ ಮಾಡುತ್ತಿದ್ದರು. ಆದರೆ, ಕನಸು ಮಾತ್ರ ಜೊತೆಗಿತ್ತು.
ಉತ್ತಮ ಹಾಡುಗಾರರಾಗಿದ್ದರು ಕೂಡ ಅವಕಾಶವಿರಲಿಲ್ಲ. ಈ ಕಾರಣಕ್ಕಾಗಿ, ಕಪಿಲ್ ಅವರ ಹೋರಾಟವು ಕೆಲವು ವರ್ಷಗಳವರೆಗೆ ಮುಂದುವರೆಯಿತು. ಅವಕಾಶವನ್ನು ಹುಡುಕುತ್ತಾ ದಿನಗಳನ್ನು ಕಳೆದರು.
2008 ಲ್ಲಿ ಭಾರತೀಯ ಟೆಲಿವಿಷನ್ ಒಂದು ದೊಡ್ಡ ಪ್ರಯೋಗವನ್ನು ಮಾಡಲು ನಿರ್ಧರಿಸಿ,ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್ ಎಂಬ ಕಾರ್ಯಕ್ರಮವನ್ನು ದೇಶದಲ್ಲಿ ಮೊದಲ ಬಾರಿಗೆ ಪ್ರಾರಂಭಿಸಿತು. ಅದರ ಮೂಲಕ, ಅನೇಕ ಉದಯೋನ್ಮುಖ ಸ್ಟ್ಯಾಂಡ್ ಅಪ್ ಕಾಮಿಡಿಯನ್ಸ್‌ಗೆಅವಕಾಶ ನೀಡಲಾಯಿತು.
ಆ ಕಾರ್ಯಕ್ರಮದ ಮೂರನೇ ಸಿಸನ್‌ನಲ್ಲಿ ಕಪಿಲ್ ಶರ್ಮಾ ವಿನ್ನರ್ ಆದರು.ನಂತರ ತಮ್ಮ ವೃತ್ತಿ ಜೀವನದಲ್ಲಿ ಹಾಸ್ಯದ ಬಗ್ಗೆ ಗಮನ ಹರಿಸಲು ಪ್ರಾರಂಭಿಸಿದರು. ಪರಿಣಾಮ ಕಪಿಲ್ ಕಾಮಿಡಿ ಸರ್ಕಸ್ ಟ್ರೋಫಿಯನ್ನು 6 ಬಾರಿ ಗೆದ್ದು, ರೆಕಾರ್ಡ್ ಮಾಡಿದ್ದರು. ಇದನ್ನು ಇಂದಿಗೂ ಯಾರು ಮುರಿಯಲಿಲ್ಲ.
ಇದರ ನಂತರ ಕಪಿಲ್ ಶರ್ಮಾರ ಜನಪ್ರಿಯತೆಯ ಗ್ರಾಫ್ ಸಹ ಸಮಯದೊಂದಿಗೆ ಏರುತ್ತಾ ಹೋಯಿತು. ಇವರ ಹಾಸ್ಯ ಜನರ ಮನಸ್ಸಿನಲ್ಲಿ ಮನೆ ಮಾಡಿತು.
ಕಪಿಲ್ ಶರ್ಮಾ ಹೆಚ್ಚಿನ ಅವಕಾಶಗಳನ್ನು ಪಡೆಯಲು ಪ್ರಾರಂಭಿಸಿದು. ಅನೇಕ ದೊಡ್ಡ ಶೋಗಳನ್ನು ಆಯೋಜಿಸಿದ್ದರು. ದೊಡ್ಡ ಸೆಲೆಬ್ರೆಟಿಗಳ ಜೊತೆ ವೇದಿಕೆಯನ್ನು ಹಂಚಿಕೊಂಡರು ಹಾಗೂ ಆವಾರ್ಡ್ ನೈಟ್ಸ್‌ನಲ್ಲಿ ಹೋಸ್ಟ್ ಆಗಿ ಕಾಣಿಸಿಕೊಂಡರು.
ಇದರ ನಂತರ ಕಪಿಲ್ ತಮ್ಮದೇ ಆದ ಕಾಮಿಡಿ ನೈಟ್ಸ್ ವಿತ್ ಕಪಿಲ್ ಅನ್ನು ಪ್ರಾರಂಭಿಸಿದರು. ಹಲವು ವರ್ಷಗಳಿಂದ ಪ್ರಸಾರವಾಗುತ್ತಿರುವ ಈ ಶೋ ಟಿಆರ್‌ಪಿ ಗಳಿಕೆಯಲ್ಲಿ ಸಹ ಮುಂದೆ ಇದೆ.
ಸೋನಿ ಚಾನೆಲ್‌ನಲ್ಲಿ ದಿ ಕಪಿಲ್ ಶರ್ಮಾ ಶೋ ಪ್ರಾರಂಭಿಸಿ ದೊಡ್ಡ ಯಶಸ್ಸನ್ನು ಕಂಡರು.
ಫೋನ್ ಬೂತ್‌ನಲ್ಲಿ ಕೆಲಸ ಮಾಡುವ ಮೂಲಕ ಹಣ ಸಂಪಾದಿಸಿದ ಕಪಿಲ್ ಶರ್ಮಾ, ಈಗ ಟಿವಿ ಹೀರೋ ಆಗಿದ್ದು, ಚಲನಚಿತ್ರಗಳಲ್ಲಿ ನಟಿಸುತ್ತಿದ್ದಾರೆ ಮತ್ತು ಗ್ರೇಟ್ ಕಾಮಿಡಿ ಕಿಂಗ್ ಆಗಿ ಮಾರ್ಪಟ್ಟಿದ್ದಾರೆ.
ಗಿನ್ನಿಯನ್ನು ಮದುವೆಯಾಗಿರುವ ಇವರು ಪ್ರಸ್ತುತ ಇಬ್ಬರು ಮಕ್ಕಳ ತಂದೆ. ಅಲ್ಲದೇ ತಮ್ಮ ಸಂಭಾವನೆಯನ್ನು ಕೋಟಿಗಳಲ್ಲಿ ಎಣಿಸುವ ಭಾರತೀಯ ಕಲಾವಿದನೂ ಹೌದು.