Dance Karnataka Dance ಶೋನಿಂದ ದಿಢೀರ್ ಆಗಿ ಹೊರ ಬಂದ ಪುಟ್ಟಕ್ಕನ ಮಕ್ಕಳು ಖ್ಯಾತಿಯ ಸಹನಾ!

First Published | Aug 27, 2024, 5:38 PM IST

ಇತ್ತೀಚೆಗೆ ಆರಂಭವಾದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಮೊದಲಿನ ಕೆಲವು ಎಪಿಸೋಡ್ ಗಳಲ್ಲಿ ಸ್ಪರ್ಧಿಸಿದ್ದ ಪುಟ್ಟಕ್ಕನ ಮಕ್ಕಳು ನಟಿ ಸಹನಾ ದಿಢೀರ್ ಆಗಿ ಶೋ ಬಿಟ್ಟಿರೋದಕ್ಕೆ ಕಾರಣ ಏನು?.
 

ಪುಟ್ಟಕ್ಕನ ಮಕ್ಕಳು (Puttakkana Makkalu) ಧಾರಾವಾಹಿಯಲ್ಲಿ ಸಹನಾ ಆಗಿ ನಟಿಸುತ್ತಿರುವ ಅಕ್ಷರಾ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿ ಒಂದೆರಡು ವಾರ ಭಾಗವಹಿಸಿದ್ದರು. ಇದೀಗ ದಿಢೀರ್ ಆಗಿ ಶೋನಿಂದ ಹೊರ ಬಂದಿದ್ದು, ಸಹನಾ ಜಾಗಕ್ಕೆ ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಶ್ರೀವಲ್ಲಿ ಬಂದಿದ್ದಾರೆ. 

ಶ್ರೀವಲ್ಲಿಯನ್ನು ಪರಿಚಯಿಸುವಾಗ ಅನುಶ್ರೀಯವರು ಸಹನಾ ಕಾರಣಾಂತರಗಳಿಂದ ಕಾರ್ಯಕ್ರಮದಿಂದ ಹೊರ ಹೋಗಿರೋದಾಗಿ ಅವರ ಜಾಗಕ್ಕೆ ಶ್ರೀವಲ್ಲಿ ಬಂದಿರೋದಾಗಿ ಹೇಳಿದ್ದರು. ಆದರೆ ಅವರು ಯಾವ ಕಾರಣಕ್ಕೆ ಶೋನಿಂದ ಹೊರ ಬಂದಿದ್ದರು ಅನ್ನೋದು ತಿಳಿದಿರಲಿಲ್ಲ. 

Tap to resize

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivaraj Kumar), ನಟಿ ರಕ್ಷಿತಾ ಪ್ರೇಮ್, ಮಾಸ್ಟರ್ ಚಿನ್ನಿ ಮಾಸ್ಟರ್, ವಿಜಯ್ ರಾಘವೇಂದ್ರ ಅವರು ತೀರ್ಪುಗಾರರಾಗಿ ಹಾಗೂ ಅನುಶ್ರೀ ನಿರೂಪಣೆ ಮಾಡುತ್ತಿರುವ ಈ ಕಾರ್ಯಮದಲ್ಲಿ ಕಿರುತೆರೆಯ ಹಲವಾರು ಕಲಾವಿದರು ಸ್ಪರ್ಧಿಸುತ್ತಿದ್ದಾರೆ, ಇವರ ಜೊತೆ ಅದ್ಭುತ ಡ್ಯಾನ್ಸರ್ ಗಳು ಸಹ ಹೆಜ್ಜೆ ಹಾಕುತ್ತಿದ್ದಾರೆ. ಅವರಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಅಕ್ಷರಾ (Akshara) ಕೂಡ ಒಬ್ಬರು. 

ಅಕ್ಷರಾ ಮೊದಲ ಎರಡು ವಾರಗಳಲ್ಲಿ ಡ್ಯಾನ್ಸರ್ ಹರ್ಷಿತ್ ಜೊತೆ ಡ್ಯಾನ್ಸ್ ಮಾಡುತ್ತಿದ್ದರು. ಆದರೆ ಕಳೆದ ಎರಡು ವಾರಗಳಿಂದ ಸಹನಾ ಆಲಿಯಾಸ್ ಅಕ್ಷರಾ ಕಂಡು ಬಂದಿರಲಿಲ್ಲ, ಇದರ ಜೊತೆಗೆ ಹರ್ಷಿತ್ ಕೂಡ ಡ್ಯಾನ್ಸ್ ಮಾಡಿರಲಿಲ್ಲ. ಹಾಗಾಗಿ ಎಲ್ಲರ ಮನಸಲ್ಲೂ ಯಾಕೆ ಸಹನಾ ಡ್ಯಾನ್ಸ್ ಮಾಡ್ತಿಲ್ಲ? ಏನಾಯ್ತು ಎನ್ನುವ ಪ್ರಶ್ನೆ ಕಾಡುತ್ತಿತ್ತು. 
 

ಆದರೆ ಈ ಬಗ್ಗೆ ಅಕ್ಷರಾ ಎಲ್ಲಿಯೂ ಹೇಳಿಕೊಂಡಿಲ್ಲ. ಝೀ ಕನ್ನಡದ (Zee Kannada) ಜನಪ್ರಿಯ ಕಾರ್ಯಕ್ರಮವಾದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ (Dance Karnataka Dance) ಕಾರ್ಯಕ್ರಮ ಬಿಡೋದಕ್ಕೆ ನಿರ್ದಿಷ್ಟ ಕಾರಣಗಳನ್ನ ಅಕ್ಷರಾ ಎಲ್ಲೂ ಹೇಳಿಕೊಂಡಿಲ್ಲ, ಹಾಗಾಗಿ, ಅವರು ದಿಢೀರ್ ಹೊರ ಬಂದಿದ್ದಕ್ಕೆ ಸ್ಪಷ್ಟನೆ ಸಿಕ್ಕಿಲ್ಲ. ಸದ್ಯಕ್ಕೆ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. 

ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಕಥೆ ಬಗ್ಗೆ ಹೇಳೊದಾದರೆ ಹುಟ್ಟಿದ ಮನೆಯನ್ನು ಬಿಟ್ಟು ಬೆಂಗಳೂರಿಗೆ ಬಂದಿರುವ ಸಹನಾ, ಅಲ್ಲೇ ತನ್ನದೊಂದು ಆಹಾರದ ಅಂಗಡಿ ತೆರೆಯುವ ತಯಾರಿಯಲ್ಲಿದ್ದಾಳೆ. ಇನ್ನೊಂದೆಡೆ ಪುಟ್ಟಕ್ಕ ನನ್ನ ಮಗಳು ಬದುಕಿದ್ದಾಳೆ ಎನ್ನುವ ಗಟ್ಟಿ ನಂಬಿಕೆಯಲ್ಲಿ ಮಗಳನ್ನು ಹುಡುಕಿಕೊಂಡು ಬೆಂಗಳೂರಿಗೆ ಒಬ್ಬಂಟಿಯಾಗಿ ಬಂದು ಬಿಟ್ಟಿದ್ದಾಳೆ. 
 

ನಿನ್ನೆ ಪ್ರಸಾರವಾದ ಪ್ರೊಮೋದಲ್ಲಿ ತಾಯಿ ಮಗಳು ಕೊನೆಗೂ ಭೇಟಿಯಾಗುವ ವಿಡಿಯೋ ತೋರಿಸಲಾಗಿತ್ತು, ಇದನ್ನ ನೋಡಿ ವೀಕ್ಷಕರು ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದರು. ಆದರೆ ಇದು ಬರೀ ಕನಸಾಗಿತ್ತು. ತಾನು ಏನಾದರು ಸಾಧಿಸದೇ ಯಾರ ಮುಂದೆಯೂ ಕಾಣಿಸಿಕೊಳ್ಳೋದಿಲ್ಲ ಎಂದು ದೃಢ ನಿರ್ಧಾರ ಮಾಡಿದ್ದಾಳೆ ಸಹನಾ. ತಾಯಿ ಮತ್ತು ಮಗಳ ಭೇಟಿ ಯಾವಾಗ ಆಗುತ್ತೋ ಎಂದು ಕಾಯ್ತಿದ್ದಾರೆ ವೀಕ್ಷಕರು. 

Latest Videos

click me!