ಸಿನಿಮಾ ಮುಗಿಸಿ ಮತ್ತೆ ಕಿರುತೆರೆಗೆ ಬಂದ 'ಕನ್ನಡತಿ' ರಮೋಲಾ

Published : Jun 02, 2023, 10:48 AM ISTUpdated : Jun 02, 2023, 10:55 AM IST

ಕನ್ನಡ ಕಿರುತೆಯ ಖ್ಯಾತ ನಟಿ ರಮೋಲಾ ಮತ್ತೆ ಧಾರಾವಾಹಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಅಮೃತಧಾರೆ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. 

PREV
16
ಸಿನಿಮಾ ಮುಗಿಸಿ ಮತ್ತೆ ಕಿರುತೆರೆಗೆ ಬಂದ 'ಕನ್ನಡತಿ' ರಮೋಲಾ

ಕನ್ನಡ ಕಿರುತೆಯ ಖ್ಯಾತ ನಟಿ ರಮೋಲಾ ಮತ್ತೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಕನ್ನಡತಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಹೃದಯ ಗೆದ್ದಿದ್ದ ನಟಿ ರಮೋಲಾ ಬಳಿಕ ಧಾರಾವಾಹಿಯಿಂದ ಹೊರಹೋಗಿದ್ದರು. ಇದೀಗ ಮತ್ತೆ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. 

26

ನಟಿ ರಮೋಲಾ ಸಾನ್ಯಾ ಪಾತ್ರದ ಮೂಲಕ ಖ್ಯಾತಿಗಳಿಸಿದ್ದರು. ಕನ್ನಡತಿ ಧಾರಾವಾಹಿ ದೊಡ್ಡ ಮಟ್ಟದ ಸಕ್ಸಸ್ ತಂದುಕೊಟ್ಟಿತ್ತು. ವಿಲನ್ ಆಗಿ ರಮೋಲಾ ಮಿಂಚಿದ್ದರು. ಬಳಿಕ ಆ ಧಾರಾವಾಹಿಯಿಂದ ರಮೋಲಾ ಹೊರನಡೆದರು. 

36

ಸಿನಿಮಾದಲ್ಲಿ ಅವಕಾಶ ಸಿಕ್ಕ ಕಾರಣ ಧಾರಾವಾಹಿಯಿಂದ ಹೊರಹೋದರು ಎನ್ನುವ ಮಾತು ಕೇಳಿಬಂದಿತ್ತು. ಆದರೆ ನಿಜವಾದ ಕಾರಣ ಏನೆಂದು ಬಹಿರಂಗ ಪಡಿಸಿರಲಿಲ್ಲ. ಆದರೀಗ ಮತ್ತೆ ವಾಪಾಸ್ ಆಗಿರುವುದು ಅಭಿಮಾನಿಗಳಲ್ಲಿ ಸಂತಸಕ್ಕೆ ಕಾರವಾಗಿದೆ. 

46

ಅಂದಹಾಗೆ ರಮೋಲಾ ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರಾವಾಹಿ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಅದೂ ರಶ್ಮಿಕಾ ಎನ್ನುವ ಹೆಸರಿನ ಮೂಲಕ ಎನ್ನುವುದು ವಿಶೇಷ. ಈ ಧಾರಾವಾಗಿಯ ನಾಯಕನನ್ನು ಹಣದ ಆಸೆಗಾಗಿ ಮದುವೆಯಾಗುವ ಪಾತ್ರದ ಮೂಲಕ ಕಾಣಿಸಿಕೊಂಡಿದ್ದಾರೆ. 

56

ರಶ್ಮಿಕಾ ಆಗಿ ರಮೋಲಾ ಈ ಧಾರಾವಾಹಿಯಲ್ಲಿ ಸಂಪೂರ್ಣವಾಗಿ ಕಾಣಿಸಿಕೊಳ್ಳುತ್ತಾರೋ ಅಥವಾ ಅತಿಥಿ ಪಾತ್ರದ ಮೂಲಕ ಮಾತ್ರ ಎಂಟ್ರಿ ಕೊಟ್ಟಿದ್ದಾರೋ ಎನ್ನುವುದು ಇನ್ನೂ ಬಹಿರಂಗವಾಗಿಲ್ಲ. ಆದರೆ ರಮೋಲಾ ಅವರನ್ನು ನೋಡಿ ಅಭಿಮಾನಿಗಳು ಖುಷ್ ಆಗಿದ್ದಾರೆ. 

66

ರಮೋಲಾ ಸದ್ಯ ರಿಚ್ಚಿ ಸಿನಿಮಾ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಈಗಾಗಲೇ ಹಾಡುಗಳ ಮೂಲಕ ಸದ್ದು ಮಾಡುತ್ತಿರುವ ರಿಚ್ಚಿ ಸದ್ಯದಲ್ಲೇ ಅಭಿಮಾನಿಗಳ ಮುಂದೆ ಬರಲಿದೆ. ರಮೋಲಾ ಸಿನಿಮಾದಲ್ಲೇ ಬ್ಯುಸಿಯಾಗುತ್ತಾರಾ ಅಥವಾ ಕಿರುತೆರೆಯಲ್ಲಿಕಾಣಿಸಿಕೊಳ್ಳುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.  

Read more Photos on
click me!

Recommended Stories