ಫಸ್ಟ್‌ ದೀಪಾವಳಿ ಫೋಟೋ ಹಂಚಿಕೊಂಡ ಮಧು-ನಿಖಿಲ್; ಕೋಟ್ಯಾಧಿಪತಿಗಿಂತ ಜಾಸ್ತಿ ಶೋಕಿ ಎಂದು ಕಾಲೆಳೆದ ನೆಟ್ಟಿಗರು!

First Published | Nov 1, 2024, 4:42 PM IST

ಮೊದಲ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ ಯೂಟ್ಯೂಬರ್‌. ಇನ್ನು ಏನೇನು ತೋರಿಸುವ ಪ್ಲ್ಯಾನ್‌ ಇದೆ ಎಂದು ಕಾಲೆಳೆದ ನೆಟ್ಟಿಗರು.... 
 

ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದ ಯೂಟ್ಯೂಬರ್ ನಿಖಿಲ್ ರವೀಂದ್ರ ಮತ್ತು ಮಧು ಗೌಡ ಕೆಲವು ದಿನಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 

ಮದುವೆ ಶಾಪಿಂಗ್‌ಯಿಂದ ಹಿಡಿದು ಬೀಗರ ಊಟದವರೆಗೂ ಯೂಟ್ಯೂಬ್ ಲೈವ್‌ ಲಿಂಕ್‌ನಲ್ಲಿ ತಮ್ಮ ಫಾಲೋವರ್ಸ್‌ ಜೊತೆ ಹಂಚಿಕೊಂಡಿದ್ದಾರೆ.

Tap to resize

ಮದುವೆ ನಂತರ ಬಂದಿರುವ ಮೊದಲ ಹಬ್ಬವೇ ದೀಪಾವಳಿ ಆಗಿರುವ ಕಾರಣ ಇಬ್ಬರೂ ಪಟಾಕಿ ಹೊಡೆದು ಸಂಭ್ರಮಿಸಿದ್ದಾರೆ. ಮನೆಯಲ್ಲಿ ನೆಂಟರು ಸೇರಿಕೊಂಡು ಸಿಹಿ ತಿನಿಸುಗಳನ್ನು ತಯಾರಿಸಿದ್ದಾರೆ.

'ಈ ವರ್ಷ ದೀಪಾವಳಿಯನ್ನು ನನ್ನ ಪತಿ ಜೊತೆ ಆಚರಿಸುತ್ತಿರುವೆ' ಎಂದು ಮಧು ಗೌಡ ಬರೆದುಕೊಂಡು ಇಬ್ಬರ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ.

ಚಾಕೋಲೇಟ್ ಬ್ರೌನ್‌ ಬಣ್ಣದ ಸೀರೆಯಲ್ಲಿ ಮಧು ಮಿಂಚಿದ್ದಾರೆ, ಅದೇ ಕಾಂಬಿನೇಷನ್‌ನಲ್ಲಿರುವ ಶರ್ಟ್‌ನಲ್ಲಿ ನಿಖಿಲ್ ಕಾಣಿಸಿಕೊಂಡಿದ್ದಾರೆ. ಇಬ್ಬರು ಆದಷ್ಟು ಟ್ವಿನಿಂಗ್ ಮಾಡುತ್ತಾರೆ. 

'ಅಂಬಾನಿ ಮಕ್ಕಳು ಕೂಡ ಇಷ್ಟೋಂದು ಶೋ ಆಫ್ ಮಾಡಿಲ್ಲ, ಯಾವ ಕೋಟ್ಯಾಧಿಪತಿ ಕೂಡ ನಿಮ್ಮಷ್ಟು ಶೋಕಿ ಮಾಡಿಲ್ಲ, ಮದುವೆಯಲ್ಲೂ ದುಡ್ಡು ಖರ್ಚು ಮಾಡಿಲ್ಲ' ಎಂದು ನೆಟ್ಟಿಗರು ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ. 

Latest Videos

click me!