ಪ್ರೀತಿ ವಿಚಾರ ಅಧಿಕೃತ ಮಾಡಿದ ಕಿರುತೆರೆ ನಟ, ನಟಿಯರಿವರು!

First Published | Feb 15, 2022, 3:59 PM IST

ಇತ್ತೀಚಿನ ದಿನಗಳಲ್ಲಿ ಕಿರುತೆರೆ ನಟ, ನಟಿಯರು ತಮ್ಮ ಪ್ರೀತಿ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಯಾವುದೇ ಹಿಂಜರಿಕೆ ಇಲ್ಲದೆಯೇ ಅಧಿಕೃತ ಮಾಡುತ್ತಿದ್ದಾರೆ, ಕೆಲವರು ಮದುವೆ ಫೋಟೋ ಹಂಚಿಕೊಂಡು ಅನೌನ್ಸ್‌ ಮಾಡಿದ್ದೂ ಇದೆ. ಯಾರು ಅವರೆಲ್ಲಾ?

ರಶ್ಮಿ ಪ್ರಭಾಕರ್:  ಲಕ್ಷ್ಮಿ ಬಾರಮ್ಮಾ ಚಿನ್ನು ಅಲಿಯಾಸ್ ರಶ್ಮಿ ತಮ್ಮ ಬಹುಕಾಲದ ಗೆಳೆಯ ನಿಖಿಲ್ ಭಾರದ್ವಾಜ್‌ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಪೋಟೋ ಹಂಚಿಕೊಳ್ಳುವ ಮೂಲಕ ಎಲ್ಲರಿಗೂ ಪರಿಚಯಿಸಿದ್ದಾರೆ. ಈ ವರ್ಷವೇ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ.

ಗಗನ್:  ಮಂಗಳಗೌರಿ ಮದುವೆ ಧಾರಾವಾಹಿಯ ಪೊಲೀಸಪ್ಪ ಗಗನ್ ಚಿನ್ನಪ್ಪ ಬಹುಕಾಲದ ಗೆಳತಿ ಪ್ರಾರ್ಥನಾ ಹುಟ್ಟುಹಬ್ಬಕ್ಕೆ ವಿಶ್ ಮಾಡುವ ಮೂಲಕ ಅಭಿಮಾನಗಳಿಗೆ ತಮ್ಮ ಮನದನ್ನೆಯನ್ನು ಪರಿಚಯಿಸಿಕೊಟ್ಟಿದ್ದಾರೆ. ಪ್ರಾರ್ಥನಾ ವೃತ್ತಿಯಲ್ಲಿ ಸೆಲೆಬ್ರೆಟಿ ಮೇಕಪ್ ಆರ್ಟಿಸ್ಟ್‌.

Tap to resize

ದೀಪಿಕಾ ಜಗದೀಶ್: ಕಿರುತೆರೆ ನಟಿ ದೀಪಿಕಾ ಜಗದೀಶ್ ಮತ್ತು ನಿರ್ದೇಶಕ ಸಾಗರ್ ಪುರಾಣಿಕ್‌ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಫೋಷಕರ ಒಪ್ಪಿಗೆ ಪಡೆದು ಹೊಸ ಜೀವನ ಆರಂಭಿಸಲು ಸಜ್ಜಾಗಿದ್ದಾರೆ. ಇಬ್ಬರೂ ಒಂದೇ ಬಣ್ಣದ ಔಟ್‌ಫಿಟ್‌ನಲ್ಲಿ ಮಿಂಚುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ.

ಕಾವ್ಯಾ ಗೌಡ: ಕಿರುತೆರೆಯಿಂದ ದೂರ ಉಳಿದ ಆಭರಣ ವಿನ್ಯಾಸದಲ್ಲಿ ತೊಡಗಿಸಿಕೊಂಡಿರುವ ಕಾವ್ಯಾ ಗೌಡ, ಮದುವೆ ಫೋಟೋ ಹಂಚಿಕೊಂಡು ಪತಿ ಸೋಮಶೇಖರ್‌ ಅವರನ್ನು ಪರಿಚಯಿಸಿಕೊಟ್ಟರು. ಬ್ಯುಸಿನೆಸ್‌ ಕ್ಷೇತ್ರದಲ್ಲಿ ಸೋಮಶೇಖರ್ ತೊಡಗಿಸಿಕೊಂಡಿದ್ದಾರೆ.

ದೀಪಕ್ ಮಹಾದೇವ್:  ಕಿರುತೆರೆ ನಟ ದೀಪಕ್ ಮಹಾದೇವ್ ಮತ್ತು ಕಿರುತೆರೆ ನಟಿ ಚಂದನಾ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ತಮ್ಮ ಪ್ರೀತಿ ಮತ್ತು ಮದುವೆ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡರು.

ಪ್ರಿಯಾಂಕಾ ಚಿಂಚೋಳಿ: ಮನಸ್ಸೆಲ್ಲಾ ನೀನೇ ಧಾರಾವಾಹಿ ನಟಿ ಪ್ರಿಯಾಂಕಾ ಮತ್ತು ರಾಕೇಶ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದು ಅರೇಂಜ್ಡ್ ಮ್ಯಾರೇಜ್ ಆಗಿದ್ದು ರಿಜಿಸ್ಟರ್ ಮ್ಯಾರೆಜ್ ಫೋಟೋ ಹಂಚಿಕೊಂಡು ಎಲ್ಲರಿಗೂ ಪತಿಯನ್ನು ಪರಿಚಯಿಸಿಕೊಟ್ಟರು.

Latest Videos

click me!