ಹಂಬಲ್ ಪೊಲಿಟೀಷಿಯನ್ ಚಿತ್ರದ ನಟಿ Disha Madan ಅದ್ಧೂರಿ ಸೀಮಂತ ಫೋಟೋಗಳಿವು!

Suvarna News   | Asianet News
Published : Feb 11, 2022, 03:14 PM IST

ಸ್ಯಾಂಡಲ್‌ವುಡ್‌ ನಟಿ ದಿಶಾ ಮದನ್ ಅದ್ಧೂರಿ ಸೀಮಂತ ಕಾರ್ಯಕ್ರಮ. ಎರಡನೇ ಮಗುವಿನ ನಿರೀಕ್ಷೆಯಲ್ಲಿ ನಟಿ...

PREV
17
ಹಂಬಲ್ ಪೊಲಿಟೀಷಿಯನ್ ಚಿತ್ರದ ನಟಿ Disha Madan ಅದ್ಧೂರಿ ಸೀಮಂತ ಫೋಟೋಗಳಿವು!

ಸೋಷಿಯಲ್ ಮೀಡಿಯಾ influencer ದಿಶಾ ಮದನ್ ಇದೀಗ ಬಹು ಬೇಡಿಕೆಯ ಸ್ಯಾಂಡಲ್‌ವುಡ್‌ ಮತ್ತು ವೆಬ್‌ ಸೀರಿಸ್‌ ನಟಿಯಾಗಿ ಮಿಂಚುತ್ತಿದ್ದಾರೆ.

27

ಹಂಬಲ್ ಪೊಲಿಟೀಷಿಯನ್ ನೋಗ್‌ರಾಜ್‌ (Humble politician Nograj) ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ದಿಶಾ ಅದೇ ಚಿತ್ರದ ವೆಬ್‌ ಸೀರಿಸ್‌ನಲ್ಲೂ ನಟಿಸಿದ್ದಾರೆ. 

37

ಮಿಸ್ ಮಾಲಿನಿ ಟಿವಿ ರಿಪೋರ್ಟರ್‌ ಸಿನಿಮಾ ಪಾತ್ರದಲ್ಲಿ ನಟಿಸುವಾಗಲೇ ಮೊದಲ ಮಗುವಿಗೆ ತಾಯಿಯಾಗಿದ್ದರು. ವೆಬ್ ಸೀರಿಸ್‌ನಲ್ಲಿ ನಟಿಸುವಾಗ ಎರಡನೇ ಮಗುವಿಗೆ ಗರ್ಭಿಣಿಯಾಗಿದ್ದಾರೆ.

47

ಸಂಪ್ರದಾಯದಂತೆ ಗಂಡನ ಮನೆಯಲ್ಲಿ ಅದ್ಧೂರಿಯಾಗಿ ಸೀಮಂತ ಕಾರ್ಯಕ್ರಮ ಮಾಡಲಾಗಿದೆ. ಕೆಂಪು ಬಣ್ಣದ ಇಕ್ಕತ್ ಕಾಂಚೀಪುರಂ ಸೀರೆಯಲ್ಲಿ ಕಂಗೊಳಿಸುತ್ತಿದ್ದಾರೆ ದಿಶಾ. 

57

ದಿಶಾ ಸೀರೆ ಬಗ್ಗೆ ನೆಟ್ಟಿಗರು ಪ್ರಶ್ನೆ ಕೇಳಿದ್ದಕ್ಕೆ. 'ಇದನ್ನು ನನ್ನ ಅತ್ತೆ ಗಿಫ್ಟ್ ಮಾಡಿದ್ದು, ಸದಾಶಿನಗರದಲ್ಲಿರುವ ಅಂಗಡಿ ಸಿಲ್ಕ್‌ನಲ್ಲಿ ಖರೀದಿಸಿದ್ದು. ಇದು ಅಪರೂಪದ ಕಾಂಬಿನೇಷ್‌ನಲ್ಲಿ ಬಂದಿರುವ ಏಕೈಕ ಸೀರೆ. ಇಕ್ಕತ್ ಡಿಸೈನ್‌ವುಳ್ಳ ಕಂಚಿ ಸೀರೆ,' ಎಂದು ಬರೆದುಕೊಂಡಿದ್ದಾರೆ.

67

ಮಾರ್ಚ್‌ ಮೊದಲ ವಾರದಲ್ಲಿ ದಿಶಾ ಎರಡನೇ ಮಗುವನ್ನು ಬರ ಮಾಡಿಕೊಳ್ಳಲು ಸಿದ್ಧರಾಗಿದ್ದಾರೆ. ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಆಸ್ಪತ್ರೆಗೆ ಏನೆಲ್ಲಾ ಕ್ಯಾರಿ ಮಾಡುತ್ತಾರೆ ಏನು ಅಗತ್ಯವಿದೆ ಎಂದು ಹಂಚಿಕೊಂಡಿದ್ದಾರೆ.

77

ಎರಡನೇ ಸೀಮಂತ ಕಾರ್ಯಕ್ರಮದಲ್ಲಿ ದಿಶಾ (Disha Madan), ಪತಿ ಶಶಾಂತ್ ಮತ್ತು ಮೊದಲ ಪುತ್ರ ವಿಹಾನ್ ಕೆಂಪು ಬಣ್ಣದ ಮ್ಯಾಚಿಂಗ್ ಉಡುಪು ಧರಿಸಿದ್ದಾರೆ. ಇಬ್ಬರೂ ಕುಟುಂಬದವರು ಆಭರಣ ಉಡುಗೊರೆ ನೀಡಿದ್ದಾರೆ.

Read more Photos on
click me!

Recommended Stories