ಅಬ್ಬಾ Instagramನಲ್ಲಿ ಈ ಕಿರುತೆರೆ ನಟಿಯರು ಇಷ್ಟೊಂದು ಫಾಲೋವರ್ಸ್‌ ಹೊಂದಿದ್ದಾರಾ?

First Published | Feb 15, 2022, 2:58 PM IST

ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆದುಕೊಂಡು, ಕಿರುತೆರೆಯಲ್ಲಿ ಕೆಲವರು ಮಿಂಚಿದ್ದರು, ಕಿರುತೆರೆಯಿಂದ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿರುವವರೂ ಇದ್ದಾರೆ. ಅದರಲ್ಲಿ ಈ ಟಾಪ್‌ ನಟಿಯರು ರೇಸ್‌ನಲ್ಲಿದ್ದಾರೆ.....

ಅನುಶ್ರೀ: ಕನ್ನಡ ನಿರೂಪಣೆ ಲೋಕದ ಜನಪ್ರಿಯ ನಿರೂಪಕಿ ಮತ್ತು ಚಂದನವನದ ನಟಿ ಅನುಶ್ರೀ 1.8 ಮಿಲಿಯನ್ ಫಾಲೋವರ್ಸ್‌ನ ಹೊಂದಿದ್ದಾರೆ. ಅಪ್ಪು ಅಗಲಿಕೆ ನಂತರ ತಮ್ಮ ಹೆಸರಿನ ಪಕ್ಕ ಅಪ್ಪು ಫ್ಯಾನ್ ಎಂದು ಸೇರಿಸಿಕೊಂಡಿದ್ದಾರೆ. 

ದೀಪಿಕಾ ದಾಸ್: ನಾಗಿಣಿ ಧಾರಾವಾಹಿ ಮೂಲಕ ಬಣ್ಣದ ಜರ್ನಿ ಅರಂಭಿಸಿದ ದೀಪಿಕಾ ಇದೀಗ ಯುಟ್ಯೂಬಿನಲ್ಲಿಯೂ ಪೇಜ್ ಕ್ರಿಯೇಟ್ ಮಾಡಿ, ಬ್ಯುಸಿಯಾಗಿದ್ದಾರೆ. 1.3 ಮಿಲಿಯನ್ ಫಾಲೋವರ್ಸ್ ಹೊಂದಿರುವ ದೀಪಿಕಾ ತಮ್ಮ ಬ್ರ್ಯಾಂಡ್‌ ಬಟ್ಟೆಗಳ ಮಾರಾಟ ಶುರು ಮಾಡಿದ್ದಾರೆ.

Tap to resize

ವೈಷ್ಣವಿ :ಅಗ್ನಿಸಾಕ್ಷಿ ಮೂಲಕ ಮನೆ ಮನೆಗೂ ಮಗಳಾಗಿ, ಸೊಸೆಯಾದ ಖ್ಯಾತರಾದ ವೈಷ್ಣವಿ ಗೌಡ 1 ಮಿಲಿಯನ್ ಫಾಲೋವರ್ಸ್‌ನ ಹೊಂದಿದ್ದಾರೆ. ಇವರ ಸಿನಿಮಾವೊಂದು ಬಿಡುಗಡೆಗೆ ಸಜ್ಜಾಗಿದೆ. ಹೀಗಾಗಿ ಬಿಗ್ ಬಾಸ್ ನಂತರ ಕಿರುತೆರೆಯಿಂದ ದೂರ ಉಳಿದಿದ್ದಾರೆ.

ನಿವೇದಿತಾ ಗೌಡ: ಟಿಕ್‌ಟಾಕ್‌ ಮಾಡಿಕೊಂಡು, ಬಿಗ್ ಬಾಸ್‌ಗೆ ಪ್ರವೇಶಿಸಿದ ನಿವೇದಿತಾ ಗೌಡ ಬಾರ್ಬಿ ಡಾಲ್ ಎಂಬ ಬಿರುದು ಪಡೆದುಕೊಂಡು, 1.4 ಮಿಲಿಯನ್ ಫಾಲೋವರ್ಸ್‌ನ ಪಡೆದುಕೊಂಡಿದ್ದಾರೆ. ಯುಟ್ಯೂಬ್‌ ಕ್ಷೇತ್ರದಲ್ಲಿ ಬ್ಯುಸಿಯಾಗಿದ್ದು, ಪತಿಯ ಆಲ್ಬಂ ಹಾಡುಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಾರೆ. 

ರಂಜನಿ ರಾಘವನ್: ಪುಟ್ಟಗೌರಿ ಮದುವೆ ಮೂಲಕ ಎಲ್ಲರ ಮನೆಯ ಮನದ ಗೌರಿ ಆದ ರಂಜನಿ 8 ಲಕ್ಷ ಫಾಲೋವರ್ಸ್‌ನ ಹೊಂದಿದ್ದಾರೆ. ಕನ್ನಡತಿ ಧಾರಾವಾಹಿಯಲ್ಲಿ ಬ್ಯೂಸಿಯಾಗಿದ್ದು, ಕೆಲವು ದಿನಗಳ ಹಿಂದೆ ತಮ್ಮದೇ ಪುಸ್ತಕವೊಂದನ್ನೂ ಬಿಡುಗಡೆ ಮಾಡಿದ್ದರು.

ನೇಹಾ ಗೌಡ: ಈಕೆಯನ್ನು ಹೆಸರಿಟ್ಟು ಕರೆಯುವುದಕ್ಕಿಂತ ಗೊಂಬೆ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತದೆ. ಲಕ್ಷ್ಮಿ ಬಾರಮ್ಮಾ ಗೊಂಬೆ ಈಗ ತೆಲುಗು ಧಾರಾವಾಹಿಯಲ್ಲೂ ನಟಿಸುತ್ತಿದ್ದಾರೆ. 8 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿದ್ದು, ತಮ್ಮ ಪತಿಯನ್ನು ಕೂಡ ಕಿರುತೆರೆ ಕಡೆಗೆ ಕರೆದುಕೊಂಡಿದ್ದಾರೆ. ಪತಿ ಚಂದನ್ ರಾಜ ರಾಣಿ ನಂತರ ಡ್ಯಾನ್ಸ್‌ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ.

ಮೇಘಾ ಶೆಟ್ಟಿ: ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಅನು ಸಿರಿಮನೆ ಆಗಿ ಗುರುತಿಸಿಕೊಂಡಿರುವ ಮೇಘಾ ಇನ್‌ಸ್ಟಾಗ್ರಾಂನಲ್ಲಿ 9 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ. ಟಿವಿಯಲ್ಲಿ ಗೌರಮ್ಮ ಅನು ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಬೇಡಿಕೆಯ ನಟಿ.

Latest Videos

click me!