ಬೆಂಗಳೂರು (ಡಿ. 04) ಕನ್ನಡ ಕಿರುತೆರೆಯ ಖ್ಯಾತ ನಟಿ ನಟಿ ರಶ್ಮಿ ಜಯರಾಜ್ ದಾಂಪತ್ಯ ಜೀವನಕ್ಕ ಎಂಟ್ರಿ ಕೊಡುತ್ತಿದ್ದಾರೆ. ಇತ್ತೀಚಿಗಷ್ಟೆ ನಟಿ ರಶ್ಮಿ ಜಯರಾಜ್, ರಿಚು ಎನ್ನುವವರ ಜೊತೆ ಮೈಸೂರಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದು ಸಂಭ್ರಮವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ರಶ್ಮಿ ನಿಶ್ಚಿತಾರ್ಥದ ಪೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ರಶ್ಮಿ ಮತ್ತು ರಿಚು ನಿಶ್ಚಿತಾರ್ಥ ಸಮಾರಂಭದಲ್ಲಿ ಕುಟುಂಬದವರು ಮತ್ತ ತೀರಾ ಆಪ್ತರು ಮಾತ್ರ ಭಾಗಿಯಾಗಿದ್ದರು ಎಂಬ ಮಾಹಿತಿ ಇದೆ. ನಟಿ ರಶ್ಮಿ ಬಣ್ಣದ ಲೋಕಕ್ಕೆ ಕಾಲಿಟ್ಟು 7 ವರ್ಷಗಳಾಗಿದೆ. ಈ ಮೊದಲು ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಜೊತೆ ಜೊತೆ ಧಾರಾವಾಹಿಯಲ್ಲಿ ರಶ್ಮಿ ಬಣ್ಣಹಚ್ಚಿದ್ದರು. ನಾಯಕಿಯಾಗಿದ್ದ ಆಶಿಕಾ ಚಂದ್ರಪ್ಪ ತಂಗಿಯ ಪಾತ್ರದಲ್ಲಿ ರಶ್ಮಿ ಕಾಣಿಸಿಕೊಂಡಿದ್ದರು. ಮಧುಮಗಳು, ಜಸ್ಟಮಾತ್ ಮಾತಲ್ಲಿ, ನೀ ಹಚ್ಚಿದ ಕುಂಕುಮ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ರಶ್ಮಿ ಕಾಣಿಸಿಕೊಂಡಿದ್ದಾರೆ. ಹುಡುಗ ರಿಚು ಅಮೆರಿಕದ ಫ್ಲೋರಿಡಾದಲ್ಲಿ ಪೈಲೆಟ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ. 2021 ಫೆಬ್ರವರಿಯಲ್ಲಿ ಇಬ್ಬರ ಮದುವೆ ಚೆನ್ನೈನಲ್ಲಿ ನಡೆಯಲಿದೆ ಎಂಬುದು ಮೂಲಗಳ ಮಾಹಿತಿ. ಏನೇ ಇರಲಿ ನಮ್ಮ ಕಡೆಯಿಂದ ಗುಡ್ ಲಕ್ ಹೇಳಿಬಿಡೋಣ. Kannada TV actress Rashmi Jayaraj Engaged in Mysuru. The couple will be tying the knot in Chennai. ಹಸೆಮಣೆ ಏರಲು ಮುಂದಾದ ಮತ್ತೊಬ್ಬ ಕನ್ನಡ ಕಿರುತೆರೆ ಕಲಾವಿದೆ