ಕಲರ್ಸ್ ಕನ್ನಡದಲ್ಲಿ ಶುರುವಾದ ಹೊಸ ಧಾರಾವಾಹಿಗಳಲ್ಲಿ (serial) ಒಂದು ಕರಿಮಣಿ. ಟೈಟಲ್ ಮೂಲಕವೇ ಕುತೂಹಲ ಕೆರಳಿಸಿದ ಸಿರಿಯಲ್ ನಲ್ಲಿ ನಾಯಕ ಕರ್ಣನ ಪಾತ್ರ ಎಲ್ಲರಿಗೂ ಇಷ್ಟವಾಗಿದೆ. ಈ ಪಾತ್ರದಲ್ಲಿ ನಟಿಸ್ತಿರೋ ನಟನ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.
ತನ್ನ ಎದುರು ತಪ್ಪು ನಡೆಯುತ್ತಿದ್ದರೆ ಅದನ್ನು ನೋಡಿ ಸುಮ್ಮನೆ ಕೂರುವ ಹುಡುಗನಾಗಿರದೇ, ತಪ್ಪು ಮಾಡಿದವರಿಗೆ ಬೆಂಡೆತ್ತಿಯಾದರೂ ಬುದ್ದಿ ಕಲಿಸೋ ಜಾಯಮಾನದ ಹುಡುಗ ಕರಿಮಣಿ (Karimani) ಸೀರಿಯಲ್ ನಾಯಕ ಕರ್ಣನದ್ದು.
ಸೀರಿಯಲ್ ಆರಂಭವಾದುದೇ ಕರ್ಣ ಮಾಡಿದ ದೊಡ್ಡ ಎಡವಟ್ಟಿನಿಂದ ತನ್ನ ಗೆಳಯನಿಗೆ ಆತನ ಹುಡುಗಿ ಕೈಕೊಟ್ಟು ಬೇರೆಯವರ ಜೊತೆ ಮದುವೆಯಾಗುತ್ತಿರುವ ವಿಷ್ಯ ತಿಳಿದು ಸುಮ್ಮನಿರದ ಕರ್ಣ ಸಾಹಿತ್ಯಾಳೇ ಗೆಳೆಯನ ಪ್ರೇಯಸಿ ಎಂದು ತಪ್ಪಾಗಿ ತಿಳಿದು, ಸಂಭ್ರಮದಿಂದ ನಡೆಯುತ್ತಿದ್ದ ಆಕೆಯ ಮದುವೆಯನ್ನು ನಿಲ್ಲಿಸಿ ದೊಡ್ಡ ತಪ್ಪೆಸಗಿ, ಪಶ್ಚಾತ್ತಾಪ ಪಡುತ್ತಿದ್ದಾನೆ.
ಕರ್ಣನ ಪಾತ್ರದಲ್ಲಿ ಅದ್ಭುತವಾಗಿ ನಟಿಸುತ್ತಿರುವ ನಟನ ನಿಜವಾದ ಹೆಸರು ಅಶ್ವಿನ್ (Ashwin). ತನ್ನ ಡೇರಿಂಗ್ ಸ್ವಭಾವ, ಅಮ್ಮನ ಮೇಲಿನ ಅಪಾರ ಪ್ರೀತಿ, ತನ್ನಿಂದ ತಪ್ಪಾಗಿದೆ ಎಂದು ತಿಳಿದ ಮೇಲೆ ಆ ತಪ್ಪನ್ನು ಸರಿಪಡಿಸಲು ಅವನು ಪಡುವ ಪಾಡು ಎಲ್ಲವೂ ವೀಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ.
ಎಲ್ಲೂ ಓವರ್ ಆಗದಂತೆ ತನ್ನ ಶ್ರೀಮಂತಿಕೆ, ತಪ್ಪನ್ನು ಎದುರಿಸೋ ಗುಣ, ಅಮ್ಮನ ಪ್ರಿತಿಯನ್ನು ಪ್ರದರ್ಶಿಸೋ ಅಶ್ವಿನ್ ಗೆ ಈಗಾಗಲೇ ಸಾಕಷ್ಟು ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಸರ್ ನೀವ್ಯಾಕೆ ಮೊದಲೇ ಸೀರಿಯಲ್ ಗೆ ಬಂದಿಲ್ಲ ಎಂದು ಸಹ ಕೇಳ್ತಿದ್ದಾರೆ ಜನ ಅಷ್ಟೊಂದು ಇಷ್ಟವಾಗಿದೆ ಇವರ ಪಾತ್ರ.
ಅಶ್ವಿನ್ ಬಗ್ಗೆ ಹೇಳೋದಾದದರೆ ಇಂಜಿನಿಯರ್ ಓದಿರುವ ಅಶ್ವಿನ್ ಗೆ ನಟನೆಯಲ್ಲಿ ಮೊದಲಿನಿಂದಲೇ ಆಸಕ್ತಿ ಇತ್ತು ಅನ್ನೋದನ್ನು ಅವರ ಪ್ರೊಫೈಲ್ ನೋಡಿದ್ರೇನೆ ತಿಳಿಯುತ್ತೆ. ಇವರು ರಂಗಭೂಮಿ ಕಲಾವಿದರೂ (theater artist) ಕೂಡ ಹೌದು, ಹಲವು ನಾಟಕಗಳಲ್ಲಿ ಇವರು ನಟಿಸಿದ್ದಾರೆ.
ಇನ್ನು ಅಶ್ವಿನ್ ಸೀರಿಯಲ್ ಗೆ ಕಾಲಿಡುವ ಮುನ್ನ ಕಿರುಚಿತ್ರಗಳಲ್ಲಿ (Shortfilm) ನಟಿಸಿ ಸೈ ಎನಿಸಿಕೊಂಡಿದ್ದರು. ಚದುರಂಗ, ರಾಗ ಮತ್ತು ತಾಳ ಎನ್ನುವ ಶಾರ್ಟ್ ಫಿಲಂಗಳಲ್ಲೂ ಇವರು ನಟಿಸಿದ್ದಾರೆ. ರಾಗ ಮತ್ತು ತಾಳ ಸಿನಿಮಾದಲ್ಲಿನ ಅಶ್ವಿನ್ ನಟನೆಗಾಗಿ ಮೈಸೂರು ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್ ನಲ್ಲಿ ಸ್ಪೆಷಲ್ ಜ್ಯೂರಿ ಅವಾರ್ಡ್ ಕೂಡ ಬಂದಿದೆ.
ಇನ್ನು ಫಿಟ್ನೆಸ್(fitness) ಬಗ್ಗೆ ತುಂಬಾನೆ ಗಮನ ಹರಿಸ್ತಾರೆ ಅನ್ನೋದು ಸಹ ಇವರ ಸೋಶಿಯಲ್ ಮೀಡಿಯಾ ಫೋಟೋಗಳನ್ನು ನೋಡಿದ್ರೆ ಗೊತ್ತಾಗುತ್ತೆ. ಜಿಮ್, ವರ್ಕ್ ಔಟ್ ಮಾಡೋ ಈ ಹುಡುಗ ಸಿಕ್ಸ್ ಪ್ಯಾಕ್ ಬಾಡಿ ಕೂಡ ಹೊಂದಿದ್ದಾರೆ. ಸದ್ಯಕ್ಕೆ ಕರಿಮಣಿ ವೀಕ್ಷಿಸುವ ಹೆಂಗಳೆಯರ ಕ್ರಶ್ .